ವಿಜಯಪುರ | ಸಾರ್ವಜನಿಕ ಈಜುಕೊಳದಲ್ಲಿ ಅಕ್ರಮ; ಸೂಕ್ತ ಕ್ರಮಕ್ಕೆ ಆಗ್ರಹ

Date:

Advertisements

ಸಾರ್ವಜನಿಕ ಈಜುಕೊಳದಲ್ಲಿ ಅವ್ಯವಹಾರ ಕಂಡುಬರುತ್ತಿದ್ದು, ವ್ಯವಸ್ಥಾಪಕಿಯನ್ನು ಕೂಡಲೇ ಬದಲಾವಣೆ ಮಾಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆ ಕನಕದಾಸ ಬಡಾವಣೆಯ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

“ಜಿಲ್ಲೆಯ ಕನಕದಾಸ ಬಡಾವಣೆಯಲ್ಲಿ ಕಳೆದ ಒಂದು ವರ್ಷದಿಂದ ಈಜುಗೊಳ ಪ್ರಾರಂಭವಾಗಿದ್ದು, ಈ ಈಜುಕೊಳದಲ್ಲಿ ಪ್ರತಿನಿತ್ಯ ದೈನಂದಿನ ತರಬೇತಿಗಾಗಿ ಬಹುತೇಕರು ಆಗಮಿಸುತ್ತಿದ್ದಾರೆ. ಆದರೆ, ಈಗ ಚಳಿಗಾಲವಿರುವುದರಿಂದ ಈಜುಗೊಳಕ್ಕೆ ಕೆಲವು ಮಂದಿ ಬರುತ್ತಿದ್ದಾರೆ” ಎಂದು ತಿಳಿಸಿದರು.

“ಈಜುಕೊಳಕ್ಕೆ ನೇಮಕವಾಗಿರುವ ಮಹಿಳಾ ಮ್ಯಾನೇಜರ್ ಪತ್ರಿನಿತ್ಯ ಕೆಲಸಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಉಳಿದ ಸಿಬ್ಬಂದಿಯೂ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ಜೊತೆಗೆ ಸಿಬ್ಬಂದಿ ನಡುವೆ ಹೊಂದಾಣಿಕೆಯೂ ಇಲ್ಲ” ಎಂದು ಟೀಕಿಸಿದರು.

Advertisements

“ಪ್ರತಿದಿನ ಈಜುಗೊಳಕ್ಕೆ ಬರುವ ಜನರಿಗೆ ಟಿಕೆಟ್ ನೀಡುವುದು ಮಹಿಳಾ ಮ್ಯಾನೇಜರ್‌ ಕೆಲಸ. ಆದರೆ, ಇವರು ಟಿಕೆಟ್‌ ನೀಡಲು ಡಿ ಗ್ರೂಪ್‌ ಸಿಬ್ಬಂದಿಗೆ ವಹಿಸಿ ಹೊರಗಡೆ ಹೋಗುತ್ತಾರೆ. ಇವರು ಯಾವುದೇ ರೀತಿಯ ಕಂಪ್ಯೂಟರ್ ಜ್ಞಾನ ಹಾಗೂ ಅಕೌಂಟ್ ಬಗ್ಗೆ ಅನುಭವ ಹೊಂದಿಲ್ಲ” ಎಂದು ಆರೋಪಿಸಿದರು.

ಈಜುಕೊಳದ ಮಾಹಿತಿ
ಈಜುಕೊಳದ ಬಿಲ್‌ ಮತ್ತು ಅಕ್ರಮ ಬಿಲ್‌ ಪಟ್ಟಿ

“ಟಿಕೆಟ್‌ ನೀಡುವಿಕೆಯಲ್ಲಿ ಗೋಲಮಾಲ್ ನಡೆಯುತ್ತಿದ್ದು, ಒಬ್ಬರಿಗೆ ₹100 ಶುಲ್ಕ ನಿಗದಿಪಡಿಸಲಾಗಿದೆ. ಒಟ್ಟಿಗೆ ಐದು ಮಂದಿ ಬಂದರೆ, ಒಬ್ಬರ ಹೆಸರು ಬರೆದು + 4= ₹500 ಅಂತ ಟಿಕೇಟಿನ ಮೇಲೆ ಬರೆದು ಜನರಿಗೆ ಕೊಡುತ್ತಾರೆ. ಆದರೆ ರಿಜಿಸ್ಟರ್‌ನಲ್ಲಿ ₹100 ಅಂತ ಬರೆಯುತ್ತಾರೆ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ವಿದ್ಯುತ್‌ ದರ ಏರಿಕೆ; ಜೂ.22ರ ಕರ್ನಾಟಕ ಬಂದ್‌ ಕರೆ ವಾಪಸು

“ಅಕ್ರಮದ ಕುರಿತು ವಿಚಾರಿಸಿದರೆ ʼನಿಮಗೇನು ಮಾಡುವುದು ಮುಚ್ಚಿಕೊಂಡ ಸ್ವಿಮಿಂಗ್ ಮಾಡಿʼ ಅಂತ ನಮ್ಮ ಮೇಲೆಯೇ ಚಿರಾಡುತ್ತಾರೆ. ಅಂದರೆ ಇವರು ಸರ್ಕಾರಕ್ಕೆ ತೋರಿಸುವ ಮೊತ್ತ ₹100 ಮಾತ್ರ, ಮಿಕ್ಕ ₹400 ಇವರ ಪಾಕೆಟ್‌ಗೆ ಹೋಗುತ್ತದೆ. ಇದನ್ನು ಪರಿಶೀಲನೆ ಮಾಡಲು ಸಹಾಯಕ ನಿರ್ದೇಶಕರಿಗೆ ಹಲವು ಬಾರಿ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.

“ಎಲ್ಲ ದಾಖಲೆಗಳ ಮಾಹಿತಿಯನ್ನು ಪತ್ರದೊಂದಿಗೆ ಲಗತ್ತಿಸಿದ್ದೇವೆ. ಪರಿಶೀಲನೆ ನಡೆಸಿ ಸರ್ಕಾರಕ್ಕೆ ಮೋಸ ಮಾಡಿರುವುದನ್ನು ಗಮನಿಸಿ ದಂಡದ ಸಮೇತ ಹಣವನ್ನು ವಸೂಲಿ ಮಾಡಬೇಕು. ಜೊತೆಗೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಕನಕದಾಸ ಬಡಾವಣೆಯ ನಿವಾಸಿಗಳು ಒತ್ತಾಯಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X