ಪತಿಯನ್ನು ಕೊಂದು ಡ್ರಮ್‌ನಲ್ಲಿಟ್ಟಿದ್ದ ಪ್ರಕರಣ; ಪೊಲೀಸರು ಬಿಚ್ಚಿಟ್ಟ ಮಾಹಿತಿಗಳಿವು

Date:

Advertisements

ಮಾಜಿ ಮರ್ಚೆಂಟ್ ನೇವಿ ಅಧಿಕಾರಿಯನ್ನು ಅವರ ಪತ್ನಿ ಮತ್ತು ಆಕೆಯ ಪ್ರೇಮಿ ಕೊಲೆ ಮಾಡಿ, ಡ್ರಮ್‌ನಲ್ಲಿಟ್ಟಿದ್ದ ಪ್ರಕರಣ ಉತ್ತರ ಪ್ರದೇಶದ ಮೀರತ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮಾಟಮಂತ್ರ, ಹಣ ವರ್ಗಾವಣೆ ಸೇರಿದಂತೆ ನಾನಾ ಕೃತ್ಯಗಳು ನಡೆದಿವೆ ಎಂದು ತಿಳಿಸಿದ್ದಾರೆ.

ಮಾಜಿ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಡ್ರಮ್‌ನಲ್ಲಿ ತುಂಬಿ, ಸಿಮೆಂಟ್‌ ಹಾಕಿ ಮುಚ್ಚಿಡಲಾಗಿತ್ತು. ಇತ್ತೀಚೆಗೆ, ಅವರ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಸೌರಭ್ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.

ವಿದೇಶದಲ್ಲಿ ನೆಲೆಸಿದ್ದ ಸೌರಭ್ ತಮ್ಮ ಮಗಳ ಹುಟ್ಟುಹಬ್ಬದ ಆಚರಣೆಗಾಗಿ ಮೀರತ್‌ಗೆ ಬಂದಿದ್ದರು. ಅವರು ಬಂದ ಒಂದು ವಾರದ ಬಳಿಕ, ಮಾರ್ಚ್‌ 4ರಂದು ಅವರನ್ನು ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಪ್ರಾಥಮಿಕ ಹಂತದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು ಹೇಳಿಕೆಗಳ ಆಧಾರದ ಮೇಲೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

Advertisements

ಮಾಹಿತಿ ನೀಡಿರುವ ಮೀರತ್ ನಗರದ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್, “ಪೊಲೀಸರು ಇನ್ನೂ ಕೊಲೆ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಸುತ್ತಿದ್ದಾರೆ. ಸೌರಭ್ ಅವರನ್ನು ತಾವೇ ಕೊಂದಿದ್ದಾಗಿ ಮುಸ್ಕಾನ್ ಮತ್ತು ಸಾಹಿಲ್ ಒಪ್ಪಿಕೊಂಡಿದ್ದಾರೆ. ಸೌರಭ್ ಅವರ ಮೃತದೇಹವನ್ನು ಡ್ರಮ್‌ನಲ್ಲಿ ತುಂಬಿ ಸಿಮೆಂಟ್‌ನಿಂದ ಮುಚ್ಚಿಟ್ಟು, ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಅವರನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಗೆ ಬಳಸಿದ ಆಯುಧವನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

“ಮುಸ್ಕಾನ್ ಮತ್ತು ಸೌರಭ್ 2016ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಮದುವೆಯ ಬಳಿಕ ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು. 2021ರಲ್ಲಿ ಮುಸ್ಕಾನ್ ಅವರು ಸಾಹಿಲ್ ಜೊತೆ ವಿವಾಹೇತರ ಸಂಬಂಧ ಹೊಂದಿರುವುದನ್ನು ಕಂಡ ಸೌರಭ್, ತಮ್ಮ ಪತ್ನಿಯಿಂದ ದೂರ ಉಳಿದಿದ್ದರು” ಎಂದು ಅವರು ತಿಳಿಸಿದ್ದಾರೆ.

“ಮುಸ್ಕಾನ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರು ಸಾಹಿಲ್ ಕೊತೆ 2019ರಿಂದ ವಿವಾಹೇತರ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಸೌರಭ್‌ಗೆ ಇದರ ಬಗ್ಗೆ ತಿಳಿದಿತ್ತು. 2021ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಕುಟುಂಬವು ವಿಚ್ಚೇದನ ಪಡೆಯದಂತೆ ಮತ್ತು ಮುಸ್ಕಾನ್ ಜೊತೆ ಜೀವಿಸುವಂತೆ ಮನವೊಲಿಸಿತ್ತು. ಸಾಹಿಲ್ ಮತ್ತು ಮುಸ್ಕಾನ್ ಇಬ್ಬರೂ ಮದ್ಯ ವ್ಯಸನಿಯಾಗಿದ್ದರು” ಎಂದು ತಿಳಿಸಿದ್ದಾರೆ.

