ಮುನಿರತ್ನ ಹನಿಟ್ರ್ಯಾಪ್ ಪ್ರಕರಣ: ಸರ್ಕಾರದಿಂದ ರಕ್ಷಣೆ ಇಲ್ಲ: ಸಂತ್ರಸ್ತೆ ಆರೋಪ

Date:

Advertisements

“ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಮತ್ತು ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಅಂದಿನಿಂದಲೂ ಮುನಿರತ್ನ ನನಗೆ ಕರೆ ಮಾಡಿ ನಿಂದಿಸಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ. ಆದರೆ, ಸರ್ಕಾರದಿಂದ ನಮಗೆ ರಕ್ಷಣೆ ದೊರೆತಿಲ್ಲ” ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಬೆಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆ ಮಾತನಾಡಿ, “ಗುರುವಾರ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಚರ್ಚೆಯಾಗಿದೆ. ಮುನಿರತ್ನ ತಾವೊಬ್ಬ ನಿರಪರಾಧಿ, ಅತ್ಯಾಚಾರ ಎಸಗಿಲ್ಲ ಎಂಬಂತೆ ಮಾತನಾಡಿದ್ದಾರೆ. ಆದರೆ, ಆತನ ದುಶ್ಕೃತ್ಯಗಳು ಒಂದೆರಡಿಲ್ಲ. ತನ್ನೊಂದಿಗಿರುವ ಗನ್‌ಮ್ಯಾನ್‌ಗಳನ್ನೂ ತನ್ನ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ” ಎಂದು ಆರೋಪಿಸಿದ್ದಾರೆ.

“ನನ್ನ ಮೇಲೆ ಅತ್ಯಾಚಾರ ಎಸಗಿಲ್ಲ ಎಂದಾದರೆ, ಶಿವರಾತ್ರಿ ಹಬ್ಬದಂದು ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದೆ. ಮುನಿರತ್ನ ವಿರುದ್ಧ ರಾಮನಗರದಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದೆ. ಪ್ರಕರಣ ಸಂಬಂಧ ಪೊಲೀಸ್ ಆಯುಕ್ತರಿಗೆ ಸಂಪೂರ್ಣ ಮಾಹಿತಿ ನೀಡಿದ್ದೆ. ಪ್ರಕರಣ ದಾಖಲಾದ ನಂತರ, ಮುನಿರತ್ನ ನನಗೆ ಪೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಸರ್ಕಾರದಿಂದ ನಮಗೆ ರಕ್ಷಣೆ ದೊರೆತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisements

“ಇಬ್ಬರು ಪ್ರಭಾವಿ ನಾಯಕರಿಗೆ ಮುನಿರತ್ನ ಹನಿಟ್ರ್ಯಾಪ್ ಮಾಡಿದ್ದಾರೆ. ಆತ ಬಳುಸುತ್ತಿದ್ದ ಸ್ಟುಡಿಯೋ ಆರ್ ಅಶೋಕ್ ಅವರ ಮನೆ ಬಳಿ ಇದೆ. ಮುನಿರತ್ನ ಅವರು ವಿಡಿಯೋ ಮಾಡಿ ನನಗೆ ತೋರಿಸುತ್ತಿದ್ದರು. 15 ವರ್ಷದ ಚಿಕ್ಕ ಹೆಣ್ಣು ಮಕ್ಕಳನ್ನು ಮುನಿರತ್ನ ದುರುಪಯೋಗ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.

