ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಎಲಾನ್ ಮಸ್ಕ್ ಮಾಲೀಕತ್ವದ ಅಮೆರಿಕದ ಸಂಸ್ಥೆ ಸ್ಟಾರ್‌ಲಿಂಕ್, ಭಾರತದ ಖಾಸಗಿ ಸಂಸ್ಥೆಗಳಾದ ರಿಲಯನ್ಸ್‌ನ ಜಿಯೋ ಮತ್ತು ಭಾರತಿ ಏರ್‌ಟೆಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಟ್ವಿಟರ್‌ನಲ್ಲಿ ಮಸ್ಕ್ ಕಂಪನಿಯನ್ನು ಸ್ವಾಗತಿಸಿದ್ದಾರೆ. ಆದರೆ ಸ್ವಾಗತದ ಟ್ವೀಟ್‌ನ ಪರಿಣಾಮ ಅರಿತ ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆ. ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ವಿದೇಶಿ ಕಂಪನಿಗಳು ಹೂಡಿಕೆ ಮಾಡುವುದು ಇದೇ ಮೊದಲೇನಲ್ಲ. ಆದರೆ ಸ್ಟಾರ್‌ಲಿಂಕ್ ಸಂಸ್ಥೆಯ ಹೂಡಿಕೆಗೆ ವಿರೋಧ…

ಎನ್.ಕೆ. ಸುಪ್ರಭಾ
ಸಮಕಾಲೀನ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಎನ್ ಕೆ ಸುಪ್ರಭಾ ಅನುವಾದಕರಾಗಿಯೂ ಚಿರಪರಿಚಿತರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮಂಗಳೂರು ಮತ್ತು ಮಣಿಪಾಲದಲ್ಲಿ ಕೆಲವು ವರ್ಷಗಳ ಕಾಲ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು 2005ರಲ್ಲಿ ಬೆಂಗಳೂರಿಗೆ ಬಂದ ಅವರು, ವರ್ಷಗಳ ಕಾಲ ದಿನಪತ್ರಿಕೆಗಳ ಪುರವಣಿ ಮತ್ತು ನಿಯತಕಾಲಿಕಗಳಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಹದಿನೇಳು ವರ್ಷಗಳಿಂದ ಹವ್ಯಾಸಿ ಮತ್ತು ವೃತ್ತಿಪರ ಅನುವಾದಕರೂ ಆಗಿದ್ದಾರೆ.