“2023ರಿಂದ, ಸೌರಭ್ ಲಂಡನ್‌ನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 24ರಂದು ಭಾರತಕ್ಕೆ ಮರಳಿದರು. ಆರೋಪಿಗಳು ಫೆಬ್ರವರಿ 25ರಂದು ಅವರನ್ನು ಕೊಲ್ಲಲು ಪ್ರಯತ್ನಿಸಿದರು. ಆದರೆ, ಸಾಧ್ಯವಾಗಿಲ್ಲ. ಅಂತಿಮವಾಗಿ ಮಾರ್ಚ್ 4ರಂದು ಸೌರಭ್‌ನನ್ನು ಕೊಂಂದಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಮಹಾಡ್ ಸತ್ಯಾಗ್ರಹ | ಚವದಾರ್ ನೀರು ಮುಟ್ಟಿ, ಮನುಸ್ಮೃತಿ ಸುಟ್ಟ ಮೊದಲ ದಲಿತ ಬಂಡಾಯ

ಕೊಲೆ ಪ್ರಕರಣದ ತನಿಖೆಗಾಗಿ ಪೊಲೀಸರು ಎರಡು ತಂಡಗಳನ್ನು ರಚಿಸಲಾಗಿದೆ. ಕೊಲೆಗೆ ಬಳಸಲಾಗಿದೆ ಎನ್ನಲಾದ ಡ್ರಮ್ ಮತ್ತು ಇತರ ವಸ್ತುಗಳನ್ನು ಆರೋಪಿಗಳು ಎಲ್ಲಿಂದ ಖರೀದಿಸಿದರು ಎಂಬುದನ್ನು ಪೊಲೀಸರು ಗುರುತಿಸಿದ್ದಾರೆ. ಅಂಗಡಿಯವರನ್ನು ವಿಚಾರಣೆ ಒಳಪಡಿಸಲಾಗಿದೆ. ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲು ಪೊಲೀಸ್ ತಂಡ ಶಿಮ್ಲಾಕ್ಕೆ ತೆರಳಲಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

“ಇದು ಯೋಜಿತ ಕೊಲೆ. ಯಾವುದೇ ಮಾಟಮಂತ್ರದ ಆಯಾಮವಿಲ್ಲ. ಪೂರ್ವಯೋಜನೆಯಂತೆಯೇ ಪಿತೂರಿ ಮಾಡಿ, ಕೊಲೆ ಮಾಡಲಾಗಿದೆ. ಮೃತದೇಹದ ವಿಲೇವಾರಿಗಾಗಿ ಡ್ರಮ್‌ ಬಳಕೆ ಮಾಡಲಾಗಿದೆ. ಅದರೊಂದಿಗೆ ಅವರ ಉದ್ದೇಶ ಏನಿತ್ತು ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ” ಎಂದು ಹೇಳಿದ್ದಾರೆ.

ಸದ್ಯ, ಈ ಕೊಲೆಯ ಬಗ್ಗೆ ಬಿಜೆಪಿಗರು ಹೆಚ್ಚು ಮಾತನಾಡುತ್ತಿಲ್ಲ. ಈ ಬಗ್ಗೆ ಅನೇಕರು ಪ್ರಶ್ನೆಗಳನ್ನು ಎತ್ತಿದ್ದಾರೆ. ಸೌರಭ್ ಹಿಂದುವಾಗಿದ್ದು, ಮುಸ್ಕಾನ್ ಮುಸ್ಲಿಂ ಆಗಿದ್ದರೆ ಪ್ರಕರಣವು ದೇಶಾದ್ಯಂತ ಬೃಹತ್ ಸುದ್ದಿಯಾಗುತ್ತಿತ್ತು. ಪ್ರಕರಣಕ್ಕೆ ಇಲ್ಲದ ‘ಲವ್ ಜಿಹಾದ್’ ಆಯಾಮವನ್ನೂ ಕೊಡಲಾಗುತ್ತಿತ್ತು. ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದವು. ಒಂದು ವೇಳೆ, ಮುಸ್ಕಾನ್ ಹಿಂದುವಾಗಿ, ಸೌರಭ್ ಮುಸ್ಲಿಂ ಆಗಿದ್ದರೆ, ಆಗ ಮುಸ್ಕಾನ್ ಬೆಂಬಲಕ್ಕೆ ಸಂಘಪರಿವಾರ ಇಳಿಯುತ್ತಿತ್ತು. ಹತ್ಯೆಗೀಡಾದವನದ್ದೇ ತಪ್ಪಾಗಿದೆ. ಆತ ಲವ್ ಜಿಹಾದ್‌ಗಾಗಿ ಮುಸ್ಲಾನ್‌ರನ್ನು ಬಲಿಪಶು ಮಾಡಿದ್ದಾರೆ ಎಂಬ ವಾದವನ್ನು ಮುನ್ನೆಲೆಗೆ ತರುತ್ತಿತ್ತು. ಮಾತ್ರವಲ್ಲದೆ, ಈ ಇಬ್ಬರೂ ಹಿಂದುವಾಗಿ, ಸಾಹಿಲ್ ಮುಸ್ಲಿಂ ಆಗಿದ್ದರೂ ಇದೇ ‘ಲವ್ ಜಿಹಾದ್’ ಆಯಾಮವನ್ನು ಕಟ್ಟಿ, ಬೃಹತ್ ದಾಂಧಲೆಗಳು ನಡೆಯುತ್ತಿದ್ದವು. ಆದರೆ, ಮೂವರೂ ಹಿಂದು ಸಮುದಾಯದವರೇ ಆಗಿರುವುದರಿಂದ, ಪ್ರಕರಣದಲ್ಲಿ ಬಿಜೆಪಿಗರಿಗೆ ಯಾವುದೇ ಲಾಭವಿಲ್ಲ. ಹೀಗಾಗಿ, ಬಿಜೆಪಿ-ಸಂಘಪರಿವಾರ ತುಟಿಬಿಚ್ಚುತ್ತಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X