ಬೀದರ್‌ | ಮಾ.23ರಂದು ಬೊಮ್ಮಗೊಂಡೇಶ್ವರ ಉತ್ಸವ : ಭಿತ್ತಿಪತ್ರ ಬಿಡುಗಡೆ

Date:

Advertisements

ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ಮಾರ್ಚ್ 23ರಂದು ಹಮ್ಮಿಕೊಂಡಿರುವ ಮಹಾತ್ಮ ಬೊಮ್ಮಗೊಂಡೇಶ್ವರ ಉತ್ಸವದ ಭಿತ್ತಿಪತ್ರ ಹಾಗೂ ಕರಪತ್ರ ಬೀದರ್ ನಗರದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.

‌ʼಸಮಾಜದ ಹಿರಿಯ ಮುಖಂಡ ಭೀಮಸಿಂಗ್ ಮಲ್ಕಾಪುರ ಮಾತನಾಡಿ, ʼಕನ್ನಡ ನಾಡಿಗೆ ಬೊಮ್ಮಗೊಂಡೇಶ್ವರ ಕೊಡುಗೆ ಅನನ್ಯ. ಅವರ ಜೀವನ ಮತ್ತು ಸಾಧನೆಯನ್ನು ಜನರಿಗೆ ತಿಳಿಸಲು ನಗರದಲ್ಲಿ ಬೊಮ್ಮಗೊಂಡೇಶ್ವರ ಉತ್ಸವ ಆಯೋಜಿಸಿರುವುದು ಪ್ರಸಂಸನೀಯʼ ಹೇಳಿದರು.

ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿ, ʼಬೊಮ್ಮಗೊಂಡೇಶ್ವರ ಉತ್ಸವದ ಪ್ರಚಾರಕ್ಕೆ ಚಾಲನೆ ಕೊಡಲಾಗಿದೆ. ಜಿಲ್ಲೆಯ ತಾಲ್ಲೂಕು ಕೇಂದ್ರಗಳು, ಗ್ರಾಮೀಣ ಪ್ರದೇಶಗಳಲ್ಲಿ ಭಿತ್ತಿಪತ್ರ, ಬ್ಯಾನರ್ ಅಳವಡಿಕೆ, ಕರಪತ್ರ ವಿತರಣೆ, ಸಭೆ, ಸಮಾರಂಭಗಳ ಮೂಲಕ ಉತ್ಸವದ ಪ್ರಚಾರ ಮಾಡಲಾಗುವುದು. ಅರ್ಥಪೂರ್ಣ ಉತ್ಸವದ ಸಂಘಟನೆಗೆ ಸಿದ್ಧತೆ ನಡೆಸಲಾಗುತ್ತಿದೆʼ ಎಂದು ಹೇಳಿದರು.

Advertisements

ಬೊಮ್ಮಗೊಂಡೇಶ್ವರ ಉತ್ಸವದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರಪತ್ರ ಬಿಡುಗಡೆಗೊಳಿಸಿದ ಗಾಂಧಿಗಂಜ್‍ನ ಕನಕ ಭವನದ ಅಧ್ಯಕ್ಷ ನಾಗರಾಜ ನಂದಗಾಂವ್ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಅನ್ನಭಾಗ್ಯ ಯೋಜನೆ : ನಗದು ಬದಲು 5ಕೆ.ಜಿ. ಅಕ್ಕಿ ವಿತರಣೆ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಮೈಲಾರ ಮಲ್ಲಣ್ಣ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಕೆ.ಡಿ. ಗಣೇಶ, ಬೊಮ್ಮಗೊಂಡೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೊಗಲಪ್ಪ ಚಿಲ್ಲರ್ಗಿ, ಡಾ. ಉದಯಸಿಂಗ್, ಪ್ರಮುಖರಾದ ದೇವಪ್ಪ ಚಾಂಬೋಳೆ, ಎಂ.ಪಿ. ವೈಜಿನಾಥ, ವಿಜಯಕುಮಾರ ಬ್ಯಾಲಹಳ್ಳಿ, ಬಸವರಾಜ ಬಾವಗಿ, ರಮೇಶ ಮರ್ಜಾಪುರ, ಬಸವರಾಜ ನಂದಗಾಂವ್, ರಾಮಣ್ಣ ಗಾದಗಿ, ಸಂಜುಕುಮಾರ ತಳಘಟ, ಬಾಬು ಅಲ್ಲೂರೆ, ಬಕ್ಕಪ್ಪ ನಾಗೂರೆ, ಸುನೀಲ್ ಚಿಲ್ಲರ್ಗಿ, ಗೋವಿಂದ ದುರ್ಗೆ, ಪ್ರಕಾಶ್ ಚಿಲ್ಲರ್ಗಿ, ಕಲ್ಲಪ್ಪ ಶಹಾಪುರ, ಅಶೋಕ ನ್ಯಾಮತಾಬಾದ್, ಪ್ರಲ್ಹಾದ್ ಚಿಟ್ಟಾವಾಡಿ, ಪಂಢರಿ ಜಮಾದಾರ್, ನರಸಪ್ಪ ಸೋಲಪುರ, ಆನಂದ ಸೋಲಪುರ, ಸಿದ್ದು ಬಾವಗಿ, ಸುಧಾಕರ ಮಲ್ಕಾಪುರ, ಅನಿಲ್ ಚಿಲ್ಲರ್ಗಿ, ವಿಜಯಕುಮಾರ ಮಲ್ಕಾಪುರೆ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X