ಶಹಾಪುರ ತಾಲ್ಲೂಕಿನ ಆಲ್ದಾಳ ಗ್ರಾಮದ ರೈತರ ಹೊಲಗಳಿಗೆ ಸಮಪರ್ಕ ವಿದ್ಯುತ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಮಲ್ಲನಗೌಡ ಮಾತನಾಡಿ, ʼಆಲ್ದಾಳ ಗ್ರಾಮದ ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್ ಸೌಲಭ್ಯ ನೀಡದ ಕಾರಣಕ್ಕೆ ರೈತರು ಪರದಾಡುತ್ತಿದ್ದಾರೆ. ರೈತರು ಜಮೀನುಗಳಿಗೆ ನೀರು ಬಿಡಲು ಕೊಳವೆಬಾವಿ, ಬಾವಿಗಳ ಪಂಪಸೇಟ್ ಮೇಲೆ ಅವಲಂಬಿತರಾಗಿದ್ದು, ವಿದ್ಯುತ್ ಸೌಲಭ್ಯವಿಲ್ಲದೆ ರೈತರ ಜಮೀನಿನಲ್ಲಿ ಅಳವಡಿಸಿರುವ ಪಂಪಸೇಟ್ ಮೋಟಾರ್ ಸುಟ್ಟು ಹೋಗುತ್ತಿವೆʼ ಎಂದು ಆರೋಪಿಸಿದರು.
ಗ್ರಾಮಕ್ಕೆ ನಿರಂತರ ವಿದ್ಯುತ್ ಸೌಲಭ್ಯ ಒದಗಿಸಬೇಕು. ಗ್ರಾಮದ ಸಾರ್ವಜನಿಕರಿಗೂ ಸಮರ್ಪಕ ವಿದ್ಯುತ್ ನೀಡಬೇಕು. ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಜೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಶಹಾಪುರ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಸೇರಿದಂತೆ ಪ್ರಮುಖರಾದ ರಾಜು ನಾಯಕ್, ರಂಗಣ್ಣ ದೊರೆ, ಭೀಮರೆಡ್ಡಿ, ರವಿ ನಾಯಕ್ ಸಾದ್ಯಾಪೂರ ಹಾಗೂ ಮತ್ತಿತರರು ಇದ್ದರು.
ಸಿಟಿಜನ್ ಜರ್ನಲಿಸ್ಟ್ : ವೆಂಕಟೇಶ ದೋರಿ ಆಲ್ದಾಳ