ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸುತ್ತಿದ್ದಾಗ ಜಾರಿ ಬೀಳುವ ಸಮಯದಲ್ಲಿ ಪ್ರಯಾಣಿಕರೆಲ್ಲ ಕೈಹಿಡಿದು ಎಳೆದುಕೊಂಡು ಬಾಲಕನ ಜೀವ ಉಳಿದಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ರೈಲು ನಿಲ್ದಾಣದಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ರಾಣೆಬೆನ್ನೂರು ರೈಲು ನಿಲ್ದಾಣದಿಂದ ಕದಲಿದಾಗ 10 ವರ್ಷದ ಬಾಲಕ ಚಲಿಸುತ್ತಿರುವ ರೈಲು ಗಾಡಿಯನ್ನು ಹತ್ತಲು ಪ್ರಯತ್ನಿಸಿದ್ದಾನೆ. ಇನ್ನೇನು ಹಳಿಗೆ ಜಾರುತ್ತಾನೆ ಎನ್ನುವಷ್ಟರಲ್ಲಿ ಗಾಡಿಯಲ್ಲಿದ್ದ ಪ್ರಯಾಣಿಕರು ಕೈಹಿಡಿದು ಎಳೆದುಕೊಂಡಿದ್ದು, ಗಾಬರಿಯಾಗಿದ್ದ ಜನರೆಲ್ಲ ಅಬ್ಬಾ! ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾಂಪೌಂಡ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು