2025ರ ಐಪಿಎಲ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದೆ. ಟೂರ್ನಿಗಾಗಿ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಮೊದಲ ಪಂದ್ಯವು ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಕೋಲ್ಕತ್ತಾದಲ್ಲಿ ನಡೆಯಲಿದೆ. ಸಿದ್ದತೆಗಳು ನಡೆಯುತ್ತಿವೆ. ಈ ನಡುವೆ, ಸಿಎಸ್‌ಕೆ ತಂಡದ ಮಾಜಿ ಆಟಗಾರ ಸುಬ್ರಮಣಿಯಂ ಬದ್ರಿನಾಥ್ ಅವರ ಮೀಮ್ಸ್‌ಅನ್ನು ಸೃಷ್ಟಿಸಿ, ಹಂಚಿಕೊಂಡು ಆರ್‌ಸಿಬಿ ಕಾಲೆಳೆದಿದ್ದಾರೆ.
ಬದ್ರಿನಾಥ್ ಅವರು ಮೀಮ್ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆರ್‌ಸಿಬಿಯನ್ನು ಅಣಕಿಸಿದ್ದಾರೆ. ಮೀಮ್ಸ್‌ನಲ್ಲಿ ಬದ್ರಿನಾಥ್ ಅವರೂ ಕೂಡ ಸಿಎಸ್‌ಕೆ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಸರದಿಯಲ್ಲಿ ನಿಂತಿರುವ ಇತರ ತಂಡಗಳ ಪ್ರತಿನಿಧಿಗಳೊಂದಿಗೆ ಕೈಕುಲುಕುವುದು ಮತ್ತು ಕೆಲವರನ್ನು ಅಪ್ಪಿಕೊಳ್ಳುವುದನ್ನು ಮಾಡಿದ್ದಾರೆ. ಆದರೆ, ಆರ್‌ಸಿಬಿ ಪ್ರತಿನಿಧಿಯನ್ನು ಆಲಿಂಗಿಸುವ ಸರದಿ ಬಂದಾಗ, ಬದ್ರಿನಾಥ್ ಅವರು ಆರ್‌ಸಿಬಿಯನ್ನು ನಿರ್ಲಕ್ಷಿಸಿ ಇನ್ನೊಂದು ತಂಡದತ್ತ ಸಾಗುತ್ತಾರೆ.
ಬದ್ರಿನಾಥ್ ಅವರ ಮೀಮ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯವನ್ನು ಪ್ರತಿಷ್ಠೆಯ ಪಂದ್ಯವನ್ನಾಗಿ ಉಭಯ ತಂಡಗಳ ಅಭಿಮಾನಿಗಳು ಮಾಡಿದ್ದಾರೆ. ಇದರಲ್ಲಿ ಈ ತಂಡಗಳ ಕೆಲವು ಆಟಗಾರರ ಪಾತ್ರವೂ ಇದೆ. ಆರ್‌ಸಿಬಿ ತನ್ನ ಚೊಚ್ಚಲ ಕಪ್ ಗೆಲ್ಲಲು ಕಸರತ್ತು ನಡೆಸುತ್ತಿದೆ. ಐದು ಬಾರಿ ಕಪ್ ಗೆದ್ದಿರುವ ಸಿಎಸ್‌ಕೆ ಮತ್ತೊಂದು ಕಪ್ ಗೆಲ್ಲಲು ತವಕಿಸುತ್ತಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಎರಡು ಪಂದ್ಯಗಳು ನಡೆಯಲಿವೆ.