ಬೆಳ್ಳಂಬೆಳಗ್ಗೆ ವಿಜಯನಗರ ಜಿಲ್ಲಾ ಕೇಂದ್ರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಉಪಲೋಕಾಯುಕ್ತ ಬಿ.ವೀರಪ್ಪರವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, “ರೈತರ ಸಮಸ್ಯೆ, ಸ್ವಚ್ಛತೆ ಮತ್ತು ಕುಡಿಯುವ ನೀರು ಸೇರಿದಂತೆ ನಮ್ಮ ರೈತರು ವಿಶ್ರಾಂತಿ ಪಡೆಯಲು ಯಾವುದೇ ರೀತಿಯ ಸೂಕ್ತ ವ್ಯವಸ್ಥೆ ಇಲ್ಲ. ಇವೆಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿಗೆ ಸೂಚಿಸಿದರು.

ಇದನ್ನೂ ಓದಿ: ವಿಜಯನಗರ | ರೈತರ ಹಿತಕ್ಕಾಗಿ ಕಾಲ್ನಡಿಗೆ ಜಾಥಾ; ನ್ಯಾ.ಸಂತೋಷ ಹೆಗಡೆ ಬೆಂಬಲ
ʼರೈತರ ಬೆಳೆಗೆ ಸೂಕ್ತ ಬೆಲೆ ಒದಗಿಸಿಕೊಡುವಲ್ಲಿ ಮತ್ತು ಅವರ ಬೆಳೆಯ ತೂಕದಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲʼ ಎಂದು ನಂಬಿರುವ ಅಮಾಯಕ ರೈತರಿಗೆ ಎಪಿಎಂಸಿ ಕಚೇರಿಯ ಸ್ಕೇಲ್‌ನಲ್ಲಿ 2 ಕೆಜಿಯಷ್ಟು ವ್ಯತ್ಯಾಸ ಕಂಡು ಬಂದಿದ್ದು, ಸ್ಕೇಲ್ ಸೀಜ್ ಮಾಡಿ ಪ್ರಕರಣ ದಾಖಲಿಸಲು ಸೂಚಿಸಿ ತೂಕ ಮತ್ತು ಅಳತೆ ಅಧಿಕಾರಿ ಅಮೃತ ಚೌವ್ಹಾಣ್ ಗೆ ವರದಿ ನೀಡಲು ಆದೇಶಿಸಿದರು.

