ಆಂಧ್ರಪ್ರದೇಶದ ಇಂಡಿಯನ್ ಮ್ಯಾಜಿಕ್ ಅಸೋಸಿಯೇಷನ್ (ಐಎಂಎ) ಕೊಡಮಾಡುವ ಪ್ರತಿಷ್ಠಿತ ಗೋಲ್ಡನ್ ಮ್ಯಾಜಿಷಿಯನ್ ಪ್ರಶಸ್ತಿಯು ಈ ಬಾರಿ ಮಂಗಳೂರಿನ ಜಾದೂ ಕಲಾವಿದ ಕುದ್ರೋಳಿ ಗಣೇಶ್ ಅವರ ಮುಡಿಗೇರಿದೆ.
ಗಣೇಶ್ ಅವರು ಜಾದೂ ಕಲೆಯಲ್ಲಿ ಮಾಡಿರು ವಿವಿಧ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿಯ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರೀಯ ಜಾದೂ ದಿನಾಚರಣೆ ಪ್ರಯುಕ್ತ ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ (ವಿಶಾಖಪಟ್ಟಣ) ಭರತ್ ಮುತ್ತುಕುಮುಲಿ ಅವರು ಗಣೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇದನ್ನೂ ಓದಿ: ಮಂಗಳೂರು | ಕನ್ನಡ-ತುಳು ವಿದ್ವಾಂಸ ಡಾ.ವಾಮನ ನಂದಾವರ ನಿಧನ
ಇನ್ನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಣೇಶ್, “ಬದಲಾಗುತ್ತಿರುವ ಅಭಿರುಚಿಗೆ ಹೊಂದುವಂತೆ ಜಾದೂ ಪ್ರದರ್ಶನದಲ್ಲಿ ಹೊಸತನವನ್ನು ತರಬೇಕಾಗಿದೆ. ಜಾದೂ ಕಲೆಯ ಅಭಿವೃದ್ಧಿಗಾಗಿ ಈ ಕಲೆಗೆ ಸಾಂಸ್ಥಿಕ ರೂಪ ದೊರೆಯುವ ಅಗತ್ಯವಿದೆ” ಎಂದರು.
