ಇತ್ತೀಚೆಗೆ ತಮಿಳುನಾಡು ಸರ್ಕಾರವು 2025-26ರ ಬಜೆಟ್ ಅನ್ನು ಮಂಡಿಸಿದೆ. ಬಜೆಟ್ ಪತ್ರದಲ್ಲಿ ಅಧಿಕೃತ ರೂಪಾಯಿ ಚಿಹ್ನೆ(₹)ಯನ್ನು ತಮಿಳು ಅಕ್ಷರ ‘ரூ'(ರೂ)ವಿನೊಂದಿಗೆ ಬದಲಾಯಿಸಿದೆ. ಈ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಗರು ಡಿಎಂಕೆ ಸರ್ಕಾರವನ್ನು ಟೀಕಿಸಿದ್ದಾರೆ. ಈ ನಡುವೆ ನಿರ್ಮಲಾ ಸೀತಾರಾಮನ್ ತನ್ನ ಹಳೆಯ ಪೋಸ್ಟ್ಗಳಲ್ಲಿ ತಮಿಳಿನ ‘ரூ’ ಚಿಹ್ನೆಯನ್ನು ಬಳಸಿದ್ದ ಸ್ಕ್ರೀನ್ಶಾಟ್ಗಳು ವೈರಲ್ ಆಗಿದೆ.
ಈ ಬಗ್ಗೆ ಇತ್ತೀಚೆಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಕೇಂದ್ರ ವಿತ್ತ ಸಚಿವೆ, “ಡಿಎಂಕೆ ಸರ್ಕಾರ ತಮಿಳುನಾಡು ಬಜೆಟ್ 2025-26ರಲ್ಲಿ ರೂಪಾಯಿ ಚಿಹ್ನೆಯಾದ ₹ ಅನ್ನು ಬದಲಾಯಿಸಿದೆ ಎಂದು ತಿಳಿದುಬಂದಿದೆ. ಡಿಎಂಕೆಗೆ ₹ ಚಿಹ್ನೆಯಿಂದ ಸಮಸ್ಯೆಯಿದ್ದರೆ, 2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಚಿಹ್ನೆಯನ್ನು ಅಧಿಕೃತವಾಗಿ ಬಳಸಿದಾಗ ಯಾಕೆ ವಿರೋಧಿಸಿಲ್ಲ? ಆ ಸಂದರ್ಭದಲ್ಲಿ ಡಿಎಂಕೆ ಯುಪಿಎ ಸರ್ಕಾರದ ಭಾಗವಾಗಿತ್ತಲ್ಲವೇ” ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಡಿಎಂಕೆ ಪ್ರಾದೇಶಿಕತೆಯ ಸೋಗಿನಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದೆ ಎಂಬ ಆರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ‘₹’ ಸಂಕೇತ ಕೈಬಿಟ್ಟ ತಮಿಳುನಾಡು ಸರ್ಕಾರ, ಎಂ ಕೆ ಸ್ಟಾಲಿನ್ನಿಂದ ದಿಟ್ಟ ಕ್ರಮ: ಕರವೇ ನಾರಾಯಣಗೌಡ
ನಿರ್ಮಲಾ ಸೀತಾರಾಮನ್ ಅವರ ಈ ಎಕ್ಸ್ ಪೋಸ್ಟ್ಗೆ ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್, ಪ್ರತಿಕ್ರಿಯೆ ನೀಡಿದ್ದಾರೆ. 2017ರಲ್ಲಿ ನಿರ್ಮಲಾ ಸೀತಾರಾಮನ್ ಅವರು ತಮಿಳು ‘ரூ'(ರೂ)ಚಿಹ್ನೆಯನ್ನು ಹಲವು ಬಾರಿ ಎಕ್ಸ್ ಪೋಸ್ಟ್ನಲ್ಲಿ ಬಳಸಿದ್ದ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಸ್ಕ್ರೀನ್ಶಾಟ್ಗಳು ಎಕ್ಸ್ನಲ್ಲಿ, ಇತರೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
But why ma'am why. pic.twitter.com/Xfh8yk9Nxb
— Mohammed Zubair (@zoo_bear) March 13, 2025
Thiru @annamalai_k Why use 'ரூ' symbol in your tweets instead of ₹ rupee symbol sir? https://t.co/Fxls2yytjz pic.twitter.com/UXrUsz7fxW
— Mohammed Zubair (@zoo_bear) March 13, 2025
ನೆಟ್ಟಿಗರು ಹೇಳುವುದೇನು?
“ಡಿಎಂಕೆ ಸರ್ಕಾರ ಯಾವ ಚಿಹ್ನೆಯನ್ನು ಬಳಸಿದ್ದಕ್ಕೆ ನಿರ್ಮಲಾ ಸೀತಾರಾಮನ್ ಅವರು ಡಿಎಂಕೆ ಸರ್ಕಾರವನ್ನು ಟೀಕಿಸುತ್ತಿದ್ದರೋ, ಅದೇ ಚಿಹ್ನೆಯನ್ನು ಈ ಹಿಂದೆ ಅವರು ಬಳಸಿ ಈಗ ಸಿಕ್ಕಿಬಿದ್ದಿದ್ದಾರೆ. ಈ ಟ್ವೀಟ್ಗಳನ್ನು ಖಂಡಿತವಾಗಿಯೂ ಶೀಘ್ರವಾಗಿ ಡಿಲೀಟ್ ಮಾಡಬಹುದು. ಈಗಲೇ ಶೇರ್ ಮಾಡಿ, ಸೇವ್ ಮಾಡಿ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
Nirmala Sitharaman caught using the same symbol for Rupee that she is criticising DMK for using 🤣🤣🤣🤣🤣🤣🤣
— Roshan Rai (@RoshanKrRaii) March 13, 2025
These tweets will soon be deleted.
Share and save it. pic.twitter.com/3OIHFePep6
“ನಿರ್ಮಲಾ ಸೀತಾರಾಮನ್ ಮತ್ತು ಅಣ್ಣಾಮಲೈ ಅವರು ಈ ಹಿಂದೆ ತಮಿಳಿನಲ್ಲಿ ಟ್ವೀಟ್ ಮಾಡುವಾಗ ரூ ಚಿಹ್ನೆಯನ್ನು ಬಳಸಿದ್ದಾರೆ. ಈಗ ಡಿಎಂಕೆ ಈ ಚಿಹ್ನೆ ಬಳಸಿದಾಗ ಬಿಜೆಪಿ ಅಳುತ್ತಿದೆ. ಅಜೆಂಡಾವನ್ನು ನಾಶ ಮಾಡಲು ಈ ಟ್ವೀಟ್ಗಳನ್ನು ಹಂಚಿಕೊಳ್ಳಿ” ಎಂದು ಇನ್ನೋರ್ವ ನೆಟ್ಟಿಗರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
