ವಿದ್ಯುತ್ ದುರಸ್ತಿ ಕಾರ್ಯ ಕೈಗೊಂಡಿದ್ದ ವೇಳೆ ಜೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡ ಘಟನೆ ರಾಯಚೂರು ನಗರದ ಹೊರವಲಯದಲ್ಲಿ ನಡೆದಿದೆ.
ಗಾಯಗೊಂಡ ಜೆಸ್ಕಾಂ ಸಿಬ್ಬಂದಿಯನ್ನು ವೀರೇಶ ಎಂದು ಗುರುತಿಸಲಾಗಿದೆ. ನಗರದ ಹೊರವಲಯದ 110 ಕೆ.ವಿ ವಡವಟ್ಟಿ ವಿದ್ಯುತ್ ಉಪಕೇಂದ್ರದ ದುರಸ್ತಿ ಕಾರ್ಯ ಮಾಡುವ ವೇಳೆ ವೀರೇಶಗೆ ಶಾಕ್ ಹೊಡೆದಿದೆ ಎನ್ನಲಾಗಿದೆ.
ಗದ್ವಾಲ್ ರಸ್ತೆಯ ದೇವಿನಗರ, ಎನ್‌ಜಿಒ ಕಾಲೋನಿ, ಬಸವನ ಬಾವಿ, ನೀರಭಾವಿಕುಂಟಾ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಉಪ ಕೇಂದ್ರದ ದುರಸ್ತಿ ಮಾಡುವಾಗ ಒಂದೇ ಕಂಬಕ್ಕೆ ಬೇರೆ ಬೇರೆ ಶಾಖೆಯ ವಿದ್ಯುತ್ ಲೈನ್ ಎಳೆದಿರುವುದು ಈ ಅವಘಡಕ್ಕೆ ಕಾರಣ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಯಚೂರು | ಸಂವಿಧಾನದಲ್ಲಿ ನಮಗೂ ಹಕ್ಕಿದೆ, ನಮಗೂ ಗೌರವ ಕೊಡಿ: ಅಕ್ಕಯ್ ಪದ್ಮಶಾಲಿ
ವಿದ್ಯುತ್ ಅವಘಡಕ್ಕೀಡಾದ ವೀರೇಶ ಅವರ ಹೊಟ್ಟೆ ಹಾಗೂ ಕಾಲಿನ ಭಾಗ ಸುಟ್ಟಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
