ಯೋಗ ಮಾಡುವುದರಿಂದ ಮನಸ್ಸನ್ನು ಕೇಂದ್ರಿಕರೀಸಲು ಸಾಧ್ಯವಾಗುತ್ತದೆ. ಇದರಿಂದ ಜ್ಞಾನ ಏಕಾಗ್ರತೆ, ದೃಢ ಸಂಕಲ್ಪ ಮನೋಭಾವ ಬೆಳೆಯುವಲ್ಲಿ ಯೋಗ ಚಿಕಿತ್ಸಕ ರೀತಿಯಲ್ಲಿ ಕಾರ್ಯ ಮಾಡುತ್ತದೆ ಎಂದು ಸಹಾಯಕ ಪ್ರಾಧ್ಯಾಪಕಿ ಡಾ. ಅರುಂಧತಿ ಎಸ್ ಅಂಗಡಿ ಹೇಳಿದರು.
ಬಾಗಲಕೋಟೆ- ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ “ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ” ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರಿಗೆ 15 ದಿನಗಳ ಉಚಿತ ಯೋಗ ತರಬೇತಿ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಜೂನ್ 25ರಂದು ವಾಲ್ಮೀಕಿ ಸಮುದಾಯದ ಶಾಸಕರು-ಸಚಿವರಿಗೆ ಅಭಿನಂದನಾ ಸಮಾರಂಭ
“ಯೋಗ ಶಿಬಿರಕ್ಕೆ ಮಾತ್ರ ಸಿಮೀತವಾಗದೇ ಎಲ್ಲರೂ ತಮ್ಮ ಜೀವನದುದ್ದಕ್ಕೂ ಅನುಸರಿಸಿಕೊಂಡು ಹೋಗಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಐಕ್ಯೂಎಸಿ ಸಂಚಾಲಕ ಡಾ ಬಿ ಎಂ ಬಡಿಗೇರ, ಡಾ. ಕವಿತಾ ಮುತ್ತಪ್ಪ, ಸಂಗಮೇಶ ಬ್ಯಾಳಿ ಎಂ ವೈ ಬಡಿಗೇರ, ಸಂತೋಷ ತಿಪ್ಪನ್ನವರ, ಗುರುರಾಜ ರಾಠೋಡ ಇದ್ದರು.