ಅವೈಜ್ಞಾನಿಕ ಕಸ ವಿಲೇವಾರಿ ವಿರುದ್ಧ ಪ್ರತಿಭಟನೆ; ಬೆಂಗಳೂರಿನಲ್ಲಿ ಮತ್ತೆ ತ್ಯಾಜ್ಯ ಸಮಸ್ಯೆ ಉಂಟಾಗುತ್ತಾ?

Date:

Advertisements

ಬೆಂಗಳೂರು ನಗರದಲ್ಲಿ ಮತ್ತೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗುವ ಸಾಧ್ಯತೆ ಕಂಡುಬಂದಿದೆ. ಕಣ್ಣೂರು, ಮಿಟ್ಟಗಾನಹಳ್ಳಿ ಕಲ್ಲು ಕ್ವಾರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸ ಸುರಿಯುವುದನ್ನು ಗ್ರಾಮಸ್ಥರು ವಿರೋಧಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಕಾರಣದಿಂದಾಗಿ ಸುಮಾರು 400ಕ್ಕೂ ಅಧಿಕ ಕಸ ವಿಲೇವಾರಿ ಲಾರಿಗಳು ಕಸ ವಿಲೇವಾರಿ ಮಾಡಲಾಗಿದೆ ಅಲ್ಲಿಯೇ ಬಾಕಿಯಾಗಿದೆ.

ರಾಜ್ಯದ ಇತರೆ ಜಿಲ್ಲೆಗಳು ಮಾತ್ರವಲ್ಲದೆ ಇತರೆ ರಾಜ್ಯಗಳಿಂದ ಉದ್ಯೋಗ, ಶಿಕ್ಷಣಕ್ಕಾಗಿ ಅದೆಷ್ಟೋ ಮಂದಿ ಬೆಂಗಳೂರಿಗೆ ಆಗಮಿಸುತ್ತಾರೆ. ರಾಜ್ಯ ರಾಜಧಾನಿಯಲ್ಲಿ ವಾತಾವರಣ, ಜೀವನಶೈಲಿಗೆ ಒಗ್ಗಿಹೋದ ಬಳಿಕ ಇಲ್ಲೇ ತಂಗುತ್ತಾರೆ. ಇವೆಲ್ಲವುದರ ನಡುವೆ ಸಾಮಾನ್ಯವಾಗಿಯೇ ಬೆಂಗಳೂರಿನಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತದೆ. ಜೊತೆಗೆ ಕುಡಿಯುವ ನೀರು ವ್ಯವಸ್ಥೆ, ಕಸ ವಿಲೇವಾರಿಯೂ ಆಡಳಿತಕ್ಕೆ ಒಂದು ಸವಾಲು. ಅದರಲ್ಲೂ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದರ ವಿರುದ್ಧ ನಿರಂತರವಾಗಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.

ಇದನ್ನು ಓದಿದ್ದೀರಾ? ಮಂಗಳೂರು | ಕಸ ವಿಲೇವಾರಿ ಘಟಕದಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆ; ಪಾಲಿಕೆ, ಜಿಲ್ಲಾಡಳಿತಕ್ಕಿಲ್ಲ ಕಾಳಜಿ!

