ಬಣ್ಣದೋಕುಳಿ ಬಳಿಕ ಸ್ನಾನ ಮಾಡಲೆಂದು ಹೊಂಡಕ್ಕೆ ಇಳಿದ ನಾಪತ್ತೆಯಾದ ಘಟನೆ ನಿನ್ನೆ ರಾಯಚೂರು ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸಮೀಪದ ಜಾಗೀರವೆಂಕಟಪೂರು ಗ್ರಾಮದ ಸೋಮನಗೌಡ (45) ನಾಪತ್ತೆಯಾದ ವ್ಯಕ್ತಿ. ಸೋಮನಗೌಡ, ಗ್ರಾಮ ಪಂಚಾಯತಿ ಸದಸ್ಯೆಯ ಪತಿಯಾಗಿದ್ದಾನೆ. ರಸ್ತೆ ಕಾಮಗಾರಿಗಾಗಿ ಮಣ್ಣು ತೆಗೆದಿದ್ದರಿಂದ ನಿರ್ಮಾಣವಾದ ಗುಂಡಿಯಲ್ಲಿ ಸ್ನಾನ ಮಾಡಲು ಜಿಗಿದಿದ್ದು, ನಂತರ ಮೇಲೆ ಬಾರದೆ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ರಾಯಚೂರು | ಹೋಳಿ ಆಚರಿಸಿ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ನೀರುಪಾಲು
ಒಂದೆಡೆ ಹೊಂಡದಲ್ಲಿ ಸಿಲುಕಿರುವ ಶಂಕೆ ಇದ್ದರೆ.. ಇನ್ನೊಂದೆಡೆ ಮೊಸಳೆ ಹಿಡಿದಿರುವ ಅನುಮಾನ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಮೊಸಳೆ ಕುರಿಯೊಂದನ್ನು ಹಿಡಿದಿತ್ತು. ಹೊಂಡದಲ್ಲಿ ಮೊಸಳೆ ಇರುವ ಬಗ್ಗೆ ಜನರಲ್ಲಿ ಹಲವು ದಿನಗಳಿಂದ ಆತಂಕವಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
