ರಂಗಪಂಚಮಿ ಹಿನ್ನಲೆಯಲ್ಲಿ ಬಣ್ಣದಾಟವಾಡಿ ಬಾವಿ ಸ್ನಾನಕ್ಕೆ ಹೋಗಿದ್ದ ವೇಳೆ ಇಬ್ಬರು ಬಾಲಕರು ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.
ವೇದಾಂತ ಹಿರೇಕೋಡಿ (11), ಮನೋಜ ಕಲ್ಯಾಣಿ (09) ಸಾವನ್ನಪ್ಪಿದ್ದು. ಯಕ್ಸಂಬಾ ಪಟ್ಟಣದಲ್ಲಿ ರಂಗ ಪಂಚಮಿ ನಿಮಿತ್ತ ಬಣ್ಣ ಆಡಿದ್ದ ಮಕ್ಕಳು ಬಾವಿ ನೀರಿನಲ್ಲಿ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಸದಲಗಾ ಠಾಣೆಯ ಪೋಲಿಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