ತುಮಕೂರು | ಭೂಮಿ ಮಂಜೂರಿಗೆ ಅರ್ಜಿ ಹಾಕಿಸುವ ದಂಧೆ : ಸಾವಿರ ರೂಗೆ ಅರ್ಜಿ ಮಾರಾಟ..!!

Date:

Advertisements

ರೈತರಿಗೆ ಜಮೀನು ಮಂಜೂರು ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಭರ್ತಿ ಮಾಡಿಕೊಂಡು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸುವ ಮಧ್ಯವರ್ತಿಯ ದಂಧೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಸರ್ಕಾರ ಭೂ ಸುಧಾರಣಾ ಕಾನೂನು ಮರುಸ್ಥಾಪಿಸಲು ಹೆಚ್ಚುವರಿ ಭೂಮಿ ವಶಕ್ಕೆ ಪಡೆದು ಅರ್ಹರಿಗೆ ಮಂಜೂರು ಮಾಡುವ ಆದೇಶ ತಿಳಿದ ಬಳಿಕ ತಾಲ್ಲೂಕಿನ ಗಡಿ ಭಾಗದಲ್ಲಿ ಗೋಮಾಳ ಜಮೀನು ಸರ್ಕಾರ ಮಂಜೂರು ಮಾಡುತ್ತದೆ ಎಂಬ ವದಂತಿ ಹಬ್ಬಿಸಿ ಮುಗ್ಧ ಹಳ್ಳಿ ಜನರಿಂದ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಭೂಮಿ ಸಿಗುತ್ತದೆ ಎಂಬ ಗಾಢವಾದ ನಂಬಿಕೆಗೆ ಸಿಲುಕಿದ ರೈತರಿಗೆ ಅರ್ಜಿ ನಮೂನೆಯನ್ನು ಸಾವಿರ ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ದಾಖಲೆ ಇಲ್ಲದೆ ಮನಬಂದಂತೆ ಬೇರೆ ಜಿಲ್ಲೆ, ತಾಲ್ಲೂಕಿನ ರೈತರು ಸಹ ಅರ್ಜಿ ನೀಡುತ್ತಿದ್ದಾರೆ ಎಂಬ ಚರ್ಚೆ ತಾಲ್ಲೂಕು ಕಚೇರಿ ಆವರಣದಲ್ಲಿ ಕಂಡು ಬಂತು.

ಕೆಲ ತಿಂಗಳ ಹಿಂದೆ ಚೇಳೂರು ಮತ್ತು ಹಾಗಲವಾಡಿ ಹೋಬಳಿಯ ರೈತರು ಹೋರಾಟ ನಡೆಸಿ ಭೂಮಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸುವ ಚಳವಳಿ ಆರಂಭಿಸಿದ್ದರು. ಈ ಸಮಯದ ಅರ್ಜಿ ನಮೂನೆಯನ್ನು ಬಂಡವಾಳ ಮಾಡಿಕೊಂಡ ಕೆಲ ದಂಧೆಕೋರರು ಹಣ ಪೀಕಲು ಅರ್ಜಿಯನ್ನು ಸಾವಿರ ರೂಗಳಿಗೆ ಮಾರಾಟ ಮಾಡಿ ಅರ್ಜಿ ತುಂಬಿಸಿಕೊಂಡು ತಾಲ್ಲೂಕು ಕಚೇರಿಗೆ ನೀಡಲು ಬಂದಿರುವುದು ಕಂಡ ತಹಸೀಲ್ದಾರ್ ಬಿ.ಆರತಿ ಅವರು ಮುದ್ರಿತ ಅರ್ಜಿ ನಮೂನೆ ಕಂಡು ಒಬ್ಬರೇ ನೂರಾರು ಅರ್ಜಿ ಹೇಗೆ ಸಲ್ಲಿಸುತ್ತೀರಿ ಎಂದು ಅರ್ಜಿ ಹಿಡಿದು ಬಂದಾತನನ್ನು ಪ್ರಶ್ನಿಸಿದರು.

