ಉಪವಾಸ ಹಸಿವನ್ನು ಅರಿಯುದರ ಜೊತೆಗೆ ಅಂಗಾಂಗಗಳನ್ನು ಹತೋಟಿಯಲ್ಲಿಡುವ ಉಪವಾಸ ಆಗಬೇಕು. ಕೇವಲ ಹಸಿವು, ಬಾಯಾರಿಕೆಯನ್ನು ತಡೆದಿಟ್ಟು ಕೊಂಡು ಪ್ರಭಾತದಿಂದ, ಸಂಜೆಯ ತನಕ ದಿನ ನಿತ್ಯದಂತೆ ಜೀವನ ಸಾಗಿಸಿದರೆ ಸಾಲದು. ಬದಲಾಗಿ ಓರ್ವ ಸತ್ಯ ವಿಶ್ವಾಸಿಯಾಗಿ ಉಪವಾಸ ಆಚರಿಸುತ್ತಾನೆ ಎಂದಾದರೆ, ಆತನ ದೇಹದಲ್ಲಿ ಇರುವ ಎಲ್ಲಾ ಅಂಗಾಂಗಗಳು ದೇವನ ಆಜ್ಞೆಯನ್ನು ಅನುಸರಿಸುವ ರೂಪದಲ್ಲಿ ಉಪವಾಸ ಆಚರಿಸಬೇಕು. ಹೀಗಾದಲ್ಲಿ ಆತನು ಉಪವಾಸವೆಂಬ ಆರಾಧನೆಯಿಂದ ದೇವನ ಸಾಮಿಪ್ಯ ಗಳಿಸಲು ಸಾಧ್ಯವಿದೆ ಎಂದು ಜಮಾ ಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲೆಯ ನಿಕಟಪೂರ್ವ ಜಿಲ್ಲಾ ಸಂಚಾಲಕರರಾದ ಜನಾಬ್ ಎಮ್ ಶಬ್ಬೀರ್ ಮಲ್ಪೆ ಯವರು ಹೇಳಿದರು.
ಇವರು ಜಮಾ ಅತೆ ಇಸ್ಲಾಮಿ ಹಿಂದ್, ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಯವರು ತಮ್ಮ ಮನೆಯಾದ ತೌಹೀದ್ ಮಂಝಿಲ್ ನಲ್ಲಿ, ಇಫ್ತಾರ್ ಕಾರ್ಯಕ್ರಮ ಹಮ್ಮಿಕೊಂಡ್ಡು, ಅವರ ಸಂಪರ್ಕದಲ್ಲಿ ಇರುವ ಮಿತ್ರರನ್ನು ಕರೆದಿದ್ದು, ಅವರನ್ನು ಉದ್ದೇಶಿಸಿ ಮಾತನಾಡಿದರು. ಮುಂದುವರಿಯುತ್ತಾ ಅವರು, ರಮ್ ಝಾನ್ ತಿಂಗಳಲ್ಲಿ, ಇಸ್ಲಾಮ್ ಧರ್ಮದಲ್ಲಿರುವ ಆರಾಧನ ಕರ್ಮಗಳನ್ನು ಯಥಾ ವತ್ತಾಗಿ ಪಾಲಿಸಿಕೊಂಡು ಬಂದಾಗ ಆತನು ಸಂಪೂರ್ಣವಾಗಿ ತರಭೇತಿ ಪಡೆದುಕೊಂಡು , ಗಳಿಸಿದ ಉತ್ತಮ ಗುಣಗಳನ್ನು ಉಳಿದ ತಿಂಗಳುಗಳಲ್ಲಿಯೂ ಪಾಲಿಸಿಕೊಂಡು ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅನ್ವರ್ ಅಲಿ ಯವರು ಕುರ್ ಆನ್ ಪಠಿಸಿ ಅದರ ಅರ್ಥವನ್ನು ತಿಳಿಸುತ್ತಾ, ಈ ಗ್ರಂಥ ಅಲ್ಲಾಹನ ವತಿಯಿಂದ ಬಂದ ಅಂತಿಮ ಗ್ರಂಥ ಆಗಿದ್ದು, ಇದು ಸಕಲ ಮಾನವರ ಮಾರ್ಗದರ್ಶನಕ್ಕೆ ಕಳುಹಿಸಿ ಕೊಡಲಾದ ಗ್ರಂಥ ಆಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಅಧ್ಯಯನ ಮಾಡಬೇಕು ಎಂದರು. ತದ ನಂತರ, ಸಂವಾದದಲ್ಲಿ ವಾಗ್ಮಿ, ಸಂಸ್ಕೃತದ ವಿದ್ವಾಂಸರು ಕೆ. ಗಣೇಶ್ ಭಟ್ ರವರು ಇಸ್ಲಾಮ್ ಧರ್ಮದ ಸಾರ ಮತ್ತು ಅನುಸರಣಾ ಕ್ರಮ ನಮಗೆ ತುಂಬಾ ಇಷ್ಟ ಆಗುತ್ತದೆ.

