ರಾಯಚೂರು ಕೇಂದ್ರ ರೈಲ್ವೆ ನಿಲ್ದಾಣದ ಮೂಲಕ ನಗರಕ್ಕೆ ಅಕ್ರಮವಾಗಿ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿ, 30 ಲೀಟರ್ ಸೇಂದಿ ವಶಪಡಿಸಿಕೊಂಡಿದ್ದಾರೆ.
ಮಂಗಳವಾರಪೇಟೆಯ ಕರಿಯಪ್ಪ ಹಾಗೂ ಇಂದಿರಾನಗರದ ಖಾಜಾ, ಸೇಂದಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ರಾಯಚೂರು | ಹದಿಹರೆಯದ ಮಕ್ಕಳ ಸಮಸ್ಯೆ-ಪರಿಹಾರಕ್ಕೆ ಜಾಗೃತಿ ಕೇಂದ್ರ ಆರಂಭ
ನಗರದ ರೈಲ್ವೆ ಸ್ಟೇಷನ್ ಏರಿಯಾದಲ್ಲಿ ರಾಯಚೂರು ವಲಯದ ಅಬಕಾರಿ ನಿರೀಕ್ಷಕರು, ಉಪ ಅಧೀಕ್ಷಕರ ತಂಡ ಗಸ್ತು ತಿರುಗುತ್ತಿರುವಾಗ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
