ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೆಲವೆಡೆ ಲಘುವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ. ಮದೆನಾಡು, ಜೋಡುಪಾಲ, ದೇವಸ್ತೂರು, ಎರಡನೇ ಮೊಣ್ಣಂಗೇರಿಯಲ್ಲಿ ಬೆಳಿಗ್ಗೆ ಸರಿ ಸುಮಾರು 10-30 ರ ಆಸುಪಾಸಿನಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.
ಮನೆಯಲ್ಲಿದ್ದ ವಸ್ತುಗಳು ಅಲುಗಾಡಿವೆ, ಭಯಭೀತರಾದ ಮನೆಯವರು ಹೊರಗೆ ಓಡಿ ಬಂದಿದ್ದಾರೆ. ದೇವಸ್ತೂರು ದೇವಸ್ಥಾನದ ಬಳಿ ಲಘುವಾಗಿ ಭೂಮಿ ಕಂಪಿಸಿದೆ. ಗ್ರಂಥಾಲಯದಲ್ಲಿ ಇದ್ದವರಿಗೆ ರ್‍ಯಾಕ್ ಅಲುಗಾಡಿದ ಅನುಭವವಾಗಿದ್ದು ಭಯಪಟ್ಟಿದ್ದಾರೆ.

ಈ ಬಗ್ಗೆ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಕಾಫಿ ಕಳವು ಪ್ರಕರಣ; ನಾಲ್ವರ ಬಂಧನ
ಕೊಡಗಿನಲ್ಲಿ 2018 ಹಾಗೂ ಕಳೆದ ವರ್ಷವೂ ಕೂಡಾ ಭೂಮಿ ಕಂಪಿಸಿದ ಅನುಭವ ದಾಖಲಾಗಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.