ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ‘ ವಿದ್ಯುತ್ ಸಂಪರ್ಕ ಪಡೆಯಲು ನಿಗದಿತ ಹಣಕ್ಕಿಂತ ದುಪ್ಪಟ್ಟಾಗಿ ರೈತರಿಂದ ಗುತ್ತಿಗೆದಾರರು ಹಣ ಸುಲಿಗೆ ಮಾಡುತಿದ್ದು ದಂಧೆಯಾಗಿ ಪರಿಣಮಿಸಿದೆ. ಕೂಡಲೇ ಸಂಭಂದ ಪಟ್ಟ ಅಧಿಕಾರಿಗಳು, ಸರ್ಕಾರ ಎಚ್ಚೆತ್ತುಕೊಳ್ಳದೆ ಇದ್ದಲಿ ಜಿಲ್ಲೆಯ ಎಲ್ಲಾ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
” ರೈತರು ವಿದ್ಯುತ್ ಸಂಪರ್ಕ ಪಡೆಯಲು ವಿದ್ಯುತ್ ಇಲಾಖೆ ಐಪಿ ಸೆಟ್ 5 ಹೆಚ್ ಪಿ ಗೆ ₹ 7,400 ನಿಗದಿಪಡಿಸಿದೆ. ಗುತ್ತಿಗೆದಾರರು ರೈತರಿಂದ 15 ಸಾವಿರದಿಂದ 18 ಸಾವಿರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದು, ದೊಡ್ಡ ದಂಧೆಯಾಗಿ ಮಾಡಿಕೊಂಡಿದ್ದಾರೆ ” ಎಂದು ಆರೋಪಿಸಿದರು.
” ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವುದಾಗಲಿ, ಅಗತ್ಯಕ್ಕನುಗುಣವಾಗಿ ಹೊಸ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸುವುದಾಗಲಿ ಸಾಧ್ಯವಾಗದಂತಾಗಿದೆ. ಸರ್ಕಾರದ ಈ ನಿಲುವಿನಿಂದ ರೈತರು ಹೊಸ ಸಂಪರ್ಕವನ್ನು ಪಡೆಯಲು 2 ಲಕ್ಷ ರೂಪಾಯಿಗಳ ಹಣ ಸಂದಾಯ ಮಾಡಿ ವಿದ್ಯುತ್ ಸಂಪರ್ಕ ಪಡೆಯುವ ಕೆಟ್ಟ ಪರಿಸ್ಥಿತಿ ಒದಗಿ ಬಂದಿದೆ.ವೈಜ್ಞಾನಿಕ ಬೆಲೆ ಸಿಗುವವರೆಗೆ ವಿದ್ಯುಚ್ಛಕ್ತಿ ಬಿಲ್ಲನ್ನು ಕಟ್ಟುವುದಿಲ್ಲ ಎಂದು ರೈತ ಸಂಘ ಹೋರಾಟ ಮಾಡಿದರ ಫಲವಾಗಿ 10 ಹೆಚ್ ಪಿ ವರೆಗೆ ವಿದ್ಯುಚ್ಛಕ್ತಿ ಉಚಿತವಾಗಿ ನೀಡಲು ಸರ್ಕಾರವು ಘೋಷಣೆ ಮಾಡಿದೆ”.
ಆದರೆ, ಇತ್ತೀಚಿನ ದಿನಗಳಲ್ಲಿ ರೈತರು ವಿದ್ಯುಚ್ಛಕ್ತಿ ಪಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಈ ರೈತ ವಿರೋಧಿ ನೀತಿಯನ್ನು ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ಗಮನಕ್ಕೆ ತಂದರೂ ಕೂಡ ರೈತರಿಗಾಗುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೊಸ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸದ ಕಾರಣ ರೈತರಿಗೆ ಅಪಾರ ನಷ್ಟ ಉಂಟಾಗುತ್ತಿದೆ. ಕಾರಣ ಅಗತ್ಯತೆಗೆ ಮೀರಿದ ಸಂಪರ್ಕವನ್ನು ಪಡೆದುಕೊಂಡಿರುವ ರೈತರಿಗೆ ಹಿಂದಿನಂತೆ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸದೆ ವೋಲ್ವೇಜ್ ಅಭಾವದಿಂದ ರೈತರ ಪಂಪ್ ಸೆಟ್‌ಗಳು ಸುಟ್ಟು ಹೋಗುತ್ತಿದ್ದು, ಬೆಳೆ ನಷ್ಟಕ್ಕೆ ಒಳಗಾಗುತ್ತಿದ್ದೇವೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಯುವಕ ಸಂಘಗಳಿಗೆ ಕ್ರೀಡಾ ಸಲಕರಣೆ ವಿತರಣೆ
ರೈತರಿಂದ ಹೆಚ್ಚುವರಿಯಾಗಿ ಪಡೆಯುತ್ತಿರುವ ಹಣಕ್ಕೆ ಕಡಿವಾಣ ಹಾಕುವ ಮೂಲಕ ಹಾಗೂ ರೈತರಿಗೆ ತೊಂದರೆಯಾಗದಂತೆ ಇಲಾಖೆಗೆ ಅರಿವು ಮೂಡಿಸಿ, ಕಟ್ಟಬೇಕಾದ ಕನಿಷ್ಠ ಹಣವನ್ನು ಮಾತ್ರ ವಡೆಯಬೇಕು. ಇಲ್ಲವಾದಲ್ಲಿ ರೈತ ಸಂಘವು ಎಲ್ಲಾ ಕಚೇರಿಗಳ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.