ಬಿಟ್ಟು ಹೋದ ತಂದೆ ಮೇಲಿನ ಹಠಕ್ಕಾಗಿ ‘ಕಿಕ್ ಬಾಕ್ಸರ್’ ಆದ ಮೈಸೂರಿನ ಬೀಬಿ ಫಾತಿಮಾ

Date:

Advertisements

ಹುಟ್ಟಿದ್ದೆಲ್ಲಾ ಹೆಣ್ಣಾಯಿತೆಂದು ಪತ್ನಿ ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಬಿಟ್ಟುಹೋದ ಗಂಡನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬಕ್ಕೆ ಆಸರೆಯಾದ ಮಂಗಳಮುಖಿ ಅಕ್ರಮ್ ಪಾಷಾ ಮತ್ತು ಆ ಕುಟುಂಬದಲ್ಲಿ ಬೆಳೆದ ಹಿರಿಯ ಹೆಣ್ಮಗಳು ಬೀಬಿ ಫಾತಿಮಾಳ ಸಾಧನೆಯ ಕಲ್ಲು ಮುಳ್ಳಿನ ಹಾದಿ ರೋಚಕ.

ಮೈಸೂರಿನ ಉದಯಗಿರಿ ಮಸ್ಜಿದೇ ತೌಹೀದ್ ಬಳಿಯಿರುವ ಗಲ್ಲಿಯಲ್ಲಿ ಸಿಮೆಂಟ್ ಶೀಟಿನ ಬಾಡಿಗೆ ಕೊಠಡಿಯಲ್ಲಿರುವ ಈ ಕುಟುಂಬವನ್ನು ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರಾದ ರಶೀದ್ ವಿಟ್ಲ ಮತ್ತವರ ತಂಡ ಭೇಟಿಯಾಗಿ ಸಹಾಯಧನ ನೀಡಿ ಸನ್ಮಾನಿಸಿತು. ಅಬೂಬಕರ್ ಪುತ್ತು ಉಪ್ಪಿನಂಗಡಿ, ಮಹಮ್ಮದ್ ಟಿ.ಕೆ. ಹಾಗೂ ಉಬೈದ್ ವಿಟ್ಲ ಬಝಾರ್ ತಂಡದಲ್ಲಿದ್ದರು.

ರಶೀದ್ 1

ಬೀಬಿ ಫಾತಿಮಾ ತಾಯಿಗೆ ನಾಲ್ಕು ಹೆಣ್ಮಕ್ಕಳು. ಗಂಡು ಸಂತಾನವಿಲ್ಲ ಎಂಬ ಕಾರಣಕ್ಕೆ ಗಂಡನಾದವನು 19 ವರ್ಷದ ಹಿಂದೆ ಬಿಟ್ಟು ಹೋಗಿದ್ದ. ಇದರಿಂದ ನೊಂದ ಕುಟುಂಬ ಆ ಸಂದರ್ಭವೇ ಊರು ಬಿಟ್ಟು ಆತ್ಮಹತ್ಯೆಗೆ ಯತ್ನಿಸಿತ್ತು. ಆವಾಗ ಅವರ ನೆರವಿಗೆ ಬಂದವರು ಮಂಗಳಮುಖಿ ಬಿಕ್ಷುಕ ಅಕ್ರಮ್ ಪಾಷಾ. ಇವರು ಈ ಐದೂ ಮಂದಿಯನ್ನು ಮೈಸೂರಿಗೆ ಕರಕೊಂಡು ಬಂದು ಬಾಡಿಗೆ ಮನೆಯಲ್ಲಿಟ್ಟರು. ನಾಲ್ಕು ಮಕ್ಕಳಲ್ಲಿ ಹಿರಿಯವಳಾದ ಬೀಬಿ ಫಾತಿಮಾಳನ್ನು ದತ್ತು ತೆಗೆದುಕೊಂಡ ಮಂಗಳಮುಖಿ ಅಕ್ರಮ್ ಪಾಷಾ ಆಕೆಯ ಜೀವನ ಮತ್ತು ಸಾಧನೆಗೆ ಆಸರೆಯಾದರು. ಬಿಕ್ಷೆ ಬೇಡಿ ಸಾಕಿ ಸಲಹಿದ ಹುಡುಗಿ ಇದೀಗ ರಾಷ್ಟ್ರವೇ ಗುರುತಿಸುವ ‘ಕಿಕ್ ಬಾಕ್ಸರ್’ ಆಗಿ ಹೊರಹೊಮ್ಮಿದ್ದಾರೆ.

