ನಕಲಿ ಔಷಧಿ ಜಾಲ ತಡೆಗಟ್ಟಲು ಕ್ರಮ, ಕೇಂದ್ರ ಸರ್ಕಾರಕ್ಕೂ ಪತ್ರ: ಸಚಿವ ದಿನೇಶ್ ಗುಂಡೂರಾವ್

Date:

Advertisements

ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲವನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಔಷಧ ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸಿ 2023-24ನೇ ಸಾಲಿನಲ್ಲಿ 10 ಮೊಕದ್ದಮೆಗಳನ್ನು ಮತ್ತು 2024-25ನೇ ಸಾಲಿನಲ್ಲಿ 5 ಮೊಕದ್ದಮೆಗಳನ್ನು ಔಷಧ ಮತ್ತು ಕಾಂತಿವರ್ಧಕ ನಿಯಮಾವಳಿಗಳ ಅಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ 87 ಫಾರ್ಮಸಿಗಳನ್ನು ಸಸ್ಪೆಂಡ್ ಮಾಡಿ 3 ಪಾರ್ಮಸಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಡಾ.ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಖಂಡಗಳಲ್ಲಿ ಈ ನಕಲಿ ಔಷಧ ತಯಾರಿಕ ಘಟಕಗಳು ಇವೆ. ನಕಲಿ ಔಷದಿ ಜಾಲವು ರಾಜ್ಯದ ಸಮಸ್ಯೆಯಲ್ಲದೇ ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು ಇದನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೂಡ ಪತ್ರ ಬರೆಯಲಾಗಿದೆ” ಎಂದು ಹೇಳಿದರು.

“ರಾಜ್ಯದ ಕೆಎಸ್‍ಎಂಎಸ್ ಸಿಎಲ್ ಸಂಸ್ಥೆಗೆ ಆರೋಗ್ಯ ಇಲಾಖೆ ಸಲ್ಲಿಸಿರುವ ಹಿಂದಿನ ವಾರ್ಷಿಕ Annual indent 2022-23 ಅನುಮೋದಿತವಾಗಿರುವ 732 ಔಷಧಿಗಳಲ್ಲಿ 475 ಔಷಧಿಗಳಿಗೆ ಖರೀದಿ ಆದೇಶ ನೀಡಿ ಔಷಧಗಳನ್ನು ಎಲ್ಲ ಔಷಧ ಉಗ್ರಾಣಗಳಿಗೆ ಸರಬರಾಜು ಮಾಡಲಾಗಿದೆ. ಉಗ್ರಾಣಕ್ಕೆ ಸರಬರಾಜುಗೊಂಡು ಆರೋಗ್ಯ ಸಂಸ್ಥೆಗಳ ಬೇಡಿಕೆಯಂತೆ ವಿತರಿಸಿ, ದಾಸ್ತಾನು ಕೊರತೆ ಆಗಿರುವ Essention-91, Desirable-40 ಸೇರಿ 131 ಔಷಧಿಗಳ ಕೊರತೆಯಾಗಿದೆ. ಜನಸಾಮಾನ್ಯರಿಗೆ ಔಷಧಿಯನ್ನು ನೀಡುವುದು ಮೂಲ ಜವಬ್ದಾರಿಯಾಗಿದ್ದು ಈಗಾಗಲೇ ಅಗತ್ಯವಿರುವ ಕಡೆಗೆ ಔಷಧಿಗಳನ್ನು ಸಬರರಾಜು ಮಾಡಲಾಗುತ್ತಿದೆ. ಕೆಲವೊಂದು ಕಡೆ ಔಷಧಗಳ ಕೊರತೆಯಾದರೆ ಬೇರೆ ಜಿಲ್ಲೆಗಳಿಂದ ಪಡೆದು ನೀಡಲು ಕ್ರಮ ವಹಿಸಲಾಗುತ್ತಿದೆ” ಎಂದು ಉತ್ತರಿಸಿದರು.

