ಭಾರತದ ‘ರಾ’ ಸಂಸ್ಥೆಯ (ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ) ನೂತನ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಅವರನ್ನು ಸೋಮವಾರ (ಜೂನ್ 19) ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.
ಇದು ದೇಶದ ಹೊರಗಡೆ ಗೂಢಚರ್ಯೆ ನಡೆಸುವ ಭಾರತದ ಸಂಸ್ಥೆಯಾಗಿದೆ.
ಇದೇ ಜೂನ್ 30ಕ್ಕೆ ಆ ಹುದ್ದೆಯಿಂದ ಸಮಂತ್ ಕುಮಾರ್ ಗೋಯೆಲ್ ಅವರು ನಿರ್ಗಮಿಸುತ್ತಾರೆ. ಆ ಸ್ಥಾನವನ್ನು ರವಿ ಸಿನ್ಹಾ ಅವರು ಅಲಂಕರಿಸಲಿದ್ದಾರೆ.
ರವಿ ಸಿನ್ಹಾ ಅವರು 1988 ನೇ ಬ್ಯಾಚ್‌ನ ಛತ್ತೀಸಗಢ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ರವಿ ಅವರು ಈಗಾಗಲೇ ಎರಡು ದಶಕಗಳ ಕಾಲ ‘ರಾ’ ಸಂಸ್ಥೆಯಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರು ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಹಲವು ರಾಜ್ಯಗಳಲ್ಲಿ ಮುಂಗಾರು ಜೋರು; ತಮಿಳುನಾಡಿನ ಹಲವೆಡೆ ಶಾಲೆಗಳಿಗೆ ರಜೆ, ರಾಜಸ್ಥಾನದಲ್ಲಿ 5 ಸಾವು
ರವಿ ಸಿನ್ಹಾ ಅವರು ಪ್ರಸ್ತುತ ಸಂಪುಟ ಕಾರ್ಯಾಲಯದ ವಿಶೇಷ ಕಾರ್ಯದರ್ಶಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.