ಆಕಸ್ಮಿಕ ಬೆಂಕಿಗೆ ಗುಜರಿ ಅಂಗಡಿ ಹಾಗೂ ಪಕ್ಕದ ಮನೆ ಆಹುತಿಯಾಗಿರುವ ಘಟನೆ ಹಾಸನ ನಗರದ ಸುಬೇದಾರ್ ನಾಗೇಶ್ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸರ್ದಾರ್ ಎಂಬುವವರಿಗೆ ಸೇರಿದ ಗುಜರಿ ಅಂಗಡಿ ಬೆಂಕಿಗಾಹುತಿಯಾಗಿದೆ. ಹಾಗೆಯೇ, ಅಂಗಡಿ ಹಿಂಭಾಗದಲ್ಲಿದ್ದ, ಶ್ರೀನಿವಾಸ್ ಅವರ ವಾಸದ ಮನೆಯ ಕಿಟಕಿಯ ಗ್ಲಾಸ್‌ಗಳು, ಬಾಗಿಲುಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಯವರು ಬೆಂಕಿ ನಂದಿಸಲು ಪ್ರಯತ್ನಿಸಿದಾಗ, ವಾಹನದಲ್ಲಿ ನೀರು ಖಾಲಿಯಾಗಿದ್ದರಿಂದ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ನಗರದಲ್ಲಿ ಒಂದೇನಾ ಅಗ್ನಿಶಾಮಕ ವಾಹನವಿರುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು
ಬಳಿಕ ಖಾಸಗಿ ನೀರಿನ ಟ್ರ್ಯಾಕ್ಟರ್‌ಗಳ ಮೂಲಕ ಸತತವಾಗಿ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಈ ಪ್ರಕರಣ ಪೆನ್‌ಷನ್ ಮೊಹಲ್ಲಾ ಠಾಣೆಯಲ್ಲಿ ದಾಖಲಾಗಿದೆ.