ಬಯೋಗ್ಯಾಸ್ ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಲಾರಿ ಸುಟ್ಟು ಹೋದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಗೋಡ ಮುಖ್ಯ ರಸ್ತೆಯಲ್ಲಿ ಮುರಗೋಡ ಸಮೀಪ ನಡೆದಿದೆ.
ಬೈಲ ಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಕಾರ್ಖಾನೆಯಿಂದ ಬಯೋಗ್ಯಾಸ್ ತುಂಬಿಕೊಂಡು ಯರಗಟ್ಟಿ ಕಡೆಗೆ ಸಾಗುತ್ತಿದ್ದ ಕಿತ್ತೂರಿನ ಪ್ರಕಾಶ ಎಂಬುವವರಿಗೆ ಸೇರಿದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿ. ರೂ. 10 ಲಕ್ಷ ಹಾನಿಯಾಗಿದೆ.
ಬೈಲಹೊಂಗಲ ಅಗ್ನಿ ಶಾಮಕ ಉಪ ಠಾಣಾಧಿಕಾರಿ ಶಿವಾನಂದ ವಾಲಿಶೆಟ್ಟಿ, ರಮೇಶ ತಪರಿ, ಕಲ್ಲಪ್ಪ ಹುಚ್ಚನ್ನವರ, ರಾಹುಲ ಹೋಮಕರ, ಶಿವಪ್ಪ ಅಂಬಿಗಿ, ಸಿಬ್ಬಂದಿಗಳು ಸತತ ಮೂರು ಗಂಟೆಗಳ ಕಾಲ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.