“ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ಈ ದೇಶದಿಂದ ಓಡಿಸಲು ಅನೇಕ ಚಳುವಳಿ ಹೋರಾಟಗಳನ್ನು ಮಾಡಿದರು. ಶೋಷಿತರಗೆ ನ್ಯಾಯ ಕೊಡಿಸುವಲ್ಲಿ ಶ್ರಮಿಸಿದರು” ಎಂದು ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ. ಎಸ್. ಎಸ್. ತಾಲ್ಲೂಕು ಸಂಚಾಲಕ ಡಿ ಎಚ್ ಪೂಜಾರ ಹೇಳಿದರು.
ಗದಗ ಪಟ್ಟಣದ ಲಯನ್ಸ್ ಕ್ಲಬ್ ಭವನದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ‘ಭಾರತದ ಅಸ್ಪೃಶ್ಯತೆ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹ ನೆನಪಿನಲ್ಲಿ ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
“ಭಾರತದ ಇತಿಹಾಸ ಪುಟಗಳನ್ನು ತಿರುವಿ ಹಾಕಿದಾಗ ನಮ್ಮ ಬದುಕು ಹೇಗಿತೆಂದು ಅಂಬೇಡ್ಕರ್ ಅವರು ಬರೆದಿದ್ದಾರೆ. ಸಾಕಷ್ಟು ನೋವು, ಅವಮಾನಗಳನ್ನು ಅನುಭವಿಸುದ್ದನ್ನು ಬರೆದಿದ್ದಾರೆ. ಈ ನಾಡಿಗೆ ಬ್ಬುದ್ಧ ಬಂದು ಅನೇಕ ಉಪದೇಶಗಳನ್ನು ಸಾರಿದ. ಬಸವನ್ನ ಬ್ರಾಹ್ಮಣ ಜಾತಿಯನ್ನು ತೇಜಿಸಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿ, ಮೇಲು-ಕೀಳು ಅಸಮಾನತೆಯನ್ನು ತೊಡೆದು ಹಾಕಲು ಅಂತರ್ ಜಾತಿ ಮದುವೆಗಳನ್ನು ಮಾಡುವುದರ ಮೂಲಕ ಸಮ ಸಮಾಜವನ್ನು ಕಟ್ಟಲು ಶ್ರಮಿಸಿದರು” ಎಂದು ಹೇಳುದರು.
ಆಡಳಿತಾಧಿಕಾರಿ ತೊಂಟದಾರ್ಯ ಮಠ ಎಸ್ ಎಸ್ ಪಟ್ಟಣಶೆಟ್ಟಿ ಉದ್ಘಾಟಿಸಿ ಮಾತನಾಡಿ, “ಅಂಬೇಡ್ಕರ್ ಅವರು ಆಧುನಿಕ ಅರ್ಥ ಶಾಸ್ತ್ರಜ್ಞರು ಕೂಡ ಆಗಿದ್ದರು. 62 ಪದವಿಗಳನ್ನು ಪಡೆದಿದ್ದರು.” ಎಂದು ಹೇಳಿದರು.
“ತೊಂಟಾದರ್ಯ ಮಠ ಸಿದ್ದಲಿಂಗ ಸ್ವಾಮೀಜಿ ಅವರು ರಾಮಣ್ಣ ಬ್ಯಾಟಿ ಅವರಿಂದ ಅಂಬೇಡ್ಕರ್ ಪುರಾಣ ಬರೆಸಿ, ಮಠದಲ್ಲಿ ಪ್ರವಚನ ಮಾಡಿಸಿದರು” ಎಂದು ಹೇಳಿದರು.
ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಡಿ ಎಸ್ ಎಸ್ ರಾಜ್ಯ ಸಂಘಟನಾ ಸಂಚಾಲಕರು ರಾಮಣ್ಣ ಕಲ್ಲದೇವನಳ್ಳಿ ಮಾತನಾಡಿ, ಅಂಬೇಡ್ಕರ್ ಅವರು ಸಾವಿರಾರು ಜನರೊಂದಿಗೆ ಚೌಡಾರ ಕೆರೆ ಪ್ರವೇಶ ಮಾಡಿ ನೀರು ಮುಟ್ಟಿ ಕುಡಿದರು. ದಲಿತರಿಗೆ ಸ್ವಾಭಿಮಾನದಿಂದ ಬದುಕಲು ಮೊದಲ ಅಡಿಯಿಟ್ಟ ಚಳುವಳಿ ಆಗಿತ್ತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹುಣಸೂರಿನ ಹಾಡಿಗಳಿಗೆ ಭೇಟಿ ನೀಡಿದ ಸಿಇಓ ; ಸಮಸ್ಯೆಗಳ ಆಲಿಕೆ
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಡಿ. ಎಸ್. ಎಸ್. ಜಿಲ್ಲಾ ಸಂಚಾಲಕರು ಬಾಲರಾಜ್ ಅರಬರ್ ವಹಿಸಿದ್ದರು. ಮುಖ್ಯ ಅತಿಥಿಗಳು ಪೊಲೀಸ್ ಅಧಿಕಾರಿ ಡಿ. ವಿ ಪಾಟೀಲ್, ಎಸ್ ಎಸ್ ಮುಖಂಡರು ಬಸವರಾಜ ಕಡೆಮನಿ, ಆನಂದ ಶಿಂಗಾಡಿ, ಶರೀಫ ಬಿಳಿಯಲಿ, ಪೂಜಾ ಬೇವುರು, ನಾಗರಾಜ್ ಗೋಕಾವಿ, ಹಣಮಂತ ಛಲವಾದಿ, ಮೋಹನ್ ಅಲ್ಮೇಲಕರ, ಸತೀಶ್ ಪಾಸಿ, ಹಾಗೂ ಡಿ ಎಸ್ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಮುತ್ತು ಬಿಳಿಯಲಿ ನಿರೂಪಿಸಿದರು.