ಕೊಡಗು ಒಂದೇ ನಾಣ್ಯದ ಎರೆಡು ಮುಖವಿದ್ದಂತೆ. ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ. ಒಂದು ಮುಖ ಐಷಾರಾಮಿ ಜೀವನ ನಡೆಸುವ ಸಿರಿವಂತರದ್ದು. ಇನ್ನೊಂದು ಮುಖ ಬಡತನದಲ್ಲೇ ಬೆಂದೆದ್ದ ಶೋಷಿತ ಸಮುದಾಯದ್ದು. ಆದಿವಾಸಿಗಳು, ದಲಿತರು, ಮಧ್ಯಮ ವರ್ಗದ ಧಮನಿತರು ಸದ್ದಿಲ್ಲದೆ ಅಡಗಿ ಹೋದ ಕಥಾನಕ.ಪ್ರಕೃತಿಯ ಸೌಂದರ್ಯದ ಕರಾಳ ಕರಿ ನೆರಳ ಸೊಬಗಲ್ಲೇ ಮಾಸಿ ಹೋದ ಛಾಯೆ.
ಪ್ರಕೃತಿ ಸೊಬಗಿನಿಂದಾಗಿ ಪ್ರವಾಸಿಗರಿಗೆ ಕರ್ನಾಟಕದ ಕಾಶ್ಮೀರ,ಪ್ರವಾಸಿಗರ ಸ್ವರ್ಗವಾದ ಕೊಡಗು ಬಡವರಿಗೆ ನಿಜಕ್ಕೂ ನರಕ ಸದೃಶ್ಯ. ನೋಡುಗರಿಗೆ ಸುಂದರ, ಅತಿ ಸುಂದರ, ಮನೋಹರ, ರಮಣೀಯ ಪ್ರಕೃತಿಯ ಒಡಲು. ಅದೇ ದುಡಿಯುವ ಕೈಗಳಿಗೆ ದಾಸ್ಯದ ಸಂಕೋಲೆ. ಹುಟ್ಟಿದಿಲ್ಲಿ, ಬದುಕಿದ್ದಿಲ್ಲಿ, ನನ್ನದು ಎನ್ನಲು ಏನಿಲ್ಲ ಇಲ್ಲಿ ಅನ್ನುವಂತಹ ಬದುಕು.ಆಳುಗಳಾಗಿ ದುಡಿಯುವ ವರ್ಗಕ್ಕೆ ಏನಿರದ ಬದುಕು. ದುಡಿಮೆಯೊಂದೇ ಕೂಳಿಗೆ ಆಸರೆ.
‘ ಕೊಡಗಿನ ಸೊಬಗು, ಕೊಡಗಿನ ಆಚಾರ,ವಿಚಾರ ಎಲ್ಲರಿಗೂ ಬಹು ಮೆಚ್ಚುಗೆಯ ವಿಚಾರ.ಕೇರಳ ರಾಜ್ಯದ ಪ್ರಭಾವ ಹೊಂದಿರುವ ಅತಿ ಹೆಚ್ಚು ಭೂ ಭಾಗ ವನ್ಯ ಸಿರಿಯಿಂದ ಕೂಡಿರುವ ಪ್ರಕೃತಿಯ ತಾಣ.ಎಲ್ಲಿ ನೋಡಿದರು ಅರಣ್ಯ ಸಂಪತ್ತು,ವನ ಮೃಗಗಳ ಐಸಿರಿ. ಸಾಗಿದಲ್ಲೆಲ್ಲ ಘಮ್ಮೆನ್ನುವ ಕಾಫಿ ತೋಟಗಳು, ಕಣ್ಮನ ಸೆಳೆಯುವ ನಾಡು. ಕೊಡಗು ಕಣ್ಣಿಗೆ ಕಾಣುವಂತೆ ಅದರ ನೋಟ ಎಲ್ಲವು ಚೆನ್ನ,ಇಲ್ಲಿ ಕಷ್ಟವೇ ಇಲ್ಲವೇನೋ ಎನ್ನುವಂತೆ ಕಾಣುವ ಕನ್ನಡಿಯ ಗಂಟು.ನೋಡುಗರಿಗೆ ಇಲ್ಲಿಯ ನೋಟ, ಆನಂದ ತರುತ್ತದೆ. ಸೊಬಗನ್ನ ಅನುಭವಿಸುತ್ತಾರೆ ಹೊರತು ಬೇರೆಯ ಚಿಂತೆ,ಇಲ್ಲಿನ ನೈಜ ಚಿತ್ರಣ ಕಾಣಲು ಸಾಧ್ಯವಾಗಲ್ಲ ‘.

