- ಬಕ್ರೀದ ಹಬ್ಬ ಆಚರಣೆ ಮಾಡಿ ನಾಡಿಗೆ ಸೌಹಾರ್ದ ಸಂದೇಶವನ್ನು ಸಾರೋಣ
- ಧರ್ಮದ ಅಮಲನ್ನು ನೆತ್ತಿಗೆರಿಸಿಕೊಳ್ಳದೆ ಹಬ್ಬದ ಆಶಯ ಅರ್ಥಮಾಡಿಕ್ಕೊಳ್ಳೋಣ
ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇದನ್ನು ಹಾಳುಮಾಡಲು ಪಟ್ಟಭದ್ರರು ಕುತಂತ್ರ ಮಾಡುತ್ತಿದ್ದಾರೆ. ಅವರನ್ನು ಹೆಡೆಮುರಿ ಕಟ್ಟಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಅಕ್ಷತಾ ಹೇಳಿದ್ದಾರೆ.
ಹಾವೇರಿಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಈ ವೇಳೆ, ಮಾತನಾಡಿದ ಅವರು, “ಸಂತ ಶಿಶುನಾಳ ಶರೀಫ, ಗುರು ಗೋವಿಂದ ಭಟ್ಟ ಹಾಗೂ ದಾಸ ಶ್ರೇಷ್ಠ ಕನಕದಾಸರು ಕಂಡ ನಮ್ಮ ಕನ್ನಡ ನಾಡಿದು. ವಿವಿಧತೆಯಲ್ಲಿ ಏಕತೆಯ ಕಾಣುವ ನಮ್ಮ ನಾಡಿನಲ್ಲಿ ನಾನಾ ಆಚರಣೆ, ಹಲವು ಸಂಪ್ರದಾಯಗಳಿವೆ. ಎಲ್ಲರೂ ಸಹೋದರತ್ವ ಭಾವದಿ ಕಾನೂನು ರೀತಿಯ ಆದೇಶದ ಅನ್ವಯ ಹಬ್ಬವನ್ನು ಆಚರಣೆ ಮಾಡಬೇಕು” ಎಂದು ತಿಳಿಸಿದರು.
“ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಂತಹ ಹಬ್ಬದ ಸಂಭ್ರಮದಲ್ಲಿ ಕೋಮುಗಲಭೆ ಸೃಷ್ಠಿಸಲು, ಶಾಂತಿ ಹಾಳುಮಾಡಲು, ಕ್ಷುಲ್ಲಕ ವಿಚಾರಗಳಿಂದ ಸರ್ವ ಜನಾಂಗದ ಶಾಂತಿಯ ತೋಟದ ಸುಂದರ ವಾತಾವರಣ ಹಾಳು ಮಾಡುವ ಕಾರ್ಯದಲ್ಲಿ ತೋಡಗುತ್ತಾರೆ. ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನಕಣ್ಣು ಇಡಬೇಕು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಾಲಾ ಮಕ್ಕಳಿಗೆ ಬ್ಯಾಗ್ ಭಾರ: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
“ಧರ್ಮದ ಅಮಲನ್ನು ನೆತ್ತಿಗೆರಿಸಿಕೊಳ್ಳದೆ ಹಬ್ಬದ ಆಶಯವನ್ನು ಅರ್ಥಮಾಡಿಕೊಂಡು ನಾವೆಲ್ಲರೂ ಸೇರಿ ಸಂವಿಧಾನ ಬದ್ದವಾಗಿ ಬಕ್ರೀದ ಹಬ್ಬ ಆಚರಣೆ ಮಾಡಿ ನಾಡಿಗೆ ಸೌಹಾರ್ದ ಸಂದೇಶವನ್ನು ಸಾರೋಣ” ಎಂದು ಹೇಳಿದರು.