Advertisements

ಕಸ ವಿಲೇವಾರಿ ಮಾಡುವಾಗ ಸ್ಥಳೀಯ ಜನರಿಗೆ ನಿರಂತರವಾಗಿ ದುರ್ವಾಸನೆ ಬರುವ ಸಮಸ್ಯೆ ಸಾಮಾನ್ಯವಾಗಿಯೇ ಇರುತ್ತದೆ. ಅದರೊಂದಿಗೆ ನೀರು ಕೂಡಾ ಕಲುಷಿತಗೊಳುತ್ತಿದೆ ಎಂದು ಕಣ್ಣೂರು, ಮಿಟ್ಟಗಾನಹಳ್ಳಿಯ ಗ್ರಾಮಸ್ಥರು ಹೇಳಿದ್ದಾರೆ. ಈ ರೀತಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದರಿಂದಾಗಿ ತಮಗಾಗುವ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ಮಂಗಳವಾರವೇ ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದು ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರು ದಿನಗಳಿಂದ ಸುಮಾರು 400ಕ್ಕೂ ಅಧಿಕ ಕಸ ತುಂಬಿದ ಲಾರಿಗಳು ಕಣ್ಣೂರು, ಮಿಟ್ಟಗಾನಹಳ್ಳಿ ಪ್ರದೇಶದಲ್ಲಿಯೇ ಬಾಕಿಯಾಗಿದೆ. ಈ ನಡುವೆ ನಗರದಲ್ಲಿ ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯಗಳು ಆಟೋಗಳಲ್ಲೇ ಬಾಕಿಯಾಗಿದೆ. ಕಸ ವಿಲೇವಾರಿ ಮಾಡಲು ತ್ಯಾಜ್ಯ ತುಂಬಿ ಹೊರಟ ಲಾರಿಗಳು ವಾಪಸ್ ಬಾರದ ಕಾರಣದಿಂದಾಗಿ ಈಗ ಆಟೋಗಳಲ್ಲೇ ಕಸ ಉಳಿದು ದುರ್ವಾಸನೆ ಬೀರುತ್ತಿದೆ.

ಇದನ್ನು ಓದಿದ್ದೀರಾ? ರಾಯಚೂರು | ಕಸ ವಿಲೇವಾರಿ ಘಟಕದಿಂದ ಗ್ರಾಮಸ್ಥರಿಗೆ ಸಮಸ್ಯೆ; ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಬಸನಗೌಡ ಬಾದರ್ಲಿ

ಈ ಪ್ರತಿಭಟನೆಯ ಮಧ್ಯೆಯೂ ಬೆಳಗಿನ ಜಾವ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು 30 ಲಾರಿಗಳು ಕಸ ವಿಲೇವಾರಿ ಮಾಡಿದ್ದವು ಎನ್ನಲಾಗಿದೆ. ಆದರೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಲಾರಿಗಳನ್ನು ತಡೆದಿದ್ದಾರೆ. ರಸ್ತೆಯಲ್ಲಿ ಮಣ್ಣು ಸುರಿದಿದ್ದಾರೆ. ಇದರಿಂದಾಗಿ ಸದ್ಯ ಎಲ್ಲಾ ವಾಹನಗಳು ಅಲ್ಲಿಯೇ ಬಾಕಿಯಾಗಿದೆ.

ಸ್ಥಳೀಯರ ಆರೋಪ, ಅಧಿಕಾರಿಗಳ ಪ್ರತಿಕ್ರಿಯೆ

“ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಹೆಚ್ಚಾಗಿ ದ್ರವತ್ಯಾಜ್ಞ (ಲಿಚೆಟ್) ಹೊರಬರುತ್ತಿದೆ. ಇದು ಕೆರೆ, ಬಾವಿ, ಕೊಳವೆ ಬಾವಿಗಳ ನೀರನ್ನು ಕಲುಷಿತಗೊಳಿಸುತ್ತಿದೆ. ನಾವು ಬಳಸುವ ನೀರು ಕಲ್ಮಶವಾಗಿರುವ ಕಾರಣದಿಂದಾಗಿ ನಮಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ” ಎಂದು ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.

ಆದರೆ ಅಧಿಕಾರಿಗಳು ಅವೈಜ್ಞಾನಿಕ ಕಸ ವಿಲೇವಾರಿ ಆರೋಪವನ್ನು ಅಲ್ಲಗಳೆದಿದ್ದಾರೆ. ಕೆರೆಗಳು ಕಲುಷಿತವಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯ ಪ್ರಕಾರ ದ್ರವತ್ಯಾಜ್ಯ ಕೆರೆಗಳಿಗೆ ಸೇರುತ್ತಿಲ್ಲ. ನಾವು ವೈಜ್ಞಾನಿಕವಾಗಿಯೇ ಕಸ ವಿಲೇವಾರಿ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಕ್ಕಟ್ಟಿನಲ್ಲಿ ಸಿಲುಕಿದ ಕಾರ್ಮಿಕರು

