ಶಿವಮೊಗ್ಗದ ವಿದ್ಯಾನಗರ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ವೀಲಿಂಗ್ ಮಾಡುವ ವಿಡಿಯೋವೊಂದನ್ನ ರೆಕಾರ್ಡ್ ಮಾಡಿ ವೈರಲ್ ಮಾಡಿದ ಬೆನ್ನಲ್ಲೇ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸರು ಆತನನ್ನ ಪತ್ತೆಹಚ್ಚಿ ನ್ಯಾಯಾಲಯದಿಂದ ದಂಡ ವಿಧಿಸುವಂತೆ ಮಾಡಿದ್ದಾರೆ.
ತುಂಗ ನಗರದ ನವಾಸಿ ಮೊಹಮ್ಮದ್ ತಬ್ರಕ್ ಉಲ್ಲಾ (23) ಬ್ರಿಡ್ಜ್ ಮೇಲೆ ಕೆಎ 14 ಎಲ್ 8242 ಕ್ರಮ ಸಂಖ್ಯೆಯ ಟಿವಿಎಸ್ ಫಿಯಾರೋ ವಾಹನದಲ್ಲಿ ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದೆ. ಪಿಎಸ್ಐ ನವೀನ್ ಕುಮಾರ್ ಮಠಪತಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಪರಿಣಾಮ ವೀಲಿಂಗ್ ಮಾಡುವ ಹುಚ್ಚಿಗೆ ಬಿದ್ದವ ನ್ಯಾಯಾಲಯದಲ್ಲಿ ದಂಡ ತೆತ್ತಿದ್ದಾನೆ.
ಇನ್ನು ಶಿವಮೊಗ್ಗ ಸಂಚಾರಿ ಪೊಲೀಸರು ಘಟನೆ ಸಂಬಂಧ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
https://www.facebook.com/share/v/15X5iVyiwG
ಇದನ್ನೂ ಓದಿ: ಶಿವಮೊಗ್ಗ | ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