ಮುಸ್ಲಿಮರು ಅವರ ಗುರುಗಳಾದ ಪ್ರವಾದಿ ಮುಹಮ್ಮದ್ (ಸ ) ರವರ ಮಾತುಗಳನ್ನು ಭಕ್ತಿ ಪೂರ್ವಕವಾಗಿ ಅನುಸರಿಸಿಕೊಂಡ್ಡು ಬರುತ್ತಿರುವುದು ಮೆಚ್ಚಲೇ ಬೇಕು. ವಸುದೈವ ಕುಟುಂಬಕಮ್ ಎನ್ನುವ ಭಾರತ ದೇಶದಲ್ಲಿ, ಸರ್ವರೂ ಸಮಾನರು ಎನ್ನುತ್ತಾ. ವೇದದಲ್ಲೂ ಕೂಡಾ ಉಪವಾಸ ಅಂದರೆ, ದೇವನನ್ನು ನೇರವಾಗಿ ಸಂಪರ್ಕಿಸುವ ದಾರಿಯಾಗಿದೆ ಎಂದು ಹೇಳಿದರು.
ಈ ಮೀಡಿಯಾ ದ ಸಂಪಾದಕರಾದ, ಬಾಲಕೃಷ್ಣ ಪೂಜಾರಿಯವರು, ಉಪವಾಸ ಆಚರಣೆಯಿಂದ, ಮನುಷ್ಯನಲ್ಲಿ ಶಿಸ್ತು ಮೂಡುತ್ತದೆ ಮತ್ತು ಆತನು ಫಿಟ್ನೆಸ್ ಆಗಿ ಇರುತ್ತಾನೆ. ಅದಕ್ಕಾಗಿ ನಾನು ಕೂಡಾ ಉಪವಾಸವನ್ನು ಮೆಚ್ಚುತ್ತೇನೆ ಮತ್ತು ನಾನು ಪಾಲಿಸುವ ಧರ್ಮದ ಪ್ರಕಾರ ಆಚರಿಸುತ್ತೇನೆ ಎಂದರು.
ಮಜೂರು ಗ್ರಾಮ ಪಂಚಾಯತ್ ಸದಸ್ಯರಾದ, ಬಾಸ್ಕರ ಪೂಜಾರಿಯವರು ಉಪವಾಸದಲ್ಲಿ ಶ್ರೀಮಂತರಿಗೆ ಹಾಗೂ ಬಿಸಿಲಿನಲ್ಲಿ ದುಡಿಯುವ ಕೆಲಸದವರಿಗೆ ರಿಯಾಯಿತಿ ಇದೆಯಾ ಎಂದು ಕೇಳುತ್ತಾ ತನ್ನ ಸಂಶಯವನ್ನು ದೂರೀಕರಿಸಿ ಕೊಂಡರು.
ನಮ್ಮ ಕಾಪು ಮಾಧ್ಯಮದ ವರದಿಗಾರರಾದ ದೀಪಕ್ ಬೀರಾ ರವರು, ಒಂದೆಡೆ ಧರ್ಮ ಧರ್ಮಗಳ ನಡುವೆ ಬಿರುಕು ಬೀರುತ್ತಿರುವ ಸಮಯದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು. ಒಂದಷ್ಟು ಸಮಯದ ಧಾರ್ಮಿಕ ಚಿಂತನೆಯ ಅನಾವರಣದ ಸಂವಾದ ನಡೆಯುತ್ತಿರಬೇಕು ಎಂದರು.
ಅರುಣ್ ಕಾಮತ್ ರವರು ಕೂಡಾ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಸಭೆಯಲ್ಲಿ ಸಾಲಿದಾರಿಟಿ ಯೂತ್ ಮೂವ್ಮೆಂಟ್ ನ ಜಿಲ್ಲಾ ಹೊಣೆಗಾರರದ ಶಾರುಖ್ ತೀರ್ಥಹಳ್ಳಿ, ಜಮಾ ಅತೆ ಇಸ್ಲಾಮಿ ಸ್ಥಾನೀಯ ವರ್ತುಲದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್ ಉಪಸ್ಥಿತರಿದ್ದರು. ಕೊನೆಯಲ್ಲಿ ಆಹ್ವಾನಿತರಿಗೆ ನೆನಪಿನ ಕಾಣಿಕೆ ಹಾಗೂ ಉಪಹಾರವನ್ನು ನೀಡಲಾಯಿತು.
ಧನ್ಯವಾದಗಳು 💐💐💐
Assalamu Alikum warahmatullahi wabarakatuhu
Mashallah