“ಈ ಹಿಂದೆ ಒಬ್ಬ ಪೊಲೀಸ್ ಅಧಿಕಾರಿ ಒಬ್ಬರಿಗೆ ಕೆಲವು ಲಿಸ್ಟ್ ಕೊಡ್ತೀನಿ, ಅವರ ಕಾಲಿಗೆ ಶೂಟ್ ಮಾಡಿ ರೌಡಿಶೀಟರ್ ಮಾಡು ಎಂದು ಹೇಳಿದ್ದ. ಆತ ಕಾಲು ಹಿಡಿದ ಅತ್ತ. ನನ್ನ ಮುಂದೆ ನಡೆದ ಘಟನೆ ಇದು. ಇಂಥಹ ಮುನಿರತ್ನ ಗನ್ ಮ್ಯಾನ್ ಬೇಕು, ಪ್ರೊಟೆಕ್ಷನ್ ಬೇಕು ಎಂದು ಹೇಳುತ್ತಾನೆ. ಒಬ್ಬ ರೇಪಿಸ್ಟ್‌ಗೆ ಗನ್‌ ಮ್ಯಾನ್ ಬೇಕಾ? ನನ್ನ ಕುಟುಂಬದಲ್ಲಿ ನಾನು ಎಷ್ಟು ನೋವು ಅನುಭವಿಸುತ್ತಿದ್ದೀನಿ ನನಗೆ ಗೊತ್ತು. ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ಎಳೆದು ತರುತ್ತಿದ್ದಾನೆ. ನಾನು ಇರುವಲ್ಲಿಗೆ ನೀನು ಬಾ. ಇಲ್ಲಾಂದ್ರೆ ಸ್ಪೀಕರ್ ಸರ್ ನೀವು ನನಗೆ ಸೆಷನ್ ಒಳಗಡೆ ಬರುವುದಕ್ಕೆ ಅನುಮತಿ ಕೊಡಿ. ಇದು ನನ್ನ ಕೇಸ್‌ಗೆ ಸಂಬಂಧಪಟ್ಟಿದ್ದ ಮ್ಯಾಟರ್, ಇದಕ್ಕೆ ನಾನು ಪ್ರಮಾಣ ಮಾಡುತ್ತೇನೆ. ಗಾಂಧಿ ಪ್ರತಿಮೆ ಬಳಿ ಬಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದರು.

ಪೊಲೀಸ್ ಮಧುರಾಜ್ ಹನಿಟ್ರ್ಯಾಪ್

“ಮುನಿರತ್ನ ಹೇಳಿದ ಕೆಲಸ ಮಾಡದ ಪೊಲೀಸರ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದಾನೆ. ಯಶವಂತಪುರ  ಮತ್ತು ಪೀಣ್ಯ ಎರಡು ಕಡೆ ಕೆಲಸ ಮಾಡಿದ ಪೊಲೀಸ್ ಸದ್ಯ ಎಸಿಪಿ ಆಗಿರುವ ಮಧುರಾಜ್ ಅವರ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದಾನೆ. ಯಾವ ಮಾಜಿ ಸಿಎಂ ಮೇಲೆ ಹನಿಟ್ರ್ಯಾಪ್ ಆಗಿದೆ ಎಂಬ ಮಾಹಿತಿ ಇದೆ. ಅದು ನನಗೆ ಭದ್ರತೆ ಸಿಕ್ಕರೇ ಮಾತ್ರ ನಾನು ಆ ಬಗ್ಗೆ ಮಾಹಿತಿ ಕೊಡುತ್ತೇನೆ” ಎಂದರು.

“ದುಬೈನ ಒಂದು ನಂಬರ್‌ನಿಂದ ನಾನು ವಿದ್ಯಾ ಹಿರೇಮಠ ಮಾತಾಡಿರುವ ಆಡಿಯೋ ಎಡಿಟ್ ಮಾಡಿ ನನಗೆ ಕಳುಹಿಸಿ ಬೆದರಿಕೆ ಹಾಕುತ್ತಿದ್ದಾನೆ. ನನಗೆ ಭದ್ರತೆ ಬೇಕು. ಕಾರ್ಪೋರೇಟರ್, ಪೊಲೀಸ ಇನ್ ಸ್ಪೆಕ್ಟರ್‌ಗಳ ಹನಿಟ್ರ್ಯಾಪ್ ಮಾಡಿಸಿದ್ದಾನೆ. ಎಸ್‌ಐಟಿ ಮೊಬೈಲ್ ಕೇಳಿದರೆ ಮೊಬೈಲ್ ಕಳೆದು ಹೋಗಿದೆ ಎಂದು ಹೇಳುತ್ತಾನೆ. ಅದೇ ಮೊಬೈಲ್‌ನಲ್ಲಿರುವ ಆಡಿಯೋಗಳನ್ನ ಕಟ್ ಮಾಡಿ ಕಳಿಸಿದ್ದಾನೆ. ಮುನಿರತ್ನ ಮೊಬೈಲ್ ರಿಕವರಿ ಮಾಡುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಉಳಿದ ದಾಖಲಾತಿಗಳು ಕೂಡ ಮುನಿರತ್ನ ಮೊಬೈಲ್‌ನಲ್ಲಿ ಇವೆ. ಹಲವು ಜನರನ್ನ ಹನಿಟ್ರ್ಯಾಪ್ ಮಾಡಿಸಿದ್ದಾನೆ. ಹಲವು ಬಿಜೆಪಿ ಬೆಂಬಲಿಗರ ಹನಿಟ್ರ್ಯಾಪ್ ವಿಡಿಯೋ ಮಾಡಿದ್ದಾನೆ. ಆ ವಿಡಿಯೋಗಳನ್ನೆಲ್ಲಾ ಇಟ್ಟುಕೊಂಡು ಅವರನ್ನ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಆರ್.ಅಶೋಕ್‌ಗೆ ಇಷ್ಟು ಅನ್ಯಾಯ ಆಗಿದ್ದರೂ ಮುನಿರತ್ನ ಹೆಗಲ ಮೇಲೆ ಕೈ ಹಾಕುತ್ತಾರೆ ಎಂದರೆ ಯಾವ ಲೆವೆಲ್‌ಗೆ ಭಯ ಆಗಿರಬೇಕು” ಎಂದರು.

ಪೊಲೀಸ್ ಮುಧುರಾಜ್ ಹನಿಟ್ರ್ಯಾಪ್ ಫೋಟೋ

“ಸೆಷನ್‌ನಲ್ಲಿ ತಿಕ್ಕಲು ತಿಕ್ಕಲತರ ತರ ಕೂಗಾಡೋದು, ಪ್ರಮಾಣ ಮಾಡುವುದಲ್ಲ. ಜನಗಳ ದಿಕ್ಕು ತಪ್ಪಿಸುವ ಕೆಲಸವನ್ನ ಮುನಿರತ್ನ ಮಾಡುತ್ತಿದ್ದಾನೆ. ಸೆಷನ್ ಒಳಗಡೆ ಅವಳು ಯಾವಳೋ ಅಂತ ಕೂಗಾಡುತ್ತಾನೆ. ನಮ್ಮ ಮಕ್ಕಳ ಮೇಲೆ ಲಾರಿ ಹತ್ತಿಸ್ತೀನಿ, ಎಚ್‌ಐವಿ ಇಂಜೆಕ್ಷನ್ ಕೊಡಿಸ್ತೀನಿ ಅಂತ ಇಷ್ಟು ದಿನ ನನ್ನ ಜೀವನ ನರಕಯಾತನೆ ಮಾಡಿದ್ದಾನೆ. ಈಗಲೂ ಮುನಿರತ್ನ ಹತ್ರ ಎಲ್ಲಾ ಆಡಿಯೋ ವಿಡಿಯೋ ಸಾಕ್ಷಿ ಇದೆ. ಆ ಫೋನ್‌ನಲ್ಲಿ ಎಲ್ಲಾ ಹಿಸ್ಟರಿ ಸಿಗುತ್ತೆ. ಬಹಳಷ್ಟು ಜನ ಇನ್ ಸ್ಪೆಕ್ಟರ್ ಹನಿಟ್ರ್ಯಾಪ್ ಮಾಡಿಸಿದ್ದಾನೆ” ಎಂದು ಹೇಳಿದರು.

“ಎಚ್‌ಐವಿ ಹಬ್ಬಿಸಿ ಜೈಲಿಗೆ ಹೋಗಿದ್ದ ಕ್ರೂರ ಮೃಗ ಅಂದರೆ, ಅದು ಈ ಹಲ್ಕಾ ಮುನಿರತ್ನ ಒಬ್ಬನೇ. ಇವನಿಗೆ ಕಾಮಿಸ್ಟ್ ಮುನಿರತ್ನ, ಕಾಮಿಸ್ಟ್ ಸ್ಟಾರ್ ಎಂದು ಬಿರುದು ಕೊಡಬೇಕು. ಉಮೇಶ್ ರೆಡ್ಡಿಗಿಂತ ಕೀಳು ಮಟ್ಟದವನು ಇವನು. ನನಗೆ ನ್ಯಾಯ ಸಿಗೋವರೆಗೂ ನಾನು ಹೋರಾಟ ಮಾಡುತ್ತೇನೆ” ಎಂದು ಹೇಳಿದರು.

