ಚಿತ್ರದುರ್ಗ | ಕೂಲಿ ಕಾರ್ಮಿಕರಿಗೆ ನರೇಗಾ ಉದ್ಯೋಗಕ್ಕೆ ಒತ್ತಾಯಿಸಿ ಗ್ರಾಕೂಸ್ ಪ್ರತಿಭಟನೆ.

Date:

Advertisements

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ-ಗ್ರಾಕೂಸ್ ಕಾರ್ಯಕರ್ತರು ಚಿತ್ರದುರ್ಗ ನಗರದ ಡಿಸಿ ಕಚೇರಿ ಮುಂಭಾಗದ ಒನಕೆ ಓಬವ್ವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿತು.

‘ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾಗಿ ಕೂಲಿ ಕಾರ್ಮಿಕರಿಗೆ ನರೇಗಾ ಉದ್ಯೋಗ ನೀಡಿರುವುದಿಲ್ಲ. ಕೆಲವೆಡೆ ಕೇವಲ ಒಂದು ವಾರ ಕೆಲಸ ಕೊಡಿ ಕೊಟ್ಟು ಜಾಬ್ ಕಾರ್ಡ್ಗಳಲ್ಲಿ ಉದ್ಯೋಗ ಅವಧಿ ಮುಗಿದಿದೆ ಎಂದು ತಿಳಿಸುತ್ತಾರೆ. ಯಂತ್ರಗಳಲ್ಲಿ ಕೆಲಸ ಮಾಡುತ್ತಿದ್ದು ನೈಜಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

1001674587
ಜಿಲ್ಲಾ ಪಂಚಾಯತ್ ಮುಂಬಾಗ ಗ್ರಾಕೂಸ್ ಕಾರ್ಯಕರ್ತರ ಮಧ್ಯಾಹ್ನದ ಉಪಹಾರ

ಈ ವೇಳೆ ಮಾತನಾಡಿದ ಚಳ್ಳಕೆರೆ ತಾಲೂಕಿನ ಗ್ರಾಕೂಸ್ ಸಂಘಟನೆಯ ಓಬಯ್ಯ “ದೊಡ್ಡೇರಿ, ಪರಶುರಾಂಪುರ, ಜಾಜೂರು ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾಗಿ ಉದ್ಯೋಗ ನೀಡುತ್ತಿಲ್ಲ. ಪಿಡಿಒಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡು ಕೂಲಿ ಕಾರ್ಮಿಕರಿಗೆ ಉದ್ಯೋಗ ನಿರಾಕರಿಸುತ್ತಿದ್ದಾರೆ. ಕೆಲವೆಡೆ ಯಂತ್ರಗಳಲ್ಲಿ ಕೆಲಸಗಳಾಗುತ್ತಿದೆ. ಮೇಲಾಧಿಕಾರಿಗಳು ಗಮನಹರಿಸಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿಸಬೇಕು” ಎಂದು ಒತ್ತಾಯಿಸಿದರು.

Advertisements

ಚಳ್ಳಕೆರೆ ತಾಲೂಕಿನ ಗ್ರಾಕೂಸ್ ಸಂಘಟನೆಯ ಮಂಜಮ್ಮ ಮಾತನಾಡಿ,”ನರೇಗಾ ಪ್ರಕಾರ ಒಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗ ಅವಧಿ ದೊರಕಬೇಕು. ಆದರೆ ಅದು ನಮ್ಮ ತಾಲೂಕಿನಲ್ಲಿ ಸರಿಯಾಗಿ ಜಾರಿಯಾಗುತ್ತಿಲ್ಲ. ಅತಿ ಹೆಚ್ಚು ಮಾನವ ದಿನಗಳು ಅಲ್ಲಿ ಯಂತ್ರಗಳಿಂದ ಕೆಲಸ ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಸಿಗುತ್ತಿದೆ. ಅದರಿಂದಲೇ ಜೀವನ ಮಾಡುವ ನೈಜ ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡದೆ ವಂಚಿಸಲಾಗುತ್ತಿದೆ. ಮತ್ತು ಕೊಟ್ಟಿರುವ ಅಲ್ಪ ಸ್ವಲ್ಪ ಕೆಲಸಕ್ಕೂ ಸರಿಯಾದ ಸಮಯಕ್ಕೆ ಕೂಲಿ ಪಾವತಿಸದೆ ತಿಂಗಳಗಟ್ಟಲೆ ಅಲೆದಾಡಿಸಿ ವಂಚಿಸಲಾಗುತ್ತಿದೆ” ಎಂದು ಆರೋಪಿಸಿದರು.

