ಹೈಕೋರ್ಟ್ ಆದೇಶವನ್ನು ತಿರುಚಿ ಸೌಜನ್ಯ ಪರ ಹೋರಾಟವನ್ನು ನಿಲ್ಲಿಸಲು ಹೊರಟ ಪೊಲೀಸರ ವಿರುದ್ಧ ‘ಸಮಾನ ಮನಸ್ಕರ ವೇದಿಕೆ’ ಮುಖಂಡರು ಆಕ್ರೋಶ ವ್ಯಕ್ರಪಡಿಸಿದ್ದು, ತಾವು ಇಂದು (ಮಾರ್ಚ್ 18) ಸಂಜೆ 5 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರದ ಎಐಟಿಯುಸಿ ಸಭಾಂಗಣದಲ್ಲಿ ಸಭೆ ನಡದೇ ತೀರುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಫ್ಯೂಡಲ್ ಅಧೀನದ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದೆಯೇ ? ಹೈಕೋರ್ಟ್ ಆದೇಶವನ್ನು ತಿರುಚಿ ಸೌಜನ್ಯ ಪರ ಹೋರಾಟವನ್ನು ನಿಲ್ಲಿಸಲು ಪೊಲೀಸರು ರಾತ್ರಿ ಹಗಲು ಶ್ರಮಿಸುತ್ತಿರುವುದೇಕೆ ? ಕಚೇರಿಯೊಳಗೆ ಸಮಾಲೋಚನಾ ಸಭೆ/ದಿಕ್ಸೂಚಿ ಸಭೆ ನಡೆಸುವಂತಿಲ್ಲವೇ ಎಂದು ವೇದಿಕೆಯ ನಾಯಕರು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ; ಬಿಜೆಪಿ ವಿರೋಧವೇ ಅಸಾಂವಿಧಾನಿಕ
ನಾಳೆ ಮನೆಯೊಳಗೂ ಮನೆ ಮಂದಿಯ ಜೊತೆಗೂ ಸೌಜನ್ಯ ಬಗ್ಗೆ ಮಾತನಾಡಬಾರದು ಎಂದು ಪೊಲೀಸರು ನೋಟಿಸ್ ನೀಡಬಹುದೇ ? ಯಾರದ್ದೇ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳಬಹುದೇ ವಿನಃ ಸಮಾಲೋಚನಾ ಸಭೆಗಳ ಮೇಲಲ್ಲ. ಹಾಗಾಗಿ ಕಾನೂನು ತಜ್ಞರು ನಮಗೆ ನೀಡಿದ ವ್ಯಾಖ್ಯಾನದಂತೆ ಮಾ.18 ರಂದು ಮಂಗಳವಾರ ಸಂಜೆ ಸಭೆ ನಡೆಸಲಿದ್ದೇವೆ. ಸಾಹಿತಿ-ಚಿಂತಕ- ಹೋರಾಟಗಾರರ ದಿಕ್ಸೂಚಿ ಸಭೆ ಸಾಂಗವಾಗಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸೌಜನ್ಯ ಸಭೆ ನಡೆಸಬಾರದೆಂದು ಸಾರಿಗೆ ನೌಕರರ ಹಿತ ರಕ್ಷಣಾ ವೇದಿಕೆಯ ವಿನಯ್ ಶ್ರೀನಿವಾಸ್, ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್ ಕುಮಾರ್, ವಕೀಲರಾದ ಮೈತ್ರಿ, ಎಐಟಿಯುಸಿ ಅಧ್ಯಕ್ಷರಾದ ಆನಂದ್ ಸುಬ್ಬರಾವ್ ಹಾಗೂ ಎಐಟಿಯುಸಿನ ವಿಜಯ್ ಭಾಸ್ಕರ್ ಅವರಿಗೆ ಸಭೆ ನಡೆಸಬಾರದೆಂದು ಶೇಷಾದ್ರಿಪುರಂ ಪೊಲೀಸ್ ಇನ್ಸ್‌ಪೆಕ್ಟ್‌ರ್ ಅವರು ನೋಟಿಸ್ ನೀಡಿದ್ದರು.
ಸಂಘಟಕರು ‘ಸೌಜನ್ಯ ನ್ಯಾಯಕ್ಕೆ ಆಗ್ರಹಿಸಿ, ಊಳಿಗೆಮಾನ್ಯ ದರ್ಪದ ವಿರುದ್ಧ ಸಾಹಿತಿ ಚಿಂತಕ ಹೋರಾಟದ ದಿಕ್ಕೂಚಿ ಸಭೆ ಹಮ್ಮಿಕೊಂಡಿದ್ದು, ಪ್ರಸ್ತುತ ಸಭೆಯಲ್ಲಿ ಸಮಾಜದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ ಹೆಚ್ಚಾಗುತ್ತಿರುವ ಕುರಿತು ಮತ್ತು ಸೌಜನ್ಯ ಪ್ರಕರಣದ ಕಾನೂನು ಹೋರಾಟದ ರೂಪುರೇಷೆ ಚರ್ಚೆಯಾಗಲಿದೆ. ಸಭೆಯಲ್ಲಿ 40-50 ಜನರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ. ಹೈಕೋರ್ಟ್ ಆದೇಶದಂತೆ ಪ್ರತಿಭಟನೆ/ಹೋರಾಟಕ್ಕೆ ಅವಕಾಶವಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿ ಪ್ರತಿಭಟನೆ ಮಾಡಿದ್ದಲ್ಲಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ನೋಟಿಸ್‌ನಲ್ಲಿ ತಿಳಿಸಲಾಗಿದೆ.