 ಹನಿಟ್ರ್ಯಾಪ್ ಲಗ್ಗೆರೆ ನಾರಾಯಣಸ್ವಾಮಿ ಮಾತನಾಡಿ, “ಕೀಳುಮಟ್ಟದ ವ್ಯಕ್ತಿತ್ವದ ಮುನಿರತ್ನ ಜೊತೆ ಕೆಲವು ನಾಯಕರು ಬೆಳಗಾವಿ ಅಧಿವೇಶನದಲ್ಲಿ ರಾಜಿಯಾಗುತ್ತಾರೆ ಎಂದರೆ ಎಂತಹ ಕೆಟ್ಟ ರಾಜಕೀಯ ಪರಿಸ್ಥಿತಿ ರಾಜ್ಯದಲ್ಲಿದೆ. ಪಾಲಿಕೆ ಸದಸ್ಯರು, ಶಾಸಕರು, ಪೊಲೀಸ್ ಅಧಿಕಾರಿಗಳ ವಿರುದ್ದ ಮುನಿರತ್ನ ಹನಿಟ್ರ್ಯಾಪ್ ಮಾಡಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಮುನಿರತ್ನ ವಿರುದ್ಧ ನೂರಾರು ಪ್ರಕರಣಗಳಿವೆ” ಎಂದು ಹೇಳಿದ್ದಾರೆ.

“ಕಾನೂನು ಮುನಿರತ್ನನಿಗೆ ಆನ್ವಯವಾಗುವುದಿಲ್ಲವೇ. ನಮಗೆ ಮುನಿರತ್ನನಿಂದ ಜೀವಭಯವಿದೆ. ಮುನಿರತ್ನಗೆ ಸರ್ಕಾರದಿಂದ ರಕ್ಷಣೆ ಕೊಡುತ್ತಾರೆ. ನಮಗೆ ರಕ್ಷಣೆ ಕೊಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಹಾಡ್‌ ಸತ್ಯಾಗ್ರಹ; ಬೌದ್ಧಿಕ ಬದ್ದತೆ ತೋರಿದ್ದ ಅಂಬೇಡ್ಕರ್ : ಬರಗೂರು ಬಣ್ಣನೆ

ವೇಲುನಾಯಕರ್ ಮಾತನಾಡಿ, “ಖಾಸಗಿ ವಿಚಾರಗಳನ್ನು ಇಟ್ಟುಕೊಂಡು ಬಜೆಟ್ ಅಧಿವೇಶನವನ್ನು ಹಾಳು ಮಾಡುತ್ತಿದ್ದಾರೆ. ಮುನಿರತ್ನಗೆ ಧೈರ್ಯವಿದ್ದರೆ ಪೊಲೀಸ್ ಠಾಣೆಗೆ ದೂರು ಕೊಡಲಿ ಅಥವಾ ನಮ್ಮ ಜೊತೆ ನೇರವಾಗಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಮಾತನಾಡಲಿ. ಹನಿಟ್ರ್ಯಾಪ್ ಪಿತಾಮಹ ಮುನಿರತ್ನ ವಿರುದ್ಧ ಗೃಹ ಮಂತ್ರಿಗಳಿಗೆ ದೂರು ನೀಡಲಾಗುವುದು. ಹನಿಟ್ರ್ಯಾಪ್‌ಗೆ ಬಳಿಸಿದ ಸ್ಪೂಡಿಯೋ ಕುರಿತು ತನಿಖೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

“ನಾನು 15 ವರ್ಷ ಮುನಿರತ್ನ ಜೊತೆಯಲ್ಲಿದೆ. ಕೋಲಾರ ಚುನಾವಣೆಯಲ್ಲಿ ಸ್ಪರ್ಧಿಸಲು ಹೋದಾಗ, ನನ್ನ ಮೇಲೆಯೇ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದರು” ಎಂದು ಆರೋಪಿಸಿದ್ದಾರೆ.

