ಒಬ್ಬ ಮಹಿಳೆಯಾಗಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾತೆ ಮಹಾದೇವಿ ಅವರು ಮಾಡಿದ ಸಾಧನೆ ಅವಿಸ್ಮರಣೀಯ. ಕೂಡಲಸಂಗಮ, ಬಸವಕಲ್ಯಾಣ ಕ್ಷೇತ್ರಗಳ ಅಭಿವೃದ್ಧಿಗೆ ಮಾತಾಜಿ ಅವರ ಕೊಡುಗೆ ಅನುಪಮವಾಗಿದೆ ಎಂದು ನಿವೃತ್ತ ಶಿಕ್ಷಕಿ ಶಕುಂತಲಾ ನಿಡೋದೆ ಹೇಳಿದರು.
ಔರಾದ್ ಪಟ್ಟಣದ ವಚನ ಸಮೂಹ ಸಂಸ್ಥೆ ಕಛೇರಿಯಲ್ಲಿ ಪೂಜ್ಯ ಮಾತೆ ಮಹಾದೇವಿ ಜಯಂತ್ಯುತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಮಹಾನಂದಾ ಎಂಡೆ ಮಾತನಾಡಿ, ‘ಮಹಿಳೆಯರು ಪ್ರತಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಸುಧಾಮೂರ್ತಿ ಅವರಂತಹ ವ್ಯಕ್ತಿತ್ವ ನಮ್ಮೆಲ್ಲರಿಗೂ ಆದರ್ಶವಾಗಿದೆ’ ಎಂದರು.
ಶರಣಪ್ಪ ನಾಗಲಗಿದ್ದೆ ಮಾತನಾಡಿ, ‘ಲಿಂಗಾಯತ ಧರ್ಮಕ್ಕೆ ಮಾನ್ಯತೆ ವಿಚಾರದಲ್ಲಿ ಮಾತಾಜಿಯವರ ಕೊಡುಗೆ ಅತ್ಯಮೂಲ್ಯವಾಗಿದ್ದು, ಲಿಂಗಾನಂದ ಸ್ವಾಮೀಜಿ ಅವರಂತೆ ಬಸವತತ್ವ ಪ್ರಸಾರಕ್ಕೆ ಹಲವು ಯೋಜನೆಗಳು ರೂಪಿಸಿರುವ ಮಾತಾಜಿ ಕಾರ್ಯ ಅನುಕರಣೀಯ’ ಎಂದರು.
ಈ ಸುದ್ದಿ ಓದಿದ್ದೀರಾ? ಔರಾದ್ ಸೀಮೆಯ ಕನ್ನಡ | ಹಂತಿ ಹೊಡಿಲಾಕ್ ನಮ್ ಎತ್ಗೊಳ್ ಖಾಲಿನೇ ಅವಾ!
ಡಾ.ವೈಜಿನಾಥ ಬುಟ್ಟೆ, ಡಾ.ನಾಗೇಶ ಕೌಟಗೆ, ಮಲ್ಲಿಕಾರ್ಜುನ , ಮಾರ್ತಾಬಾಯಿ, ಗಂಗಾ ನಾಗಲಗಿದ್ದೆ, ಸುಜಾತಾ ಟಂಕಸಾಲೆ, ಪ್ರೇಮಾ ಕೋಟೆ, ಜ್ಯೋತಿ ಗುಡುರೆ, ಪ್ರಭಾವತಿ ಭಾಲೇಕರ್, ಜಯಶ್ರೀ ಡೊಂಬಾಳೆ, ಕಾವೇರಿ ಸ್ವಾಮಿ, ತೇಜಸ್ವಿ ಚಾಂದಕವಠೆ, ಸೌಭಾಗ್ಯವತಿ ಸೇರಿದಂತೆ ಇನ್ನಿತರರಿದ್ದರು.