ಅಂಗನವಾಡಿ ಸಹಾಯಕಿಯೊಬ್ಬರು ಮಗುವಿನ ಕೈಗೆ ಬರೆ ಎಳೆದು, ಡೈಪರ್‌ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಹರಾಜರಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಮೇಶ್ ಹಾಗೂ ಚೈತ್ರಾ ದಂಪತಿಯ ಎರಡೂವರೆ ವರ್ಷದ ಮಗು ದೀಕ್ಷಿತ್ ಮೇಲೆ ಅಂಗನವಾಡಿ ಸಹಾಯಕಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಸಹಾಯಕಿ ಚಂದ್ರಮ್ಮ ವಿರುದ್ಧ ಮಗುವಿನ ಪೋಷಕರು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಂಗನವಾಡಿಯಿಂದ ಮಗು ಕರೆತರಲು ಹೋದಾಗ ಪೋಷಕರಿಗೆ ಹಲ್ಲೆಯ ವಿಚಾರ ತಿಳಿದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಚಂದ್ರಮ್ಮರ ವಿರುದ್ಧ ಶಿಸ್ತುಕ್ರಮ ತೆಗದುಕೊಳ್ಳುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸಿಡಿಪಿಒ ವಿ.ನಾರಾಯಣ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಮನಗರ | ಬಿಡದಿಗೆ ಬಾರದ ಸಾರಿಗೆ ಬಸ್ಸುಗಳು: ಸಾರ್ವಜನಿಕರ ಆಕ್ರೋಶ