1001674585
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ

ಪ್ರತಿಭಟನೆಯ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ತಿಮ್ಮಣ್ಣ, “ನರೇಗಾ ಪ್ರಕಾರ ಅಲ್ಲಿನ ಕೂಲಿಕಾರ್ಮಿಕರಿಗೆ ನೂರು ದಿನಗಳ ಉದ್ಯೋಗ ನೀಡಬೇಕು. ಸಂಘಟನೆಯವರು ನೀಡಿರುವ ಮನವಿ ಪ್ರಕಾರ ಆಯಾ ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒಗಳು ಮತ್ತು ಎಡಿಗಳ ತುರ್ತು ಸಭೆಯನ್ನು ಶುಕ್ರವಾರ ಕರೆಯುತ್ತಿದ್ದೇನೆ. ಸಂಘಟನೆಯ ಕಾರ್ಮಿಕರನ್ನು ಎದುರಿಗೆ ಕೂರಿಸಿಕೊಂಡು ಸಮಸ್ಯೆ ಇರುವ ಪಂಚಾಯತಿಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕೂಡಲೇ ನರೇಗಾ ಉದ್ಯೋಗ ನೀಡುವಂತೆ ಕ್ರಮ ಕೈಗೊಳ್ಳುತ್ತೇನೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಿ: ಯುಎಫ್‌ಬಿಯು-ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಆಗ್ರಹ.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಲ್ಲೇಶ್, ಚಿತ್ರದುರ್ಗ ತಾಲೂಕು ಸಂಚಾಲಕಿ ತೇಜೇಶ್ವರಿ, ಭಾರತಿ, ಕರಿಯಮ್ಮ, ಚಿದಾನಂದ, ಆನಂದ, ಚೆನ್ನಮ್ಮ, ನಾಗರಾಜ, ಶಿವಮ್ಮ, ಚಿತ್ತಮ್ಮ, ನೇತ್ರಾವತಿ, ರಾಮಪ್ಪ, ಕವಿತಾ, ಗೀತಮ್ಮ, ಭಾಗ್ಯಮ್ಮ, ವಿನೋದಮ್ಮ ಸೇರಿದಂತೆ ಹಲವಾರು ಗ್ರಾಕೂಸ್ ಕಾರ್ಯಕರ್ತರು ಭಾಗವಹಿಸಿದ್ದರು.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನರೇಗಾ ಕೆಲಸ, ಕೂಲಿ ವಿಳಂಬ ವಿರೋಧಿಸಿ ಗ್ರಾಕೂಸ್ ಕಾರ್ಯಕರ್ತರ ಪತ್ರ ಚಳವಳಿ

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಸಿದ್ಧೇಶ್ವರನ ದುರ್ಗಾ ಗ್ರಾಮ ಪಂಚಾಯಿತಿಯಲ್ಲಿ ನರೇಗಾ-ಉದ್ಯೋಗ...

ದಾವಣಗೆರೆ | ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸ್ವಾರ್ಥ, ಉಳ್ಳವರ ಪರ ನೀತಿ; ಆಶಾ ಹೋರಾಟದಲ್ಲಿ ಎಸ್ ಯುಸಿಐ ನ ಡಾ. ಸುನಿಲ್ ಕುಮಾರ್

"ಆಶಾ ಕಾರ್ಯಕರ್ತೆಯರು ಎತ್ತಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದೆ, ಸರ್ಕಾರ ಕೂಡಲೇ ಈ ಬೇಡಿಕೆಗಳನ್ನು...

Download Eedina App Android / iOS

X