Advertisements

ತಂದೆಯ ತಿರಸ್ಕಾರ ಕಿಕ್ ಬಾಕ್ಸರ್ ಬೀಬಿ ಫಾತಿಮಾಳ ಈ ಹಠ ಮತ್ತು ಛಲಕ್ಕೆ ಕಾರಣ. ಗಂಡು ಮಕ್ಕಳಿಲ್ಲವೆಂದು ಬಿಟ್ಟು ಹೋದವನ ಮುಂದೆ ಗಂಡೆದೆಯಿಂದ ಬೀಗಬೇಕೆಂಬ ಕನಸು ನನಸಾಗುತ್ತಿರುವ ಸಂಭ್ರಮ ಬೀಬಿ ಫಾತಿಮಾಳದ್ದು. ಮಂಗಳಮುಖಿ ಮತ್ತು ಈ ಸಾಧಕಿ ಇಬ್ಬರೇ ಬಾಡಿಗೆ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಫಾತಿಮಾ 10ನೇ ತರಗತಿಗೆ ಓದುತ್ತಿದ್ದಾಳೆ. ಫಾತಿಮಾ ತಾಯಿ ಮತ್ತು ಇತರ ಮೂವರು ಹೆಣ್ಮಕ್ಕಳಿಗೆ ಅಕ್ರಮ್ ಪಾಷಾ ಬೇರೆಯೇ ಬಾಡಿಗೆ ಮನೆ ಮಾಡಿಕೊಟ್ಟಿದ್ದಾರೆ. ಎರಡೂ ಮನೆಯ ಬಾಡಿಗೆಯನ್ನು 65ರ ಹರೆಯದ ಅಕ್ರಮ್ ಪಾಷಾ ಅವರೇ ಬಿಕ್ಷೆ ಬೇಡಿ ಕಟ್ಟುತ್ತಿದ್ದಾರೆ.

ಮಮಮ 1

ಬೀಬಿ ಫಾತಿಮಾಳಿಗೆ ಈಗ 20ರ ಹರೆಯ. ಕೆಲ ವರ್ಷ ಕಾರಣಾಂತರದಿಂದಾಗಿ ಶಾಲೆ ಬಿಟ್ಟಿದ್ದಳು. ಕಳೆದ 12 ವರ್ಷದಿಂದ ಕಿಕ್ ಬಾಕ್ಸಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ತನಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸ್ಪರ್ಧೆ ಮಟ್ಟದಲ್ಲಿ 29 ಗೋಲ್ಡ್ ಮೆಡಲ್ ಪಡೆದಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕೈ ನೋವಿದ್ದರೂ ಎರಡು ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಮುಂದಕ್ಕೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಬೇಕೆಂಬ ಹೆಬ್ಬಯಕೆ ಆಕೆಯದ್ದು. ಜೊತೆಗೆ ತನ್ನ ಕುಟುಂಬವನ್ನು ಮತ್ತು ಸಾಕಿದ ವಯಸ್ಕರಾದ ಮಂಗಳಮುಖಿಯ ಜವಾಬ್ದಾರಿ ಬೀಬಿ ಫಾತಿಮಾ ಮೇಲಿದೆ. ಅದಕ್ಕಾಗಿ ಬಾಡಿಗೆ ಮನೆಯ ಮೇಲಿನ ಮಹಡಿಯಲ್ಲಿ ಶೀಟ್ ಹಾಕಿ ಕಿಕ್ ಬಾಕ್ಸಿಂಗ್ ಕೋಚಿಂಗ್ ಸೆಂಟರ್ ತೆರೆದು ದುಡಿಯಬೇಕೆಂಬ ಹಂಬಲ ಫಾತಿಮಾಳದ್ದು. ಆದರೆ ಇದಾವುದಕ್ಕೂ ಅವರಲ್ಲಿ ದುಡ್ಡಿಲ್ಲ. ಅದ್ಭುತ ಸಾಧಕಿಯ ಕನಸು ಕಮರದಂತೆ ನೋಡಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಸ್ವಂತ ಕಾಲಲ್ಲಿ ನಿಂತು ದುಡಿದು ಒಲಂಪಿಕ್ ತನಕ ತಲುಪಬೇಕೆಂಬ ಬೀಬಿ ಫಾತಿಮಾಳ ಕನಸು ನನಸು ಮಾಡಲು ನಾವೆಲ್ಲಾ ಸೇರಿ ಪ್ರಯತ್ನಿಸಬೇಕಿದೆ.

ಬರಹ: ರಶೀದ್ ವಿಟ್ಲ, ಮಂಗಳೂರು

WhatsApp Image 2025 03 13 at 7.24.26 AM 1
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X