ಬಸವಕಲ್ಯಾಣ ನಗರದ ಮುಖ್ಯರಸ್ತೆ ವಿಭಜಕ ಮಧ್ಯದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವತಿಯಿಂದ ಅಳವಡಿಸಲಾಗಿದ್ದ ಬಸವಾದಿ ಶರಣರ ಸಂದೇಶ ಫಲಕಗಳು ಹಾಳಾಗಿದ್ದು ಕೂಡಲೇ ಹೊಸ ಫಲಕಗಳನ್ನು ಅಳವಡಿಸಬೇಕೆಂದು ರಾಷ್ಟ್ರೀಯ ಬಸವ ದಳ ಹಾಗೂ ಬಸವ ಕೇಂದ್ರದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಶನಿವಾರ ಬಸವಕಲ್ಯಾಣದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಗನ್ನಾಥ ರೆಡ್ಡಿಅವರಿಗೆ ಹಕ್ಕೊತ್ತಾಯಪತ್ರ ಸಲ್ಲಿಸಿದರು.
ʼಜಗತ್ತಿಗೆ ಮೊಟ್ಟಮೊದಲ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಈ ಹಿಂದೆ ʼಬಸವ ಉತ್ಸವʼ ಸಂದರ್ಭದಲ್ಲಿ ಮುಖ್ಯರಸ್ತೆಯ ವಿಭಜಕ ಮಧ್ಯ ವಚನ ಸಂದೇಶ ಫಲಕಗಳು ಹಾಕಲಾಗಿತ್ತು. ಇದೀಗ ಬಹುತೇಕ ಫಲಕಗಳು ಹಾಳಾಗಿ ಓದಲು ಸಾಧ್ಯವಾಗುತ್ತಿಲ್ಲʼ ಎಂದರು.
ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿನ ಶರಣರ ಸ್ಮಾರಕ ವೀಕ್ಷಣೆಗೆ ನಿತ್ಯ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹಾಗಾಗಿ ಬಿಕೆಡಿಬಿ ವತಿಯಿಂದ ಉತ್ತಮ ಗುಣಮಟ್ಟದ ಶರಣರ ಸಂದೇಶ ಸಾರುವ ಫಲಕಗಳನ್ನು ಅಳವಡಿಸಿ ನಗರದ ಅಂದ ಹೆಚ್ಚಿಸಬೇಕು ಎಂದು ಬಸವಾನುಯಾಯಿಗಳ ಪರವಾಗಿ ಮನವಿ ಮಾಡುತ್ತೇವೆʼ ಎಂದರು.
ಈ ಸುದ್ದಿ ಓದಿದ್ದೀರಾ? ಔರಾದ್ ಸೀಮೆಯ ಕನ್ನಡ | ಹಂತಿ ಹೊಡಿಲಾಕ್ ನಮ್ ಎತ್ಗೊಳ್ ಖಾಲಿನೇ ಅವಾ!
ರಾಷ್ಟೀಯ ಬಸವ ದಳ ಬಸವಕಲ್ಯಾಣ ತಾಲ್ಲೂಕಾಧ್ಯಕ್ಷ ರವೀಂದ್ರ ಕೋಳಕೂರ, ಹುಲಸೂರ ತಾಲ್ಲೂಕು ಬಸವ ಕೇಂದ್ರ ಅಧ್ಯಕ್ಷ ಆಕಾಶ ಖಂಡಾಳೆ ಇದ್ದರು.