ಯಾದಗಿರಿ ನಗರದ ಕೋಟೆಗಾರವಾಡದಲ್ಲಿ ಭೋದಿ ಸತ್ವ, ಸಂವಿಧಾನ ಶಿಲ್ಪಿ, ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ ಅಧ್ಯಕ್ಷರಾಗಿ ಶಿವುಕುಮಾರ್ ಗಿರಿಪ್ಪನೋರ್ ಆಯ್ಕೆಯಾಗಿದ್ದಾರೆ.
ಅಂಬೇಡ್ಕರ್ ಜಯಂತಿ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾಜಿ ಅಧ್ಯಕ್ಷ ತಾಯಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದು, ನಗರದ ಹಿರಿಯ ಮುಖಂಡರಾದ ಚಂದಪ್ಪ ಮುನಿಯಪ್ಪನವರ್, ಚಂದ್ರಕಾಂತ್ ಮುನಿಯಪ್ಪನೂರ್, ಸೈದಪ್ಪ ಕೂಲೂರ್, ನಗರದ ಹಿರಿಯರು, ಕಿರಿಯರು ಸರ್ವಾನುಮತದಿಂದ ಶಿವಕುಮಾರ್ ಗಿರೆಪ್ಪನೋರ್ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಸೈದಪ್ಪ ಕೂಲೂರಕರ್ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್ ಭಾವಚಿತ್ರ ಅಳವಡಿಕೆ; ಕುರುಬ ಸಮುದಾಯಕ್ಕೆ ಬಹಿಷ್ಕಾರ
ಸುರೇಶ ನಾಯಕ್, ಬಸಪ್ಪ ಗಿರಿಪ್ಪನೋರ್, ಆಂಜನೇಯ ಕೌಳೂರ್, ಮಲ್ಲಪ್ಪ ಹಳ್ಳಿ, ಬಸಪ್ಪ ಕಾಂಚಗಾರಳ್ಳಿ, ತಿಪ್ಪಣ್ಣ, ಬಸಪ್ಪ ಅರಿಕೇರಿ, ಮಂಜುನಾಥ ಹಳ್ಳಿ, ರಾಹುಲ್ ಕೊಲ್ಲೂರಕರ್, ರಮೇಶ್ ಕ್ಯಾತ್ನಾಳ್ ಸೇರಿದಂತೆ ಇತರರು ಇದ್ದರು.
ವರದಿ – ಸಿಟಿಜನ್ ಜರ್ನಲಿಸ್ಟ್: ರಾಹುಲ್ ಕೊಲ್ಲೂರಕರ್