ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಸಾಣೇಹಳ್ಳಿಯ ಸಂಯುಕ್ತಾಶ್ರಯದಲ್ಲಿ ಹಾಗೂ ಶ್ರೀ ಪಂಡಿತಾರಾಧ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಏ.12 ರಿಂದ 28ರವರೆಗೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಮಕ್ಕಳ ವಿವಿಧ ಕಲೆ, ಸಾಂಸ್ಕೃತಿಕ ತರಭೇತಿಗಾಗಿ ಮಕ್ಕಳ ಹಬ್ಬ (ಬೇಸಿಗೆ ಶಿಬಿರ) ವನ್ನು ಆಯೋಜಿಸಲಾಗಿದೆ.

ಮಕ್ಕಳ ಹಬ್ಬದಲ್ಲಿ ಚಿತ್ರಕಲೆ, ಯೋಗಾಸನ, ವೀರಗಾಸೆ, ಕೋಲಾಟ, ಮಣ್ಣಾಟ, ರಂಗಾಟಗಳು, ದಿನಕ್ಕೊಂದು ಪದ್ಯ ರಚನೆ, ಮುಖವಾಡ ತಯಾರಿ, ಒಂದು ದಿನದ ಪ್ರವಾಸ, ಕಥೆ ಹೇಳುವ ಮತ್ತು ಕಥೆ ಕಟ್ಟುವ ತರಗತಿ, ಮಕ್ಕಳ ಸಿನಿಮಾ ವೀಕ್ಷಣೆ, ಮಕ್ಕಳ ತೇರು, ಪರಿಸರದ ಮೇಲಿನ ಉಪನ್ಯಾಸ, ನೃತ್ಯರೂಪಕಗಳು, 3 ಅಥವಾ 4 ನಾಟಕಗಳ ತಯಾರಿ,ಪ್ರದರ್ಶನ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಲೆಗಳ ತರಭೇತಿ, ಸ್ಪರ್ಧೆ ಮುಂತಾದ ಚಟುವಟಿಕೆಗಳು ಇರುತ್ತವೆ.

ಬೇಸಿಗೆ ಶಿಬಿರದಲ್ಲಿ 10 ರಿಂದ 14 ವರ್ಷದ ವಯಸ್ಸಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಸಾಣೇಹಳ್ಳಿ ಶ್ರೀಮಠದಲ್ಲಿ ಉಳಿಯಬೇಕು. ಅವರಿಗೆ ಊಟ, ವಸತಿಯ ಸೌಲಭ್ಯ ಕಲ್ಪಿಸಲಾಗುವುದು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8861043553, 9972007015 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.