ಬೆಂಗಳೂರಿನ ಹಕ್ ಹೌಸ್ ಸಭಾಂಗಣದಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ʼಬರು ನೊಂಬು ತರಕುವʼ ಎಂಬ ಇಫ್ತಾರ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಮಿಟಿಯ ಅಧ್ಯಕ್ಷರೂ ಆಗಿರುವ ಶಬೀರ್ ಬ್ರಿಗೇಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವು ಮೆಜೆಸ್ಟಿಕ್ ವಿಸ್ಡಮ್ ಮಸೀದಿ ಖತೀಬರಾದ ಮೌಲಾನ ಶಾಫಿ ಸ’ಅದಿ ಉಸ್ತಾದ್ ಇವರ ದುವಾ ಆಶೀರ್ವಚನ ನೀಡಿದರು. ಟಿವಿ 9 ಮಾಧ್ಯಮ ಸಂಸ್ಥೆಯ ಚೀಫ್ ಪ್ರೊಡ್ಯೂಸ್ ರೆಹ್ಮಾನ್ ಹಾಸನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಫ್ತಾರ್ ಕೂಟದಲ್ಲಿ ಸುಲ್ತಾನ್ ಗೋಲ್ಡ್ ಮಾಲಿಕ ರಿಯಾಝ್, ಮಿದ್ಲಾಜ್ ತಂಗಳ್, ಉಮರ್ ಹಾಜಿ, ಅಡ್ವೋಕೇಟ್ ನೌಫಲ್ ಮರ್ಝುಕಿ, ಎಂಎಂವೈಸಿ ಅಧ್ಯಕ್ಷ ಅಬೂಬಕ್ಕರ್, ಹನೀಫ್ ಡಿಫೈನ್, ಮುಸ್ತಫಾ ಅರ್ಮನ್, ಕರಾವಳಿ ಫ್ರೆಂಡ್ಸ್ ಮಲ್ಲೇಶ್ವರಂ ಅಧ್ಯಕ್ಷ ಉಬೈದ್, ಬಿಸಿಸಿ ನಾಯಕ ಅನ್ವರ್ ರಾಜಾಜಿನಗರ, ಅಯ್ಯುಬ್ ಕೋರಮಂಗಲ, ಬಶೀರ್ ಅಡ್ಯನಡ್ಕ, ಬೆಂಗಳೂರಿನಲ್ಲಿ ನೆಲೆಸಿರುವ ನೂರಾರು ಬ್ಯಾರಿ ಸಮುದಾಯದವರು ಭಾಗವಹಿಸಿದ್ದರು.
ಇದನ್ನೂ ಓದಿ: ಬೆಂಗಳೂರು | ಬೆಳ್ಳಂಬೆಳಗ್ಗೆ ಭೀಕರ ಅಪಘಾತ; 2 ವರ್ಷದ ಮಗು ಸೇರಿ ಇಬ್ಬರು ಸಾವು