ಮೋದಿಯನ್ನು ಹೊಗಳುವ ಅಮೆರಿಕ ಅಧ್ಯಕ್ಷರ ಅಸಲಿಯತ್ತೇನು? ಇಲ್ಲಿದೆ ನೋಡಿ…

Date:

Advertisements

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಪ್ರವಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಹ್ವಾನದ ಮೇರೆಗೆ ತಮ್ಮ ಒಂಭತ್ತು ವರ್ಷಗಳ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಭೇಟಿ ನೀಡಿದ್ದಾರೆ.

ವಿಶ್ವದ ದಿಗ್ಗಜ ಹಾಗೂ ಶ್ರೀಮಂತ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದರಿಂದ ಆರ್ಥಿಕವಾಗಿ ಭಾರತಕ್ಕೆ ಸಾಕಷ್ಟು ಲಾಭವಾಗುವುದು ಎಂದು ಬಿಜೆಪಿ ಭಕ್ತರು ಸಂಭ್ರಮಿಸುತ್ತಿದ್ದಾರೆ. ಆದರೆ ಅಮೆರಿಕ ಆಹ್ವಾನದ ಅಸಲಿ ಉದ್ದೇಶವೇ ಬೇರೆಯಿದೆ.

ಸತ್ಯಗಳ ಮೇಲೆ ಸಾಮಾಜಿಕ ಕಾರ್ಯಕರ್ತೆ ಭಾವಿಕಾ ಕಪೂರ್‌ ತಮ್ಮ ಟ್ವೀಟ್‌ ಮೂಲಕ ಬೆಳಕು ಚೆಲ್ಲಿದ್ದಾರೆ.

Advertisements

“ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತ ತನ್ನ ದೊಡ್ಡ ಸ್ನೇಹಿತ ಎಂದು ಮೋದಿಯವರನ್ನು ಆಹ್ವಾನಿಸಿಲ್ಲ. ಬದಲಿಗೆ ಆ ದೇಶದ ಹದಗೆಟ್ಟ ಆರ್ಥಿಕ ಸ್ಥಿತಿಯಿಂದಾಗಿ, ಅಮೆರಿಕ ತನ್ನ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿಯನ್ನು ಹಲವು ಟ್ರಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಆಹ್ವಾನಿಸುತ್ತಿದೆ. ಭಾರತದಲ್ಲಿ ಮೋದಿ ಮಾತ್ರವಲ್ಲದೆ ಬೇರೆ ಯಾರೇ ಪ್ರಧಾನಿಯಾಗಿದ್ದರೂ ಈ ಪರಿಸ್ಥಿತಿಯಲ್ಲಿ ಅಮೆರಿಕದಿಂದ ಇದೇ ರೀತಿಯ ಸ್ವಾಗತ ಪಡೆಯುತ್ತಿದ್ದರು” ಎಂದು ತಿಳಿಸಿದ್ದಾರೆ.

“ಒಪ್ಪಂದದ ಪ್ರಕಾರ ಭಾರತವು ಅಮೆರಿಕನ್ ಡ್ರೋನ್‌ಗಳನ್ನು ಖರೀದಿಸಲಾಗುವುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಬೇರೆ ಇನ್ನೇನು ಖರೀದಿಸಲಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರಧಾನಿಯವರು ಎಷ್ಟು ಕೋಟಿ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಇವೆಲ್ಲವನ್ನು ಬಹಿರಂಗಪಡಿಸದಿರುವುದು ಕೂಡ ಭಾರತದ ಪ್ರಧಾನಿಯ ಬಗ್ಗೆ ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಲು ಕಾರಣವಾಗಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

“ಇವೆಲ್ಲ ಕಾರಣದಿಂದ, ದಡ್ಡ ಗೋಧಿ ಮಾಧ್ಯಮಗಳು ಮೋದಿಯನ್ನು ವ್ಯಕ್ತಿಗತವಾಗಿ ವೈಭವೀಕರಿಸುವುದು, ಹಣ ಕೊಟ್ಟು ಜನಸಂದಣಿ ತೋರಿಸುವ ಸಂಭ್ರಮ, ಸಂಘಿ ಕಾರ್ಯಕರ್ತರು ಆಯೋಜಿಸುತ್ತಿರುವ ಕಾರ್ಯಕ್ರಮಗಳು ಮತ್ತು `ಮೋದಿ-ಮೋದಿ-ಮೋದಿ’ ಎಂಬ ಘೋಷಣೆಗಳು ಎಲ್ಲವೂ ಮೂರ್ಖತನದ ಪರಮಾವಧಿಯಾಗಿದೆ. ಒಬ್ಬ ವ್ಯಕ್ತಿಯ ವೈಭವೀಕರಣಕ್ಕಾಗಿ ತೆರಿಗೆ ಪಾವತಿದಾರರ ಹಣ ಸಂಪೂರ್ಣ ಪೋಲಾಗುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ತನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ಮುಂದಾದ ವೈ ಎಸ್‌ ಶರ್ಮಿಳಾ

“ಇಲ್ಲಿ ನಾವೆಲ್ಲರೂ ನೆನಪಿಡಬೇಕಾಗಿರುವುದೇನೆಂದರೆ, ಇದು ಭಾರತದ ಪ್ರಧಾನಿಯ ಭೇಟಿಯೇ ವಿನಃ ವೈಯಕ್ತಿಕವಾಗಿ ಮೋದಿ ಭೇಟಿ ಅಲ್ಲ. ಅಮೆರಿಕಕ್ಕೆ ಲಾಭ ಮಾಡಿಕೊಡುವ ಸಾವಿರಾರು ಕೋಟಿಯ ಶಸ್ತ್ರಾಸ್ತ್ರ ಖರೀದಿ ಭೇಟಿಯ ಏಕೈಕ ಉದ್ದೇಶವಾಗಿದೆ” ಎಂದು ವಾಸ್ತವವನ್ನು ತೆರದಿಟ್ಟಿದ್ದಾರೆ.

ಪ್ರಧಾನಿ ಮೋದಿ ಅಮೆರಿಕಾದ ನೆಲಕ್ಕೆ ಬಂದಿಳಿಯುವ ಮುನ್ನವೇ, ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬೆ ಮಾತನಾಡಿ, “ಭಾರತ ಸೂಪರ್ ಪವರ್ ರಾಷ್ಟ್ರ ಆಗಲು ನಾವು ಬೆಂಬಲಿಸುತ್ತೇವೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಆಳವಾದ ಸಂಬಂಧವನ್ನು ಸುಧಾರಿಸಲು ನಾವು ಬಯಸುತ್ತೇವೆ. ಇದು ಶ್ವೇತಭವನದಲ್ಲಿ ಬಹಳ ಮುಖ್ಯವಾದ ವಾರವಾಗಲಿದೆ. ಮೋದಿ ಅವರ ಈ ಭೇಟಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ” ಎಂದು ಹಾಡಿ ಹೊಗಳಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X