Advertisements
1001182243

ಈಗಾಗಲೇ ನಾಲ್ಕು ಸಾವಿರ ಅರ್ಜಿ ಬಂದಿದ್ದು, ಬಗರ್ ಹುಕುಂ ಸಮಿತಿಗೆ ಬಂದ ಸಾವಿರಾರು ಅರ್ಜಿಗಳನ್ನು ವಜಾ ಗೊಳಿಸಲಾಗಿದೆ. ಅರ್ಹ ರೈತರು, ಅನುಭವದಲ್ಲಿರುವ ರೈತರ ಅರ್ಜಿಗಳೇ ರದ್ದು ಆಗಿದೆ. ಇದೆಲ್ಲಾ ತಿಳಿದು ಸಹ ಸಾವಿರಾರು ಅರ್ಜಿಯನ್ನು ತಂದು ತಾಲ್ಲೂಕು ಕಚೇರಿಗೆ ಸಲ್ಲಿಸುವ ಮಧ್ಯವರ್ತಿಗಳ ಉದ್ದೇಶ ತಿಳಿಯಬೇಕಿದೆ. ಯಾವುದೇ ದಾಖಲೆ ಇಲ್ಲದ ಅರ್ಜಿ ನಮೂನೆ ನೇರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು ಹೇಗೆ ವಿಲೇವಾರಿ ಮಾಡಲು ಸಾಧ್ಯ ಎಂಬ ಗೊಂದಲ ಕಚೇರಿಯ ಸಿಬ್ಬಂದಿಯಲ್ಲಿ ಕಾಣುತ್ತಿದೆ. ಅರ್ಜಿಯ ಜೊತೆ ಆಧಾರ್ ಕಾರ್ಡ್, ಪಡಿತರ ಚೀಟಿ, ಬಗರ್ ಸಮಿತಿಗೆ ಸಲ್ಲಿಸಿದ್ದ ಅರ್ಜಿ ನಮೂನೆಗಳು ಹೀಗೆ ಇರುವ ದಾಖಲೆ ಒದಗಿಸಬೇಕಿದೆ. ಫಲಾನುಭವಿಗಳು ಬಂದು ಅವರವರ ಅರ್ಜಿ ಸಲ್ಲಿಸಲಿ ಎಂದು ಸೂಚಿಸಿ ನೂರಾರು ಅರ್ಜಿಯನ್ನು ತಿರಸ್ಕರಿಸಲಾಯಿತು. ತಕ್ಷಣ ಮಧ್ಯವರ್ತಿ ಸ್ಥಳದಿಂದ ಕಾಲ್ಕಿತ್ತ ಘಟನೆ ನಡೆಯಿತು.


“ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸುವ ನಮೂನೆಯನ್ನು ಸಾವಿರ ರೂಗಳಿಗೆ ಮಾರಾಟ ಮಾಡುವ ದಂಧೆ ಹೆಚ್ಚಾಗಿದೆ. ಈ ಬಗ್ಗೆ ದೂರು ಬಂದಿದೆ. ಈಗಾಗಲೇ 5 ಸಾವಿರ ಅರ್ಜಿಗಳು ಬಂದಿವೆ. ಅಕ್ರಮ ಸಕ್ರಮ ಅರ್ಹರಿಗೆ ಮಾಡಲು ತಿಳಿಸಿದೆ. ಆದರೆ ಬೇರೆ ತಾಲ್ಲೂಕಿನ ರೈತರ ಅರ್ಜಿ ಸಹ ಇಲ್ಲಿ ಬರುತ್ತಿದೆ. ಇದು ವ್ಯವಸ್ಥಿತವಾಗಿ ಹಣ ಮಾಡಲಾಗುತ್ತಿದೆ. ಮುಗ್ಧ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ದಿಕ್ಕುತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪೊಲೀಸ್ ದೂರು ನೀಡಲಿದ್ದೇವೆ ಎಂದು ಈದಿನ ಡಾಟ್ ಕಾಮ್ ಗೆ ಗುಬ್ಬಿ ತಹಶೀಲ್ದಾರ್ ಬಿ. ಆರತಿ ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X