ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಆಯಿತನಹಳ್ಳಿ ಗ್ರಾಮದ ಪ್ರಜ್ವಲ್ (20) ಎಂಬ ಯುವಕನ ಮೇಲೆ ನಾಲ್ವರು ಕಿಡಿಗೇಡಿಗಳು ಹಳೇ ದ್ವೇಷದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದರಿ ಗ್ರಾಮದ ನಾಗೇಶ್ (28), ಪಾಲಾಕ್ಷ (22), ಮಹೇಶ್ (24), ಅಕ್ಷಯ್ (23) ಹಲ್ಲೆ ನಡೆಸಿದವರಾಗಿದ್ದು. ಸಧ್ಯ ಪೋಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಸದರಿ ಗ್ರಾಮದಲ್ಲಿ ಹಲ್ಲೆಗೊಳಗಾದ ಕುಟುಂಬ ಹಾಗೂ ಹಲ್ಲೆ ನಡೆಸಿರುವ ಕುಟುಂಬಗಳ ನಡುವೆ ಕ್ಷುಲಕ ಕಾರಣಗಳಿಗೆ ಗಲಾಟೆ ನಡೆದು ರಾಜಿ, ಪಂಚಾಯ್ತಿ ನಡೆದಿವೆ. ಇದನ್ನೇ ಮನಸಿನಲ್ಲಿರಿಸಿದ್ದ ಕಿಡಿಗೇಡಿಗಳು ದಿನಾಂಕ 15-03-2025 ರ ರಾತ್ರಿ ಮದುವೆ ಮುಗಿಸಿ ಹಿಂದಿರುಗುತ್ತಿದ್ದ ಯುವಕನ ಮೇಲೆ ನಾಲ್ವರು ಸರಿ ಸುಮಾರು 11-30 ರ ಸಮಯದಲ್ಲಿ ಬೈಕ್ ಅಡ್ಡೆಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿ,ಚಿನ್ನಾಭರಣ, ಮೊಬೈಲ್ ದೋಚಿದ್ದಾರೆಂದು ಪ್ರಕರಣ ದಾಖಲಾಗಿದೆ.
ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದು, ಪ್ರಸ್ತುತ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಮುಂದುವರೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೆಟ್ಟದಪುರ ಪೊಲೀಸ್ ಠಾಣೆ ಅಧಿಕಾರಿಗಳು, ತಲೆ ಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದಲ್ಲಿದ್ದಾರೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್ ಕೈಯಲ್ಲಿ ಶಿಕ್ಷಣ, ಖರ್ಗೆಯವರ ಸಿಟ್ಟು ಮತ್ತು ಬಡವರ ಮಕ್ಕಳು
ಶರತ್ ಮಾತನಾಡಿ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೋಲೀಸರ ಕೈಗೆ ಸಿಗದೇ ಶಿಕ್ಷೆಯಿಂದ ಪಾರಾಗುವು ತಂತ್ರ ಅನುಸರಿಸಿದ್ದಾರೆ. ಹಲ್ಲೆಗೊಳಗಾದ ಯುವಕನ ಕುಟುಂಬ ಈ ಘಟನೆಯಿಂದ ನೊಂದಿದ್ದು ನ್ಯಾಯದ ನಿರೀಕ್ಷೆಯಲ್ಲಿದೆ. ವಿದ್ಯಾವಂತರಾಗಿರುವ ಯುವಕರೇ ದ್ವೇಷಕ್ಕೆ ಕಟ್ಟು ಬಿದ್ದು ಕೊಲ್ಲುವ ಹಂತಕ್ಕೆ ಮುಂದಾಗುವುದು ಆತಂಕಕಾರಿ ಬೆಳವಣಿಗೆ, ಹಲ್ಲೆ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆದು, ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.