ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ತಂಡ ಗೆದ್ದು ಹಿನ್ನೆಲೆ ಯುವಕರ ಗುಂಪೊಂದು ಸಂಭ್ರಮಾಚರಣೆ ನಡೆಸಿದೆ. ಈ ವೇಳೆ, ಅತಿರೇಕದಿಂದ ಯುವಕರು ವರ್ತಿಸಿದ್ದು, ಅವರ ತಲೆ ಬೋಳಿಸಿ ಪೊಲೀಸರು ಕೂಡ ವಿಕೃತಿ ಮೆರೆದಿದ್ದಾರೆ.
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಸಯ್ಯಾಜಿ ಗೇಟ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಇದೀಗ, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಸಯ್ಯಾಜಿ ಗೇಟ್ ಬಳಿ ಯುವಕರು ಭಾನುವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಿದ್ದಾರೆ. ಅವರನ್ನು ತಡೆಯಲು ಬಂದ ಪೊಲೀಸರ ವಿರುದ್ಧವೂ ಯುವಕರು ದಾಂಧಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಯುವಕರನ್ನು ವಶಕ್ಕೆ ಪಡೆದ ಪೊಲೀಸರು ಅವರ ತಲೆಯನ್ನು ಬೋಳಿಸಿ, ರಸ್ತೆಯಲ್ಲಿ ಮೆರವಣಿಗೆ ನಡೆಸಿದ್ದಾರೆ. ಸಯ್ಯಾಜಿ ಗೇಟ್ ಪೊಲೀಸ್ ಠಾಣಾಧಿಕಾರಿ ಅಜಯ್ ಸಿಂಗ್ ಗುಜ್ರಾರ್ ನೇತೃತ್ವದಲ್ಲಿ ಪೊಲೀಸರು ಯುವಕರನ್ನು ಅವಮಾನಕರವಾಗಿ ಶಿಕ್ಷಿಸಿದ್ದಾರೆ. ಯುವಕರ ಮೇಲೆ ಪೊಲೀಸರು ಹಿಂಸಾತ್ಮಕ ಮತ್ತು ವಿಕೃತವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
भाजपा ही पाकिस्तानी सरकार तो नहीं?#JustAsking
— Kunal Choudhary (@KunalChoudhary_) March 11, 2025
ऐसे ही पूछ लिया,
क्युकी इनके अलावा कोई और सरकार में भारत की जीत के जश्न पर आजतक ऐसा तो कभी नहीं हुआ, जीत के जश्न पर सिर मुंडवा दिए।#MadhyaPradesh#Dewas#ChampionsTrophy #CT2025 pic.twitter.com/eg9iShW9sU
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದೇವಾಸ್‌ನ ಎಸ್‌ಪಿ ಪುನೀತ್ ಗೆಹ್ಲೋಟ್, “ಭಾರತ ತಂಡದ ಗೆಲುವನ್ನು ಯುವಕರು ಸಂಭ್ರಮಿಸಿದ್ದರು. ಅವರು ಅಪರಾಧಿಗಳಲ್ಲ; ಅವರನ್ನು ಸಾರ್ವಜನಿಕವಾಗಿ ಮೆರವಣಿಗೆ ನಡೆಸಿರುವುದು ನ್ಯಾಯಸಮ್ಮತವೂ ಅಲ್ಲ. ಪೊಲೀಸರ ಧೋರಣೆಯನ್ನು ನಾವು ಕೂಡ ಖಂಡಿಸಿದ್ದೇವೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲಿದ್ದೇವೆ” ಎಂದು ಹೇಳಿದ್ದಾರೆ.