“ವಿಧಾನಸೌಧದಲ್ಲಿ ನಾನು ರೇಪ್ ಮಾಡಿಲ್ಲ. ಪೀಣ್ಯದಲ್ಲಿ ನಾನು ಸ್ಲಂ ಕೆಡವಿಲ್ಲ, ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ ಎಂದು ಹೇಳುತ್ತಾರೆ. ದೇವರ ಫೋಟೋ ತಂದಿದ್ದೀನಿ ಎಂದು ಹೇಳುತ್ತಾರೆ. ಡಿಕೆ ಶಿವಕುಮಾರ್ ಅವರು ಇವನು ಈ ಅನಾಚಾರಗಳು ಮಾಡುವಾಗ ಇವನ ಪಕ್ಕದಲ್ಲಿ ಇದ್ದರಾ? ಡಿ ಕೆ ಶಿವಕುಮಾರ್‌ಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಅವರು ಯಾಕೆ ಪ್ರಮಾಣ ಮಾಡಬೇಕು” ಎಂದು ಕೇಳಿದರು.

ಪೊಲೀಸ್ ಮುಧುರಾಜ್ ಹನಿಟ್ರ್ಯಾಪ್ “ಕಳೆದ ಒಂದು ವರ್ಷದಿಂದ ನನಗೆ ಜೀವ ಬೆದರಿಕೆಗಳು ಬರುತ್ತಿವೆ. ಮುನಿರತ್ನನ ಹಿನ್ನೆಲೆ ನನಗೆ ಗೊತ್ತು. ನಾನು ಈ ಬಗ್ಗೆ ಕಂಪ್ಲೇಟ್ ಕೊಟ್ಟಿದ್ದೀನಿ. ಆದರೆ, ಇಲ್ಲಿಯವರೆಗೂ ನನಗೆ ಯಾವುದೇ ರಕ್ಷಣೆ ಸಿಕ್ಕಿಲ್ಲ” ಎಂದರು.

“ಮುನಿರತ್ನ ವ್ಯಾಪ್ತಿಯಲ್ಲಿ ಅಂದರೆ ಆರ್ ಆರ್ ನಗರದಲ್ಲಿ ಬರುವ ಎಲ್ಲ ಎಲ್ಲ ಪೊಲೀಸರು ಸುಳ್ಳು ಕೇಸ್ ಹಾಕಬೇಕು. ಕೆಲವರು ಸುಳ್ಳು ಹಾಕಿದ್ದಾರೆ. ಇನ್ನು ಕೆಲವರು ಹಾಕಲ್ಲ ಅಂದಿದ್ದಕ್ಕೆ ಅವರ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದಾನೆ” ಎಂದರು.

“ಮುನಿರತ್ನ ವಿಧಾನಸೌಧದಲ್ಲಿ ಪ್ರಜಾಪ್ರತಿನಿಧಿಯಾಗಿ ಕುಳಿತುಕೊಳ್ಳುವುದಕ್ಕೆ ಆತನಿಗೆ ಅರ್ಹತೆ ಇಲ್ಲ. ಆತನ ಮೇಲೆ ಅತ್ಯಾಚಾರ ಕೇಸ್ ಇದೆ. ಒಬ್ಬ ಗುತ್ತಿಗೆದಾರ ಬಳಿ 30 ಲಕ್ಷ ಲಂಚ ಕೇಳಿ ಅವರ ಮನೆ ಹೆಣ್ಣುಮಕ್ಕಳನ್ನ ಹೆಂಡತಿ, ತಾಯಿಯನ್ನ ಮಂಚಕ್ಕೆ ಕರೆಯುತ್ತಾನೆ. ದಲಿತರ ನಿಂದನೆ ಮಾಡುತ್ತಾನೆ. ಹೊಲಿಯ, ಮಾದಿಗ ಎಂದೆನ್ನುತ್ತಾನೆ. ಇಂತಹ ನೀಚ ವ್ಯಕ್ತಿಯನ್ನ ನಿಮ್ಮ ಪಾರ್ಟಿಯಲ್ಲಿ ಇಟ್ಟುಕೊಂಡರೇ ಇಡೀ ದೇಶ ಮಾತಾಡುತ್ತದೆ. ಆತನೊಂದಿಗೆ ನೀವು ಇನ್ನೂ ಕುಳಿತುಕೊಂಡು ಹೆಗಲ ಮೇಲೆ ಕೈ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಕೂಡಲೇ ಆತನನ್ನ ಪಕ್ಷದಿಂದ ಅಮಾನತು ಮಾಡಿ” ಎಂದರು.

