ಸಮಾಜಕ್ಕೆ ಸತ್ಯ, ಧಮ೯, ಶಾಂತಿ, ಸಮಾನತೆ ಸಾರಿದ ಮಹಾನ್ ವ್ಯಕ್ತಿಗಳ ಅಂತ್ಯ ದುರಂತದಲ್ಲಿ ಕೊನೆಗೊಂಡಿದ್ದು ಇತಿಹಾಸದ ಕಟುಸತ್ಯ. ಇದಕ್ಕೆ ಮುಖ್ಯ ಕಾರಣ ಜನಸಾಮಾನ್ಯರು ಪ್ರಶ್ನಿಸುವುದನ್ನು ಮರೆತು ನಿರ್ಲಿಪ್ತ ಧೋರಣೆ ಅನುಸರಿಸುವುದೇ ಆಗಿದೆ ಎಂದು ಚಿಕ್ಕಮಗಳೂರಿನ ಸಾಮಾಜಿಕ ಹೋರಾಟಗಾತಿ೯ ರಾಧಾ ಬಿ.ಕೆ. ಸುಂದರೇಶ್ ಅಭಿಪ್ರಾಯಪಟ್ಟರು.

“ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಮಹಿಳಾ ಜಾಗೃತಿ ವೇದಿಕೆ, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಹಿಂದುಳಿದ ಜನ ಜಾಗೃತಿ ವೇದಿಕೆ ಮಹಿಳಾ ಘಟಕ ಸಂಯುಕ್ತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಿನ್ನೆ (ಮಾ.17) ಹಮ್ಮಿಕೊಂಡಿದ್ದ ಮಹಿಳಾ ಚೈತನ್ಯ ಸಮಾವೇಶದಲ್ಲಿ ಮಾತನಾಡಿದ ಅವರು, “ವಿಶ್ವಕ್ಕೆ ಶಾಂತಿ ಬೋಧಿಸಿದ ಏಸುಕ್ರಿಸ್ತರನ್ನು ಶಿಲುಬೆಗೆ ಏರಿಸಲಾಯಿತು, ಜ್ಞಾನದ ಜ್ಯೋತಿ ಬಸವಣ್ಣರನ್ನು ನೀರಿಗೆ ತಳ್ಳಲಾಯಿತು, ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲಲಾಯಿತು.. ಇದು ಈ ಸಮಾಜ ಮಹಾನ್ ವ್ಯಕ್ತಿಗಳನ್ನು ನಡೆಸಿಕೊಂಡ ದುರಂತಗಳ ಚರಿತ್ರೆ. ಇದಕ್ಕೆಲ್ಲಾ ಕಾರಣ ಜನಸಾಮಾನ್ಯರು ಮುಖ್ಯವಾಗಿ ಮಹಿಳೆಯರು ಸಮಾಜದ ಆಗು-ಹೋಗುಗಳ ಕಡೆಗೆ ಗಮನಕೊಡದೆ ನಿಲಿ೯ಪ್ತರಾಗಿದ್ದದ್ದು” ಎಂದು ಅವರು ಜನಸಾಮಾನ್ಯರ ನಿಸ್ಸೀಮ ನಿಲಿ೯ಪತೆಯ ಇತಿಹಾಸ ತೆರೆದಿಟ್ಟರು.

“ಯಾವುದೇ ಒಂದು ದೇಶದ ಪ್ರಧಾನಿ ಅಥವಾ ಮಂತ್ರಿ ಇಲ್ಲವೇ ಅಧಿಕಾರಿ ತಿಂಗಳುಗಟ್ಟಲೆ ಕೆಲಸ ಮಾಡದೆ ದೇಶಾಂತರ ಹೋದರೂ ನಡೆಯುತ್ತದೆ ಅದೇ ರೀತಿ ರೈತರು, ಕಾಮಿ೯ಕರು, ಸೈನಿಕರು ಬಹುಮುಖ್ಯವಾಗಿ ಮಹಿಳೆಯರು ಕೆಲಸ ಮಾಡದೆ ನಿಲಿ೯ಪ್ತರಾಗಿ ಉಳಿದರೆ ಅಭಿವೃದ್ಧಿ ಕಾಯ೯ಗಳು ಕುಂಠಿತವಾಗಿ ದೇಶ ವಿನಾಶದ ಕಡೆಗೆ ಸಾಗುತ್ತದೆ” ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಶಿವಮೊಗ್ಗ | ಹೆಚ್ಚಿದ ಶುಂಠಿ ಲಾಬಿ; ಮಲೆನಾಡ ರೈತರು ಕಂಗಾಲು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿವಮೊಗ್ಗದ ಸಿ.ಡಿ.ಪಿ.ಒ. ಗಂಗಾಬಾಯಿ, “ಭಾರತೀಯ ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಧಾಪುಗಾಲಿಡುತ್ತಿದ್ದು ಸಮಾಜದ ಆಗು-ಹೋಗುಗಳಿಗೆ ತೀಕ್ಷ್ಣವಾಗಿ ಸ್ಪಂದಿಸುವ ಮನೋಭಾವ ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕವೆಂದು” ಕರೆ ನೀಡಿದರು.

ಸಮಾವೇಶದಲ್ಲಿ ತೀಥ೯ಹಳ್ಳಿಯ ಸಾಮಾಜಿಕ ಕಾರ್ಯಕರ್ತೆ ಲತಾ ಜೋಯಿಸ್, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ವೀರಮ್ಮ, ಎಲ್.ಐ.ಸಿ. ಡೆವಲಪ್‌ಮೆಂಟ್ ಆಫೀಸರ್ ದೀಪಿಕಾ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ, ಮಹಿಳಾ ಜಾಗೃತಿ ವೇದಿಕೆ ಸಂಚಾಲಕಿ ರಾಜಮ್ಮ, ವೀಣಾನಾಗೇಶ್, ದೀಪಿಕಾ, ಸರೋಜ ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿದ್ದರು.