ಸ್ಥಳೀಯರ ಪ್ರತಿಭಟನೆ ಮತ್ತು ಅಧಿಕಾರಿಗಳ ಸಮರ್ಥನೆಯ ನಡುವೆ ಇದೀಗ ಇಕ್ಕಟ್ಟಿನಲ್ಲಿ ಸಿಲುಕಿರುವುದು ಕಸ ವಿಲೇವಾರಿ ಕಾಂಪ್ಯಾಕ್ಟರ್‌ಗಳ ಚಾಲಕರು. ಮಂಗಳವಾರ ಬೆಳಿಗ್ಗೆಯಿಂದ ಚಾಲಕರು ಅಲ್ಲಿಯೇ ಬಾಕಿಯಾಗಿದ್ದಾರೆ. ಲಾರಿಯನ್ನು ಬಿಟ್ಟು ಹೋಗಲೂ ಆಗದೆ, ಅಲ್ಲೇ ಇರಲೂ ಆಗದೆ ಚಾಲಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಇದನ್ನು ಓದಿದ್ದೀರಾ? ಕೊಡಗು | ಕಸ ವಿಲೇವಾರಿ ಘಟಕದಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ; ಎಚ್ಚೆತ್ತುಕೊಳ್ಳದ ಸ್ಥಳೀಯ ಆಡಳಿತ

ಕಸ ವಿಲೇವಾರಿ ಮಾಡುವ ಸ್ಥಳ ನಿರ್ಜನ ಪ್ರದೇಶವಾಗಿರುವ ಕಾರಣ ಚಾಲಕರಿಗೆ ಸರಿಯಾಗಿ ಊಟ, ನೀರು ಕೂಡಾ ಲಭಿಸುತ್ತಿಲ್ಲ. ಏನು ಬೇಕಾದರೂ ಸುಮಾರು ಎರಡು ಕಿಲೋ ಮೀಟರ್ ನಡೆದು ಹೋಗಬೇಕು. ಕಾಂಪ್ಯಾಕ್ಟರ್‌ಗಳನ್ನು ಒಳಕ್ಕೆ ಬರಲೂ ಬಿಡುತ್ತಿಲ್ಲ, ಹೊರಕ್ಕೆ ಹೋಗಲೂ ಬಿಡುತ್ತಿಲ್ಲ ಎಂದು ಚಾಲಕರು ಹೇಳಿದ್ದಾರೆ.

ಬೆಂಗಳೂರು ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಅದರಲ್ಲೂ ಕಸ ವಿಲೇವಾರಿಯನ್ನು ನಿರ್ವಹಿಸುವ ಸಂಸ್ಥೆಯ ಅವೈಜ್ಞಾನಿಕ ವಿಧಾನದಿಂದಾಗಿ ಸ್ಥಳೀಯ ಜನರು ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಕೆಲವೆಡೆ ದುರ್ವಾಸನೆಯಷ್ಟೇ ಸಮಸ್ಯೆಯಾದರೆ, ಇನ್ನೂ ಕೆಲವೆಡೆ ನೀರು ಮಾಲಿನ್ಯಗೊಳುವುದು, ಅಶುದ್ಧ ಗಾಳಿಯ ಸಮಸ್ಯೆ ಕಾಡುತ್ತಿದೆ. ತ್ಯಾಜ್ಯ ವಿಲೇವಾರಿ ಪ್ರದೇಶದ ಸುತ್ತ ವಾಸಿಸುವ ಜನರಿಗೆ ಸಾಮಾನ್ಯವಾಗಿಯೇ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಈ ಪ್ರತಿಭಟನೆ ಒಂದು ಇತ್ಯರ್ಥಕ್ಕೆ ಬರುವವರೆಗೂ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

Download Eedina App Android / iOS

X