ದಲಿತ ಸಂಘರ್ಷ ಸಮಿತಿ (ದಸಂಸ)ಯ ಹೆಸರು ಬಳಸಿಕೊಳ್ಳಲು ನಾವು ಮಾತ್ರ ಅರ್ಹರು. ಆ ಹೆಸರನ್ನು ಇತರೆ ದಲಿತ ಹೋರಾಟ ಸಂಘಟನೆಗಳು ಬಳಸಿಕೊಳ್ಳಬಾರದೆಂದು ದಸಂಸ ರಾಜ್ಯ ಸಂಚಾಲಕ ಗುರುಮೂರ್ತಿ ತಾಕೀತು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮಗೆ ಮಾತ್ರ ದಸಂಸ ಬಳಸಿಕೊಳ್ಳಲು ಎಂದು ನ್ಯಾಯಾಲಯ ಆದೇಶಿದೆ. ದಲಿತ ಸಂಘರ್ಷ ಸಮಿತಿ ಹೆಸರನ್ನು ಹಲವು ಮಂದಿ ತಮ್ಮದು ಎಂಬಂದೆ ಬಿಂಬಿಸಿಕೊಳ್ಳುತ್ತಿದ್ದಾರೆ. ಸಂಘಟನೆಯ ಹೆಸರು ಬಳಸಬಾರದು. ಬಳಸಿದಲ್ಲಿ ರಾಜ್ಯಾದ್ಯಂತ ಪ್ರಕರಣ ದಾಖಲಿಸಲಾಗುವುದು. ಹೈಕೋರ್ಟ್ ನಲ್ಲಿ ಕೆವಿಟ್ ಹಾಕಲಾಗುವುದು” ಎಂದು ಎಚ್ಚರಿಸಿದ್ದಾರೆ.
ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ವಕೀಲ ಸೀತಾರಾಮ್ ಮಾತನಾಡಿ, “ದಲಿತ ಸಂಘರ್ಷ ಸಮಿತಿ ಹೆಸರನ್ನ ಪ್ರೊ.ಕೃಷ್ಣಪ್ಪ 74/75 ಎಂದು ನೋಂದಣಿ ಮಾಡಿಸಿದ್ದರು. ಗುರುಮೂರ್ತಿ 2008 ರವರೆಗೆ ಆಡಿಟ್ ಮಾಡಿಸುತ್ತಿದ್ದರು. ಸತ್ಯ ಮತ್ತು ಇತರರು ಡಿಆರ್‌ಗೆ ಪತ್ರ ಬರೆದು ತಕರಾರು ಮಾಡಿದ್ದರು. ತಕರಾರಿಗೆ ಸಮಿತಿ ರಚಿಸಲಾಗಿತ್ತು. ಸಮಿತಿಯು ಸಾಧ್ಯವಿಲ್ಲದ ಪ್ರಕರಣ ಎಂದು ಬರೆದು, ನ್ಯಾಯಾಲಯದಲ್ಲಿ ಫೈಟ್ ಮಾಡಲು ಸೂಚಿಸಿತ್ತು. ಗುರುಮೂರ್ತಿ ಅವರು ಭದ್ರಾವತಿಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಭದ್ರಾವತಿಯ ನ್ಯಾಯಾಲಯ ಗುರುಮೂರ್ತಿ ಪರ ನ್ಯಾಯ ಪ್ರಕಟಿಸಿದ್ದರು. ಸತ್ಯರವರು ಕೆಳ ನ್ಯಾಯಾಲಯದ ಆದೇಶವನ್ನ ಪ್ರಶ್ನಿಸಿ ಹೈಕೋರ್ಟ್ ಗೆ ಹೋಗಿದ್ದರು. ಹೈಕೋರ್ಟ್ ಕಂಡಿಷನ್ ಮೇಲೆ ಸ್ಟೇ ನೀಡುತ್ತದೆ. ಕಂಡಿಷನ್ ಪ್ರಕಾರ ಗುರುಮೂರ್ತಿಗೆ ಸಂಘಟನೆ ಹೆಸರು ಬಳಸಿಕೊಳ್ಳಲು ಮಾತ್ರ ಅಧಿಕಾರವಿದ್ದು, ಇತರರು ಬಳಸಿಕೊಳ್ಳದಂತೆ ಸೂಚಿಸಿತ್ತು” ಎಂದರು.
“ನಂತರ ಹೈಕೋರ್ಟ್ ವಿಚಾರಣೆ ನಡೆಸಿ ಕೆಳ ನ್ಯಾಯಾಲಯದ ಆದೇಶವನ್ನ ಎತ್ತಿಹಿಡಿದಿದೆ. ಇದರ ಮಧ್ಯೆ ಸತ್ಯರವರು ಭದ್ರಾವತಿಯಲ್ಲಿ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ್ದರು. ಡಿವೈಎಸ್‌ಪಿ ಆಕ್ಷೇಪಣಾರ್ಹ ಹಿಂಬರಹ ಕೊಟ್ಟು ಈ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿದ್ದರು. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದರು.
ಇದನ್ನೂ ಓದಿ: ಶಿವಮೊಗ್ಗ | ಮೀಟರ್ ಬಳಸದ ಆಟೋಗಳು; ಕಣ್ಮುಚ್ಚಿ ಕುಳಿತ ಪೊಲೀಸರು
ದಲಿತ ಸಂಘರ್ಷ ಸಮಿತಿಯ ಭದ್ರಾವತಿ ವಕೀಲ ಶಿವಕುಮಾರ್, ದಸಂಸ ಜಿಲ್ಲಾ ಸಂಚಾಲಕ ಏಳುಕೋಟಿ, ಬೊಮ್ಮನ್ ಕಟ್ಟೆ ಕೃಷ್ಣಪ್ಪ, ಮೂಗೂರು ಪರಶುರಾಮ್, ಚಿಕ್ಕಮರಡಿ ರಮೇಶ್, ನಾಗರಾಜ್, ದೌರ್ಜನ್ಯ ಸಮಿತಿ ಸದಸ್ಯ ಹನುಮಂತಪ್ಪ ಯಡವಾಲ, ಹರಗೆ ರವಿ, ಹನುಮಂತಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
