ಮೈಸೂರು ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ ಅವರನ್ನು ದಲಿತ ಸಂಘರ್ಷ ಸಮಿತಿ ಬಣ ರಹಿತ (ರಿ ) ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಭೇಟಿಯಾಗಿ ಟಿ ನರಸೀಪುರದ ಏಕೈಕ ಸರ್ಕಾರಿ ಕಾರ್ಖಾನೆ ಆದ ಕೆಎಸ್ಐಸಿ ರೇಷ್ಮ ನೂಲು ತೆಗೆಯುವ ಘಟಕಕ್ಕೆ ಸೇರಿದ ಜಾಗವನ್ನ ಉಳಿಸಿ ಅಭಿವೃದ್ಧಿ ಮಾಡಿ, ನೂರಾರು ಜನರಿಗೆ ಉದ್ಯೋಗ ಕಲ್ಪಿಸಿ. ಕ್ರೀಡಾಂಗಣ ಬೇಕು ಅಂತ ಮ್ಯಾರಥಾನ್ ನಡಿಗೆ ಹೋರಾಟದ ಮೂಲಕ ಮನವಿ ಸಲ್ಲಿಸುವಾಗ ಯಾವ ಜಾಗಕ್ಕಾಗಿ ಪ್ರಸ್ತಾವನೆ ಮಾಡಲಾಗಿದೆ ಆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿ ಎಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ್ ರೆಡ್ಡಿ ” ಈಗಾಗಲೇ ಪ್ರಸ್ತಾವನೆ ಆಗಿರುವ 9ಎಕರೆ 15 ಗುಂಟೆ ಜಾಗದಲ್ಲಿ 5 ಎಕರೆ 35 ಗುಂಟೆ ಜಾಗ ಸೊಸೈಟಿಗೆ ಸೇರಿದ್ದು.ಅದಕ್ಕೆ ಸೊಸೈಟಿಯವರು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಅದು ಕ್ರೀಡಾಂಗಣ ನಿರ್ಮಾಣ ವೆಚ್ಚಕಿಂತ ಅಧಿಕವಾಗುತ್ತದೆ, ಆದ್ದರಿಂದ ಪರ್ಯಾಯ ಆಲೋಚನೆ ಮಾಡುತ್ತಿದ್ದೇವೆ ಎಂದರು. ಆದರೂ ನಿಮ್ಮ ಮನವಿಯನ್ನು ಸಕರಾತ್ಮಕವಾಗಿ ಪರಿಗಣಿಸುವುದಾಗಿ ” ಭರವಸೆ ನೀಡಿದ್ದಾರೆ.
ಜಿಲ್ಲಾ ಸಂಚಾಲಕ ಸಿ ಉಮಾ ಮಹದೇವ ಮಾತನಾಡಿ ” ಸಂಘಟನೆ ವತಿಯಿಂದ ಕೆಎಸ್ಐಸಿ ಜಾಗದಲ್ಲಿ ಕ್ರೀಡಾಂಗಣ ಮಾಡಲು ವಿರೋಧ ಇದೆ. ದಯವಿಟ್ಟು ಅದಕ್ಕೆ ಅವಕಾಶ ಮಾಡಿಕೊಬೇಡಿ ಕೆಎಸ್ಐಸಿ ಉಳಿಸಿ. ಪ್ರಸ್ತಾವನೆ ಆಗಿರುವ ಸಾರಿಗೆ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಸಹಕಾರ ಇಲಾಖೆಗೆ ಒಳಪಡುವ ಸೊಸೈಟಿಗೆ ಸೇರಿದ ಒಟ್ಟು 9ಎಕರೆ 15ಗುಂಟೆ ಎಕರೆಯಲ್ಲಿ 5.35 ಎಕರೆ ಸೊಸೈಟಿಗೆ ಸೇರಿರುವ ಜಾಗಕ್ಕೆ ಮಾತ್ರ ಹೆಚ್ಚಿನ ಹಣ ಕೇಳುತ್ತಿದ್ದಾರೆ ಅನ್ನೋ ಕಾರಣ ನೀಡಿದರೆ ಅದು ಜಿಲ್ಲಾಡಳಿತ ನೀಡುವ ಸಕಾರಣವಾಗಲ್ಲ. ಸೊಸೈಟಿ ಸರ್ಕಾರದ ಸಹಾಯ ಪಡೆದು ಜಾಗ ಪಡೆದುಕೊಂಡಿರುತ್ತಾರೆ ಅದಕ್ಕೆ ಪರ್ಯಾಯ ಪರಿಹಾರ ನೀಡಿ ಜಿಲ್ಲಾಡಳಿತ ಸೊಸೈಟಿಯ ಆಡಳಿತ ಮಂಡಳಿಯ ಮನವೊಲಿಸಿ ಅಲ್ಲಿ ಕ್ರೀಡಾಂಗಣ ಮಾಡಬೇಕು ಅದು ಎಲ್ಲಾ ರೀತಿಯಿಂದಲೂ ಸೂಕ್ತವಾದ ಜಾಗವಾಗಿದೆ.