Advertisements

“ಪ್ರಸ್ತುತ ಆರೋಗ್ಯ ಸಂಸ್ಥೆಗಳು ತುರ್ತು ಸಂದರ್ಭದಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಗಳನ್ನು ತಮ್ಮ ಮಟ್ಟದಲ್ಲಿ ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಸ್ಥಳೀಯ ರಾಷ್ಟ್ರೀಯ ಉಚಿತ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ಸಂಸ್ಥೆಗಳು ಕೊರತೆ ಔಷಧಿಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆರೋಗ್ಯ ಸಂಸ್ಥೆಗಳ ಹಂತದಲ್ಲಿ ಕ್ರಮ ವಹಿಸಲಾಗುತ್ತಿದೆ. ತ್ವರಿತವಾಗಿ ಅವಶ್ಯವಿರುವ ಔಷಧಿಗಳನ್ನು ಖರೀದಿಸಲು ಕೆಎಸ್‍ಎಂಎಸ್‍ಸಿಎಲ್ ನ ಹಿಂದಿನ ಸರಬರಾಜುದಾರರಿಂದ 25% ಹೆಚ್ಚುವರಿ ಪ್ರಮಾಣದಲ್ಲಿ ಖರೀದಿಸಲು ಕ್ರಮ ವಹಿಸಲಾಗುತ್ತಿದೆ ಹಾಗೂ 23 ಔಷಧಿಗಳನ್ನು 4G Excemption ಮೂಲಕ KAPL (ಕರ್ನಾಟಕ ಆ್ಯಂಟಿ ಬಯೋಟಿಕ್ಸ್ ಅಂಡ್ ಫಾರ್ಮ್ ಸ್ಯೂಟಿಕಲ್ಸ್ ಲಿಮಿಟೆಡ್) ನಿಂದ ಒಟ್ಟು 9.50ಕೋಟಿ ಮೌಲ್ಯದ ಔಷಧಿಗಳನ್ನು ಖರೀದಿಸಲು ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ. ಕೆಲವೊಂದು ಔಷಧಿಗಳ ಕೊರತೆಗೆ ಕಾರಣ ಟೆಂಡರುಗಳಲ್ಲಿ ಯಾರೂ ಭಾಗವಹಿಸದೇ ಇರುವುದು. ಈ ಔಷಧಿಗಳ ಮೌಲ್ಯ ಮತ್ತು ಪ್ರಮಾಣ ಕಡಿಮೆ ಇರುವುದರಿಂದ ಹಲವಾರು ಬಾರಿ ಟೆಂಡರ್ ಆಹ್ವಾನಿಸದರೂ ಯಾರೂ ಸ್ಪಂದಿಸಿಲ್ಲ. ಸರ್ಕಾರ ನಿಯಮಾನುಸಾರ ಔಷಧಿಗಳ ಖರೀದಿ ಮಾಡುತ್ತಿದೆ ಅಲ್ಲದೇ ಔಷಧಿ ಸರಬರಾಜು/ಖರೀದಿ ಪ್ರಕ್ರಿಯೆಯ ಟೆಂಡರ್‌ನ ಷರತ್ತುಗಳನ್ನು ಸರಳೀಕರಣ ಮಾಡಿ ಔಷಧಿಗಳನ್ನು ಸರಬರಾಜು ಮಾಡಲು ಹೆಚ್ಚಿನ ಬಿಡ್ ದಾರರು ಭಾಗವಹಿಸಲು ಕ್ರಮ ವಹಿಸಲಾಗುತ್ತಿದೆ” ಎಂದು ಹೇಳಿದರು.

“ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ ಒಟ್ಟು 112 ಔಷಧ ಪರಿವೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 08 ಔಷಧ ಪರಿವೀಕ್ಷಕರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಉಳಿದ 104 ಹುದ್ದೆಗಳು ಖಾಲಿ ಇರುತ್ತವೆ. 2018ರಲ್ಲಿ 83 ಪರಿವೀಕ್ಷಕರ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದ ಮೇರೆಗೆ 67 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ದಿನಾಂಕ: 23-06-2021ರಂದು ಇಲಾಖೆಗೆ ಆಯ್ಕೆಪಟ್ಟಿಯನ್ನು ಕಳುಹಿಸಲಾಗಿದೆ. ಸದರಿ ಆಯ್ಕೆಪಟ್ಟಿಯನ್ನು ವಿವಿಧ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಪ್ರಸ್ತುತ ಸುಪ್ರೀಂ ಕೋರ್ಟ್‌ದಲ್ಲಿ ಮೊಕದ್ದಮೆ ದಾಖಲಾಗಿದ್ದು ವಿಚಾರಣಾ ಹಂತದಲ್ಲಿರುತ್ತದೆ” ಎಂದು ವಿವರಿಸಿದರು.

“ಇಲಾಖೆಯಲ್ಲಿ ಖಾಲಿ ಇರುವ ಔಷಧ ಪರಿವೀಕ್ಷಕರ ಹುದ್ದೆಗಳ ಪ್ರಭಾರವನ್ನು ವೃತ್ತ ಕಚೇರಿಯ ಸಹಾಯಕ ಔಷಧ ನಿಯಂತ್ರಕರಿಗೆ ವಹಿಸಲಾಗಿರುತ್ತದೆ. ಸಹಾಯಕ ಔಷಧ ನಿಯಂತ್ರಕರುಗಳು ಅವರ ಕರ್ತವ್ಯಗಳ ಜೊತೆಯಲ್ಲಿ ಔಷಧ ಪರಿವೀಕ್ಷಕರ ಕೆಲಸವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X