ರೈತರು ಸ್ಟಾಲಬಂಬಿ ಬದುಕು ಸಾಗಿಸಲು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಸಲಹೆ ನೀಡಿದರು.
ವಿಜಯಪುರ ತಾಲೂಕಿನ ಉಕಮನಾಳ ಗ್ರಾಮದ ಅಂಬೇಡ್ಕರ್ ಭವನದಲ್ಲಿ ರಾಷ್ಟೀಯ ಕೃಷಿ ಕೀಟ ಸಂಪನ್ಮೋಲ ಬ್ಯುರೋ ಬೆಂಗಳೂರು ಹಾಗೂ ಅಖಿಲ ಭಾರತ ಸಮನ್ವಿತ ಒಣ ಬೇಸಾಯ ಸಂಶೋಧನೆ ಯೋಜನೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಅಶೋಕ ಎಸ್. ಸಜ್ಜನ ಇವರ ಸಂಯುಕ್ತಾಶ್ರಯದಲ್ಲಿ ವಿಜಯಪುರ ಜಿಲ್ಲೆಯ ಪರಿಶಿಷ್ಟ ಜಾತಿಯ ರೈತರ ಸಬಲೀಕರಣಕ್ಕಾಗಿ ʼಒಣ ಬೇಸಾಯದ ತಾಂತ್ರಿಕತೆಗಳು’ ಕುರಿತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಮಾತನಾಡಿ, “ರೈತರು ಇಲಾಖೆಗಳಿಂದ ಸೌಲಭ್ಯ ಹಾಗೂ ಸಂಬಂಧಪಟ್ಟ ವಿಜ್ಞಾನಿಗಳಿಂದ ಮಾರ್ಗದರ್ಶನ ಪಡೆದು ಬೇಸಾಯ ಮಾಡಬೇಕು. ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು, ಸಾವಯವ ಕೃಷಿಯತ್ತ ಹೆಚ್ಚಿನ ಒಲವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಕೃಷಿಯಲ್ಲೂ ಅಭಿವೃದ್ಧಿ ಕಾಣಲು ಸಾಧು” ಎಂದರು.
ವಿಜ್ಞಾನಿ ಡಾ.ಮಿಲಿಂದ್ ಪೋತದಾರ ಮಾತನಾಡಿ, “ತರಬೇತಿ ಕೃಷಿ ಕೀಟ ಸಂಪನ್ಮೂಲ ಬ್ಯೂರೋ, ಯೋಜನೆಯಡಿಯಲ್ಲಿ ರೈತರಿಗೆ ವಿವಿಧ ಪರಿಕರ ವಿತರಿಸಲಾಗುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. 2.20 ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕೆಂದು” ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಬಿ.ಜಗ್ಗಿನವರ ಮಾತನಾಡಿ, “ಸಣ್ಣ ಅತೀ ಸಣ್ಣ ರೈತರಿಗೆ ವಿಶೇಷವಾಗಿ ಪರಿಶಿಷ್ಟ ಜಾತಿ ರೈತರಿಗೆ ಪರಿಕರ ವಿತರಣೆ ಮೂಲಕ ಆರ್ಥಿಕ ಸಬಬಲೀಕರಣ ಮಾಡುವ ಜೊತೆಗೆ ಮುಂಬರುವ ದಿನಗಳಲ್ಲಿ ಅವರನ್ನು ಉದ್ಯಮಶೀಲರನ್ನಾಗಿಸುವ ಗುರಿ ಹೊಂದಲಾಗಿದೆ” ಎಂದರು.
ಆಯ್ದ ಫಲಾನುಭವಿ ರೈತರಿಗೆ ಎರೆಹುಳು ಗೊಬ್ಬರ, ಸೈಕಲ್ ವೀಡರ್, ಹಣ್ಣಿನ ಸಸಿಗಳು, ತರಕಾರಿ ಕಿಟ್ಸ್, ಕೃಷಿ ಕೈಪಿಡಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪೋತದಾರ; ಒಣ ಬೇಸಾಯದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ, ಡಾ. ಎಸ್. ಬಿ. ಪಾಟೀಲ; ಹವಾಮಾನ ಸ್ಥಿತಿಸ್ಥಾಪಕತ್ವಕ್ಕಾಗಿ ಸಮಗ್ರ ಕೃಷಿ ಪದ್ದತಿ, ಡಾ.ಸವಿತಾ ಬಿ; ಒಣ ಬೇಸಾಯದಲ್ಲಿ ಮಣ್ಣಿನ ಆರೋಗ್ಯ, ಡಾ.ಜಿ.ಎಸ್.ಯಡಹಳ್ಳಿ; ಹವಾಮಾನ ಆಧಾರಿತ ಕೃಷಿ ಸಲಹೆಗಳು, ಡಾ.ಎಸ್.ಎಸ್.ಕರಭಂಟನಾಳ; 2420 ನಿರ್ವಹಣೆ, ಬೇಸಾಯದಲ್ಲಿ ಕೀಟ ನಿರ್ವಹಣೆ, ಡಾ.ಎಸ್. ಎಮ್; ವಸ್ತ್ರದ ಒಣ ಬೇಸಾಯದಲ್ಲಿ ರೋಗ ನಿರ್ವಹಣೆ, ಡಾ. ಸುಭಾಸ ನಾಯಕ; ಮಳೆಯಾಶ್ರಿತ ಸಮಗ್ರ ಕೃಷಿ ಪದ್ಧತಿಯಲ್ಲಿ ಜಾನುವಾರುಗಳ ನಿರ್ವಹಣೆ.. ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದನ್ನೂ ಓದಿ: ವಿಜಯಪುರ | ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಸಿದ್ದಪ್ಪ ಹರಿಜನ, ಪಂಚಾಯತಿ ಸದಸ್ಯ ಸುಭಾಸ ತಳಕೇರಿ, ಶ್ರೀಶೈಲ ಬಸಪ್ಪ ಬಿರಾದಾರ, ಮಲ್ಲಮ್ಮ ಸುಭಾಸ, ಪ್ರಗತಿಪರ ರೈತರಾದ ಕಾಶೀರಾಯಗೌಡ ಬಿರಾದಾರ, ಅಶೋಕಗೌಡ ಸುರೇಶಗೌಡ ಪಾಟೀಲ, ರಾಜೇಂದ್ರ ಶಂಕ್ರಪ್ಪ ಮುದನೂರ, ಹಿರಿಯ ತಾಂತ್ರಿಕ ಅಧಿಕಾರಿಗಳಾದ ಡಾ. ಹೆಚ್. ಎಸ್. ಮಹಾದೇವ ನುಚ್ಚಿ, ಮಹಾದೇವ ಸಾರವಾಡ, ಅನುರಾಧ ಕಗ್ಗೋಡ, ರೂಪಾ ಮುತ್ತಪ್ಪನವರ ಸೇರಿದಂತೆ ಉರುಮನಾಳ, ಕತಕನಹಳ್ಳಿ, ಹೆಗಡಿಹಾಳ, ಕವಲಗಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.