ತಾಲ್ಲೂಕು ಆಡಳಿತದಿಂದ ಮಹನೀಯರ ಜಯಂತಿ ಕಾರ್ಯಕ್ರಮ ನಡೆಸಲು, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಕಾರ್ಯಕ್ರಮ, ಪೊಲೀಸ್ ಇಲಾಖೆಗು ಇದು ಸೂಕ್ತವಾದ ಸ್ಥಳವಾಗಿದ್ದು ವಾಯು ವಿಹಾರಿಗಳಿಗೆ , ಕ್ರೀಡಾಕೂಟ ನಡೆಸುವವರಿಗೂ ಅನುಕೂಲವಾದ ಜಾಗವಾಗಿದ್ದು ಟಿ ನರಸೀಪುರ ಜನರ ಒಕ್ಕೋರಲಿನ ಬೇಡಿಕೆಯು ಅದೇ ಆಗಿದೆ. ಆ ಸ್ಥಳ ಸೂಕ್ತವಾದ ಆಯ್ಕೆ ಎಂದು ತಿಳಿದೇ ಜನಸಾಮಾನ್ಯರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಹಲವು ಸಂಘಟನೆಗಳು ನಡೆಸಿದ ಮ್ಯಾರಥಾನ್ ನಡಿಗೆಗೆ ಅಪಾರ ಜನ ಬೆಂಬಲ ವ್ಯಕ್ತ ವಾಯಿತು ಆದ್ದರಿಂದ ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕು ತರಾತುರಿಯಲ್ಲಿ ನಿರ್ಧಾರ ಮಾಡಬಾರದು ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಸಿಲಿನ ತಾಪಕ್ಕೆ ಬರಿದಾದ ಕೆರೆಕಟ್ಟೆ; ನಾಗರಹೊಳೆಯಲ್ಲಿ ಪ್ರಾಣಿಗಳ ದಾಹ ಇಂಗಿಸಲು ಟ್ಯಾಂಕರ್ ಮೂಲಕ ನೀರು
ಮನವಿ ಕೊಡುವಾಗ ದಸಂಸ ಮುಖಂಡ ಶ್ರೀಕಾಂತ್ ಗೋಪಾಲಪುರ, ತಾಲ್ಲೂಕು ಸಂಚಾಲಕ ಕೇತುಪುರ ಶಿವಪ್ರಕಾಶ್, ಮುಖಂಡ ನಾಗೇಂದ್ರ ಯಳವರ ಹುಂಡಿ, ಕೆಎಸ್ಐಸಿ ಟಿ ನರಸೀಪುರ ಘಟಕದ ಕಾರ್ಮಿಕರ ಸಂಘದ ಕಾರ್ಯದರ್ಶಿ ಪುಟ್ಟಣ್ಣ, ಬಸವರಾಜೆ ಅರಸು, ಕಾರ್ಮಿಕ ನಿಂಗರಾಜು, ಕೆಎಸ್ಐಸಿ ಮಹಿಳಾ ಕಾರ್ಮಿಕ ಮುಖಂಡರು ಇದ್ದರು.