ಬೂದಿಮುಚ್ಚಿದ ಕೆಂಡವಾಗಿರುವ ಮಣಿಪುರದಲ್ಲಿ, ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ರಾಷ್ಟ್ರಪತಿ ಆಡಳಿತ ಹೇರಿದ ಮೇಲೆ ಮಣಿಪುರದಲ್ಲಿ ಶಾಂತಿಯನ್ನು ನೆಲೆಗೊಳಿಸುವ ಭಾಗವಾಗಿ ಒಂದೊಂದಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನಾಂಗೀಯ ಹಿಂಸಾಚಾರ ಶುರುವಾಗಿ 21 ತಿಂಗಳು ಕಳೆದ ಮೇಲೆಯೂ ನಿಯಂತ್ರಣ ತಪ್ಪಿ ಘಟಿಸುತ್ತಿರುವ ಬೆಳವಣಿಗೆಗಳು ಮಣಿಪುರವನ್ನು ಯಾವ ದಿಕ್ಕಿನತ್ತ ಕರೆದೊಯ್ಯಬಹುದೆಂಬ ಆತಂಕಕ್ಕೆ ಕೊನೆಯಿಲ್ಲವಾಗಿದೆ. “ಲೂಟಿ ಮಾಡಲಾಗಿರುವ ಶಸ್ತ್ರಾಸ್ತ್ರಗಳನ್ನು ನಾಗರಿಕರು ಹಿಂತಿರುಗಿಸಬೇಕು, ಈ ಅವಧಿಯಲ್ಲಿ ವಾಪಸ್ ಕೊಟ್ಟರೆ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ” ಎಂದು ಮಣಿಪುರದ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ,…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.