ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆಯಲ್ಲಿ ತಕ್ಷಶಿಲ ಟ್ರಸ್ಟ್ ನ ವತಿಯಿಂದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಮಾತನಾಡಿ ‘ ಸಮಾಜದಲ್ಲಿನ ಉದ್ವಿಗ್ನತೆಯ ಉಪಶಮನಕ್ಕೆ ಧಮ್ಮ ಮಾರ್ಗವೇ ಮದ್ದು ‘ ಎಂದರು.
” ಬುದ್ದರ ವಿಚಾರಗಳು ವೈಜ್ಞಾನಿಕ ಹಾಗೂ ವೈಚಾರಿಕ ತಳಹದಿಯ ಮೇಲೆ ನಿಂತಿವೆ. ಅಂತಹ ಜ್ಞಾನದ ಬೆಳಕನ್ನು ಪ್ರಸರಣದ ಅಗತ್ಯತೆ ತುಂಬಾ ಇದೆ. ಹಾಗಾಗಿ ಈ ಗಡಿ ನಾಡು ಪ್ರದೇಶದಲ್ಲಿ ತಕ್ಷಶಿಲ ಟ್ರಸ್ಟ್ ಟ್ರಸ್ಟ್ ರಚನೆ ಗೊಂಡಿದೆ. ಇದೇ ಮಾರ್ಚ್ 16 ರಂದು ದರ್ಶನ್ ಕನ್ವೆನ್ಷನಲ್ ಹಾಲ್ ನಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ” ಎಂದು ಹೇಳಿದರು.
ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣ ಸಿರಿ ಭಂತೇಜಿ ದಿವ್ಯ ಸಾನಿಧ್ಯ ವಹಿಸಿವರು. ಉದ್ಘಾಟನೆ ಯನ್ನು ಶಾಸಕ ಹೆಚ್ ಎಂ ಗಣೇಶ್ ಪ್ರಸಾದ್ ನೆರವೇರಿಸಲಿದ್ದಾರೆ . ಸಮಾರಂಭದ ಅಧ್ಯಕ್ಷತೆಯನ್ನು ತಕ್ಷಶಿಲ ಬುದ್ದ ವಿಹಾರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ ವಹಿಸಲಿದ್ದಾರೆ . ಮಾಜಿ ಸಚಿವ ಎನ್ ಮಹೇಶ ಲೋಗೋ ಅನಾವರಣ ಮಾಡುವರು . ಸಂಸದ ಸುನೀಲ್ ಬೋಸ್ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದು,ನಟ ಹಾಗೂ ಪ್ರಗತಿಪರ ಚಿಂತಕ ಚೇತನ್ ಪುಷ್ಪಾರ್ಚನೆ ಮಾಡಲಿದ್ದಾರೆ. ಮಾಜಿ ಶಾಸಕ ಸಿ ಎಸ್ ನಿರಂಜನ್ ಕುಮಾರ್ ವರದಿ ಬಿಡುಗಡೆ ಗೊಳಿಸಲಿದ್ದು, ವಿಶೇಷ ಉಪವಾಸವನ್ನು ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಡಾ ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಅಕ್ಕ ಐ ಎ ಎಸ್ ಅಕಾಡೆಮಿ ನಿರ್ದೇಶಕರಾದ ಡಾ ಶಿವಕುಮಾರ್ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕಿ ಡಾ ಲಕ್ಷ್ಮಮ್ಮ , ಬಹುಜನ ಚಿಂತಕ ಹ ರಾ ಮಹೇಶ್ , ಉದ್ಯಮಿ ಹಾಗೂ ಸಮಾಜ ಸೇವಕಿ ಸುಜಾತ ಗಿರೀಶ್ ಬಾಬು ಸೇರಿದಂತೆ ಇನ್ನಿತರರು ಇರಲಿದ್ದಾರೆಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವ
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಆರ್ ಸೋಮಣ್ಣ , ಖಜಾಂಚಿ ವಕೀಲ ಮಾಧು ಕೋಟೆಕೆರೆ , ಸಹ ಕಾರ್ಯದರ್ಶಿ ಆರ್ ಡಿ ಉಲ್ಲಾಸ್ , ನಿರ್ದೇಶಕರುಗಳಾದ ಕಿಲಗೆರೆ ಬಸವಣ್ಣ , ಮಲ್ಲಿಕಾರ್ಜುನ ಬೇರಂಬಾಡಿ , ಎಂ ಶ್ರೀನಿವಾಸ್ , ಮುತ್ತಣ್ಣ , ಜೆ ಸ್ವಾಮಿ ,ಶಿರಯ್ಯ ಮುದ್ದಯ್ಯ , ಮಲ್ಲೇಶ್ ,ರಘು ಅಣ್ಣೂರು ,ಹಾಗೂ ಶ್ರೀ ಪಾದ ಇದ್ದರು.