ಮುನಿರತ್ನ

“ಮುನಿರತ್ನ ಖಾಸಗಿ ವಿಚಾರ ಮಾತಾಡುವುದಕ್ಕೆ ಅಲ್ಲ ವಿಧಾನಸೌಧ ಇರುವುದು. ಮುನಿರತ್ನ ಕರ್ಮಕಾಂಡ ನೋಡಿ ತಡೆಯೋದಕ್ಕೆ ಆಗದೇ, ನಾಗೇಶ ಎಂಬಾತ ಮುನಿರತ್ನನ ಸಂಗ ಮತ್ತು ಪಕ್ಷ ಬಿಡುತ್ತಾನೆ. ಆತ ಹೊರಗಡೆ ಹೋದ ಕಾರಣಕ್ಕೆ, ಮುನಿರತ್ನ ತನ್ನ ರೌಡಿಗಳ ಜತೆಗೆ ಹೋಗಿ ನಾಗೇಶ್ ಇರುವ ಸ್ಲಂ ಮನೆಗಳನ್ನ ಒಡೆದು ಹಾಕಿದ್ದಾನೆ. ಇದನ್ನ ನಾನು ಮಾಡಿಲ್ಲ, ಬಿಬಿಎಂಪಿ ಮಾಡಿದೆ ಎಂದು ಮುನಿರತ್ನ ಆರೋಪ ಮಾಡುತ್ತಾನೆ. ಆದರೆ, ಬಿಬಿಎಂಪಿ ಈ ಕೆಲಸ ಮಾಡಿಲ್ಲ ಎಂದು ಲೆಟರ್ ಕೊಟ್ಟಿದೆ ಎಂದು ಹೇಳಿದ್ದಾರೆ.

ಪೀಣ್ಯದಲ್ಲಿ ಮನೆ ಕಳೆದುಕೊಂಡ ಮಹಿಳೆ ಮಾತನಾಡಿ, “ಬೆಳಿಗ್ಗೆ ಮುನಿರತ್ನ ಬಂದು ಏಕಾಏಕಿ ಮನೆ ಕೆಡವಿದರು. ಬಾಯಿಗೆ ಬಂದ ಹಾಗೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು. ಕೈ ಮುಗಿದು ಕಾಲು ಮಗಿಯೋಕೆ ಹೋದಾಗ ಕಾಲಿನಿಂದ ಒದ್ದರು. ನೀನು ಓಟು ಹಾಕೋದು ಕಾಂಗ್ರೆಸ್‌ಗೆ ಇಲ್ಲಿ ನನ್ನ ಕಾಲು ಹಿಡಿಯೋಕೆ ಬಂದಿದ್ದೀಯಾ ಎಂದು ಕತ್ತು ಹಿಡಿದು ತಳ್ಳಿದರು. ನಾವು ದುಡಿದುಕೊಂಡು ತಿನ್ನುವವರು. ನಮಗೆ ಈ ರೀತಿಯ ಕಷ್ಟ ಕೊಡುತ್ತಿದ್ದಾರೆ. ನಾವು ಏನು ಅನ್ಯಾಯ ಮಾಡಿದ್ದೀವಿ. ನಮಗೆ ಈ ರೀತಿ ನೋವು ಕೊಟ್ಟರು. ಜೆಸಿಬಿ ತಂದು ಮನೆ ಕೆಡವಿದರು. ಯಾವ ಬಿಬಿಎಂಪಿ ಅಧಿಕಾರಿಗಳು ಬಂದಿರಲಿಲ್ಲ. ಮುನಿರತ್ನ ಅವರೇ ಬಂದಿದ್ದರು” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X