ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಬಸಾಪುರ ಗ್ರಾಮದ ಹೊರಹೊಲಯದ ಕೆನಾಲ್ ನಲ್ಲಿ ಕಳೆದ ಭಾನುವಾರ ಸುಮಾರು 30 ವರ್ಷದ ಆಸುಪಾಸಿನ ಅನಾಮಧೇಯ ವ್ಯಕ್ತಿಯ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿತ್ತು.
ಈ ಕುರಿತು ಕೆನಾಲ ನೀರಿನಲ್ಲಿ ಬಿದ್ದು ಮರಣ ಹೊಂದಿರುತ್ತಾನೆ ಎಂದು ವರದಿಯಾಗಿತ್ತು. ನಂತರ ಮಾರ್ಚ 08ರಂದು ಮೃತ ವ್ಯಕ್ತಿ ಸಂಬಂಧಿಕರು ಅಣ್ಣಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅದರಂತೆ; ಮಾರ್ಚ 9ರಂದು ಪ್ರಕರಣಕ್ಕೆ ಸಂಭಂಧಿಸಿ ಇಬ್ಬರು ಆರೋಪಿಗಳ‌್ನು ಬಂಧಿಸಿದ್ದಾರೆ.
ಮೃತ ವ್ಯಕ್ತಿಯನ್ನು ರಮೇಶ ಹನುಮಂತಪ್ಪ ಕುರುಬರ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ; ಆತನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೊಳೆತ ಸ್ಥಿತಿಯಲ್ಲಿ ದೊರೆತ ಅನಾಮಧೇಯ ಮೃತನ ಹೆಸರು ವಿಳಾಸ ಪತ್ತೆ ಮಾಡಿ ಕ್ಷಿಪ್ರಗತಿಯಲ್ಲಿ ಆರೋಪಿತರನ್ನು ಬಂದಧಿಸುವಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ. ಎಮ್. ಬ್ಯಾಕೋಡ, ಹೆಚ್ಚವರಿ ಪೊಲೀಸ್ ಅಧೀಕ್ಷಕ ನಾರಾಯಣ.ಎಸ್.ಭರಮನಿ ಮತ್ತು ಪ್ರಭಾರಿ ಪೊಲೀಸ್ ಉಪಾಧೀಕ್ಷಕ ಶಿವಾನಂದ ಕಟಗಿ ಮಾರ್ಗ ದರ್ಶನದಲ್ಲಿ ನವಲಗುಂದ ವೃತ್ತದ ಸಿಪಿಐ ಆರ್.ಎಸ್. ಕಪ್ಪತ್ತನವರ, ಅಣ್ಣಿಗೇರಿ ಪಿ.ಎಸ್.ಐ ಸಿದ್ದಾರೂಡ ಆಲದಕಟ್ಟಿ ಹಾಗೂ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡ ಯಶಸ್ವಿಯಾಗಿದ್ದು, ಹಿರಿಯ ಅಧಿಕಾರಿಗಳು ಪ್ರಸಂಶನೆ ವ್ಯಕ್ತ ಪಡಿಸಿದ್ದಾರೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.