ಗದಗ | ಡಾ. ಜಿ. ಎಸ್. ಆಮೂರವರು ಒಬ್ಬರು ಶ್ರೇಷ್ಠ ಪಯಣಿಗರು: ಡಾ. ಜಿ. ಎಂ. ಹೆಗಡೆ

Date:

Advertisements

“ಡಾ. ಜಿ. ಎಸ್. ಆಮೂರವರು ಒಬ್ಬರು ಶ್ರೇಷ್ಠ ಪಯಣಿಗರು. ಕನ್ನಡ ಪ್ರಪಂಚಕ್ಕೆ ಶ್ರೇಷ್ಠ ವಿಮರ್ಶಾ ಕೃತಿಗಳನ್ನು ಕೊಟ್ಟು ಬೆರಗುಗೊಳಿಸಿದವರು” ಎಂದು ಹಿರಿಯ ವಿಮರ್ಶಕರು ಡಾ. ಜಿ. ಎಂ. ಹೆಗಡೆ ಹೇಳಿದರು.

ಡಾ. ಜಿ. ಎಸ್ ಆಮೂರ ಶತಮಾನೋತ್ಸವ ಸಮಿತಿ, ಜಿ ಬಿ ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ, ಕೆ ಎಲ್ ಇ ಸಂಸ್ಥೆಯ ಜಗದ್ಗುರು ತೊಂಟದಾರ್ಯ ಮಹಾವಿದ್ಯಾಲಯ ಗದಗ ಮತ್ತು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಗಳ ಕನ್ನಡ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ “ಡಾ. ಜಿ. ಎಸ್. ಆಮೂರರ ಮೇರು ವಿಮರ್ಶ ಕೃತಿಗಳ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

“ಆಮೂರವರು ಕಾಲೇಜು ವಿದ್ಯಾರ್ಥಿ ಇದ್ದಾಗಲೇ ವಿಮರ್ಶಾ ಲೇಖನವನ್ನು ಪ್ರಕಟಸಿದ್ದು, ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ವಿಮರ್ಶಾ ಕೃತಿಗಳನ್ನು ಬರೆಯಲು ಪ್ರೇರಣೆ ಆಯಿತು. ಹಾಗಾಗಿ ನೀವು ಈಗಿನಿಂದಲೇ ಕಥೆ, ಕವಿತೆ, ಹರಟೆ ಬರೆಯಲು ಪ್ರಾರಂಭಿಸಿ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisements

ಶ್ರೀರಂಗರ ಎಲ್ಲ ನಾಟಕಗಳನ್ನು ಓದಿ ವಿಮರ್ಶೆಗಳನ್ನು ಬರೆದು ಕೃತಿ ರಚನೆ ಮಾಡಿದ್ದಾರೆ. ತಮ್ಮ ಕೃತಿ ಸಮೀಕ್ಷೆಯಲ್ಲಿ ಶ್ರೀರಂಗರ ಕುರಿತು ಸಾಕಷ್ಟು ಕಟ್ಟಿಕೊಟ್ಟಿದ್ದಾರೆ. ಮಹಿಳೆಯರನ್ನು ಜಾಗೃತರಾಗುವಲ್ಲಿ ಜಿ. ಎಸ್. ಆಮೂರರು ಬಹಳಷ್ಟು ಬರಹಗಳನ್ನು ಬರೆದಿದ್ದಾರೆ” ಎಂದು ಹೇಳಿದರು.

“ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಜಿ ಎಸ್ ಆಮೂರ ಅವರು ಪ್ರಧ್ಯಾಪಕ ವೃತ್ತಿಯಲ್ಲಿದ್ದಾಗ ಇಂಗ್ಲಿಷ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಮರ್ಶ ಕೃತಿಗಳನ್ನು ಬರೆದರು. ನಿವೃತ್ತಿ ಹೊಂದಿದ ಮೇಲೆ ಧಾರವಾಡಕ್ಕೆ ಬಂದ ಅವರು ಕನ್ನಡ ವಿಮರ್ಶ ಕೃತಿಗಳನ್ನು ಬರೆಯಲು ಆರಂಭಿಸಿದರು” ಎಂದು ಹೇಳಿದರು.

“ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ವಿಮರ್ಶ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿದ್ದು ಧಾರವಾಡ. ಕೀರ್ತಿನಾಥ ಕುರ್ತಕೋಟಿ ಅವರು ವಿಮರ್ಶ ಕೃತಿಗಳನ್ನು ಬರೆದು ವಿಮರ್ಶಾ ಕ್ಷೇತ್ರಕ್ಕೆ ಅಡಿಗಲ್ಲು ಹಾಕಿದರು. ನಂತರ ಜಿ. ಎಸ್. ಆಮೂರು ಹಾಗೂ ಗಿರಡ್ಡಿ ಗೋವಿಂದರಾಜ ಅವರು ಹಳಗನ್ನಡದಿಂದ ಅಧುನಿಕ ಕನ್ನಡ ಸಾಹಿತದಲ್ಲಿ  ವಿಮರ್ಶಾ ಕ್ಷೇತ್ರವನ್ನು ಬೆಳೆಸಿದರು. ಈ ನಿಟ್ಟಿನಲ್ಲಿ ವಿಮರ್ಶಾ ಕ್ಷೇತ್ರವನ್ನು ಕಟ್ಟಿ  ಬೆಳೆಸಿದವರು ಈ ಮೂವರು. ಇದು ಹೆಮ್ಮೆಯ ಸಂಗತಿ ಆಗಿದೆ”  ಎಂದು ಹೇಳಿದರು.

“ಡಾ. ಜಿ. ಎಸ್ ಆಮೂರ ಅವರಿಗೆ ಕನ್ನಡ ಸಾಹಿತ್ಯದ ಬಗ್ಗೆ ತೀವ್ರ ಕಾಳಜಿ ಇತ್ತು. ಹುಯಿಲಗೋಳ ನಾರಾಯಣರವರ ಸಾಹಿತ್ಯವನ್ನು ಸಂಗ್ರಹಿಸಿ ಮಹತ್ವದಾದ ಪ್ರಸ್ತಾವನೆ ಬರೆದರು. ಬೆಟಗೇರಿ ಕೃಷ್ಣಶರ್ಮ ಅವರನ್ನು ಗುರುತಿಸಿದರು” ಎಂದು ಹೇಳಿದರು.

“ಕನ್ನಡ ಸಾಹಿತ್ಯ ಚಾರಿತ್ರಿಕ ಗ್ರಹಿಕೆಯನ್ನು ಸಂಪೂರ್ಣವಾಗಿ ಹಿಡಿದು, ಪರಂಪರೆ ಕಟ್ಟಿಕೊಡಲು ಆಮೂರವರು ಕೆಲಸ ಮಾಡುತ್ತಾ ಬಂದರು” ಎಂದರು.

ಸಾಹಿತಿ ಶಾಮಸುಂದರ ಬಿದರಕುಂದಿ ಮಾತನಾಡಿ, “ಕನ್ನಡದ ಶ್ರೇಷ್ಠ ಕೃತಿಗಳನ್ನು ಓದಿದ ಆಮೂರವರು ಓದಿನ ಹೂರಣವನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡಿದರು. ನಿವೃತ್ತಿ ಹೊಂದಿದ ಮೇಲೆ ಕನ್ನಡದಲ್ಲಿ ವಿಮರ್ಶೆಗಳನ್ನು ಬರೀತಾ ಬರೀತಾ ತಮ್ಮ ಆಯುಷ್ಯವನ್ನು ಹೆಚ್ಚಿಸಿಕೊಂಡು, ಆಧುನಿಕ ಸಾಹಿತ್ಯ ವಿಮರ್ಶಾ ಕ್ಷೇತ್ರವನ್ನು ಬೆಳೆಸಿದರು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಹೆಣ್ಣು ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತ ಬಂದಿದ್ದಾಳೆ: ಎಂ. ಎನ್. ಮಂಜುಳಾ

ವಿಚಾರ ಸಂಕಿರಣದಲ್ಲಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಸಮಾರೋಪ ಮಾತುಗಳನ್ನಾಡಿದರು. ವೇದಿಕೆ ಮೇಲೆ ಎಸ್. ಪಿ. ಸಂಶಿಮಠ, ಶ್ರೀಮತಿ ರಜನಿ ಪಾಟೀಲ, ಹಿರಿಯ ಸಾಹಿತಿ ಅನ್ನದಾನಿ ಹಿರೇಮಠ, ಪ್ರೊ. ಪಿ. ಜಿ. ಪಾಟೀಲ, ಡಾ. ಡಿ. ಬಿ. ಗವಾನಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

Download Eedina App Android / iOS

X