ನಿರ್ವಹಣೆ, ಹೂಡಿಕೆದಾರರು ಮತ್ತು ಇತರ ಮಧ್ಯಸ್ಥಿಕೆದಾರರನ್ನು ರಕ್ಷಿಸಲು ಬಂಡವಾಳ ತಿರುವು ಪ್ರಕರಣದಲ್ಲಿ ಭಾಗಿಯಾಗಿರುವ ಝೀ ಸಂಸ್ಥೆಯ ಮುಖ್ಯಸ್ಥ ಸುಭಾಷ್ ಚಂದ್ರ, ಪುತ್ರನ ವಿರುದ್ಧ ತುರ್ತು ಕ್ರಮ ಜರುಗಿಸುವಂತೆ ಮಾರುಕಟ್ಟೆ ನಿಯಂತ್ರಕ ಸೆಬಿ, ಷೇರು ಭದ್ರತೆಗಳು ಹಾಗೂ ಮೇಲ್ಮನವಿ ಮಂಡಳಿ (ಎಸ್‌ಎಟಿ)ಗೆ ನೀಡಿದ ಉತ್ತರದಲ್ಲಿ ತಿಳಿಸಿದೆ.
ಝೀ ಸಂಸ್ಥೆಯ ಅಧ್ಯಕ್ಷ ಸುಭಾಷ್ ಚಂದ್ರ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಭಾಷ್ ಚಂದ್ರ ಅವರ ಪುತ್ರ ಪುನಿತ್ ಗೋಯೆಂಕಾ ಅವರ ಅರ್ಜಿಗಳನ್ನು ವಿಲೇವಾರಿ ಮಾಡಿದ ಸೆಬಿ ತನ್ನ ಅಫಿಡವಿಟ್‌ನಲ್ಲಿ ಎಸ್‌ಎಟಿಗೆ ಉತ್ತರ ನೀಡಿದೆ.
ಜುಲೈ 6, 2022 ರಂದು ಸಲ್ಲಿಸಿದ ಶೋಕಾಸ್ ನೋಟಿಸ್‌ನಲ್ಲಿ ಯಾವುದೇ ತುರ್ತು ಕ್ರಮ ಇರಲಿಲ್ಲ ಎಂಬ ವಿಷಯವು ಸಂಪೂರ್ಣ ತಪ್ಪು ಮತ್ತು ತಪ್ಪುದಾರಿಗೆಳೆಯುವಂತಿದೆ. ನಿಯಮ ಉಲ್ಲಂಘನೆ ಮಾತ್ರವಲ್ಲದೆ ಅನೇಕ ಸುಳ್ಳು ಮಾಹಿತಿ ಮತ್ತು ತಪ್ಪುಗಳನ್ನು ಮುಚ್ಚಿಹಾಕಲು ಝೀ ಸಂಸ್ಥೆಯು ಅನೇಕ ಹೇಳಿಕೆಗಳನ್ನು ನೀಡಿದೆ” ಎಂದು ಸೆಬಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಗೀತಾ ಪ್ರೆಸ್‍ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡುವುದು ಗೋಡ್ಸೆ, ಸಾವರ್ಕರ್‌ಗೆ ಪ್ರಶಸ್ತಿ ನೀಡಿದಂತೆ: ಕಾಂಗ್ರೆಸ್ ಟೀಕೆ
ತಕ್ಷಣಕ್ಕೆ, ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವರು ಅನೇಕ ವಿಭಿನ್ನ ಯೋಜನೆಗಳು ಮತ್ತು ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದು, ಈ ಮೂಲಕ ಪಟ್ಟಿ ಮಾಡಲಾದ ಕಂಪನಿಗಳಿಗೆ ಸಾರ್ವಜನಿಕ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಸೆಬಿ ಹೇಳಿದೆ.
ಅವರು ವಿವಿಧ ಯೋಜನೆಗಳು ಮತ್ತು ವಹಿವಾಟುಗಳಲ್ಲಿ ಭಾಗಿಯಾಗಿರುವ ಎಲ್ಲ ಮಾಹಿತಿ ನಮಗೆ ಲಭ್ಯವಾಗಿದೆ. ಈ ಮೂಲಕ ಪಟ್ಟಿ ಮಾಡಿದ ಕಂಪನಿಗಳಿಗೆ ಸೇರಿದ ಅಪಾರ ಪ್ರಮಾಣದ ಸಾರ್ವಜನಿಕ ಹಣವನ್ನು ಈ ವ್ಯಕ್ತಿಗಳ ಒಡೆತನದ ಮತ್ತು ಅವರ ನಿಯಂತ್ರಣದ ಖಾಸಗಿ ಘಟಕಗಳಿಗೆ ತಿರುಗಿಸಲಾಗಿದೆ ಎಂದು ಸೆಬಿ ಎಸ್‌ಎಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.
ಜೂನ್ 15 ರಂದು, ಸೆಬಿಯ ಸಲ್ಲಿಕೆಗೆ ಜೂನ್ 19 ರಂದು ಅಥವಾ ಅದಕ್ಕೂ ಮೊದಲು ಪ್ರತಿಕ್ರಿಯಿಸುವಂತೆ ಎಸ್‌ಎಟಿ ಅವರಿಗೆ ನಿರ್ದೇಶಿಸಿತ್ತು. ನ್ಯಾಯಮಂಡಳಿಯು ಅಂತಿಮ ವಿಲೇವಾರಿಗೆ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತದೆ. ಎಸ್ಸೆಲ್ ಗ್ರೂಪ್ ಅಧ್ಯಕ್ಷ ಸುಭಾಷ್ ಚಂದ್ರ ಮತ್ತು ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಎಂಡಿ ಮತ್ತು ಸಿಇಒ ಪುನಿತ್ ಗೋಯೆಂಕಾ ಅವರು ಸೆಬಿ ಆದೇಶಕ್ಕೆ ತಡೆ ಕೋರಿ ಎಸ್‌ಎಟಿಗೆ ಮನವಿ ಸಲ್ಲಿಸಿದ್ದರು.