ಅದೆಲ್ಲವೂ, ” ಒಳ ಹೊಕ್ಕರೆ ಮಾತ್ರ ತಿಳಿಯಲು ಸಾಧ್ಯ. ಅಷ್ಟು ಸುಲಭವಿಲ್ಲ,ಕಾಫಿ ತೋಟಗಳ ಒಳಗೆ ‘ ಲೈನ್ ಮನೆ’ ಜೀತ ಮಾಡುವ ಕುಟುಂಬಗಳ ಕಷ್ಟ ಅರಿಯುವುದು, ಸಮಾಜದ ಗೊಡವೆಯೇ ಇಲ್ಲದೆ ಬದುಕು ಸವಿಸುತ್ತಿರುವ ಗಾಣದ ಎತ್ತುಗಳು ಬೆಳಗ್ಗೆಯಿಂದ ಸಂಜೆವರೆಗೆ ಸಮಯದ ಮಿತಿ ಇರದೆ ದುಡಿಯುವ ಜನ. ಇಡೀ ಕುಟುಂಬವೇ ದಾಸ್ಯದಿಂದ ಬದುಕುವ ಕೆಟ್ಟ ವ್ಯವಸ್ಥೆ ಕೊಡಗಿನದ್ದು. ಇಲ್ಲೇ ಹುಟ್ಟಿ, ಬೆಳೆದ ಆದಿವಾಸಿ,ಬುಡಕಟ್ಟು, ದಲಿತ,ಶೋಷಿತ ವರ್ಗಗಳು ಭೂ ಮಾಲೀಕರ ಕಪಿ ಮುಷ್ಠಿಯ ಬಲಿ ಪಶುಗಳು. ಹಿಂದೆಯೆಲ್ಲ 125 ರೂಪಾಯಿಗೆ ಬೆಳಗ್ಗೆಯಿಂದ ಸಂಜೆವರೆಗೆ ದುಡಿಯಬೇಕಿತ್ತು.ಈಗ 250 ರೂಪಾಯಿಗೆ ದುಡಿಮೆ.ಇಂಥದ್ದೇ ಕೆಲಸ ಅನ್ನುವಂತಿಲ್ಲ. ಹೇಳಿದ್ದೆಲ್ಲ ಮಾಡಲೇಬೇಕು “.
” ನಾಯಿ ತೊಳೆದು,ಹೇಸಿಗೆ ಬಾಚುವುದರಿಂದ ಹಿಡಿದು, ಮನೆ ಕಸ ತೆಗೆದು, ಕಾಫಿ ತೋಟದ ಕೆಲಸ,ಕಚಡ ತೆಗೆವುದು, ಕಪತ್ತು, ಗದ್ದೆ ಕೆಲಸ, ಧನ ಕರ ಮೇಯಿಸುವುದು ಹೀಗೆ ಒಂದಲ್ಲ ಎರೆಡಲ್ಲ ಎಲ್ಲ ಕೆಲಸ ಮಾಡ್ಬೇಕು. ನಾವು ಸಂತೆಯಲ್ಲಿ ಕೋಳಿ, ಕುರಿ,ಹಂದಿ ಕೊಳ್ಳುತ್ತೀವಿ. ಅಂತೆಯೇ, ಹಿಂದೆ ಲೈನ್ ಮನೆ ಜೀತಕ್ಕೆ ಜನರನ್ನು ಸಂತೆಯಲ್ಲಿ ಕೊಳ್ಳುವ ವಿಧಾನವಿತ್ತಂತೆ. ಈಗ ಬದಲಾಗಿ ಚೀಟಿ ವ್ಯವಸ್ಥೆ ಇದೇ. ಸಾಹುಕಾರರ ಲೆಕ್ಕಾಚಾರ. ಕುಟುಂಬದಲ್ಲಿ ಗಂಡ,ಇಲ್ಲ ಹೆಂಡತಿ ಕೆಲಸ ಮಾಡ್ತೀವಿ ಅನ್ನುವಂತಿಲ್ಲ.’ ಲೈನ್ ಮನೆ ‘ ಒಂದು ರೀತಿಯ ಜೈಲು. ಅಲ್ಲಿರಬೇಕು ಅಂದ್ರೆ ಆ ಮನೆಯ ಮಕ್ಕಳಿಂದ ಹಿಡಿದು ಎಲ್ಲರೂ ಭೂ ಮಾಲಿಕರ ಅಣತಿಯಂತೆ ಗೆಯ್ಯಬೇಕು. ಹುಷಾರಿಲ್ಲ,ವಿಶ್ರಾಂತಿ ಬೇಕು.ಇನ್ನೇನೋ ಕಾರಣಗಳು ಹೇಳುವಂತೆ ಇಲ್ಲ.ದುಡಿಯುವುದೊಂದೇ ಇರುವ ಮಾರ್ಗ “.

‘ ಲೈನ್ ಮನೆ ‘ ಕಿರುಕುಳ ಎಷ್ಟರ ಮಟ್ಟಿಗೆ ಅಂದ್ರೆ ಅವರ ಆಧಾರ್,ರೇಷನ್ ಕಾರ್ಡ್,ವೋಟರ್ ಐಡಿ ಎಲ್ಲವನ್ನೂ ಭೂ ಮಾಲೀಕರು ಕಿತ್ತುಕೊಂಡಿರುತ್ತಾರೆ.ಅಷ್ಟೋ ಇಷ್ಟೋ ಸಾಲ ಕೊಟ್ಟು.ಅದನ್ನ ಒಂದು ಪುಸ್ತಕದಲ್ಲಿ ಬರೆದು ಸಾಲಕ್ಕೆ ಸಾಲ.ಕೊಟ್ಟ ಸಾಲಕ್ಕೆ ದಿನ ದುಡಿಮೆಯ ಹಣ ಜಮಾ ಮಾಡಿಕೊಳ್ಳುವುದು.ಅದು ಯಾವುದೇ ಕಾರಣಕ್ಕೂ ಮುಗಿಯಲ್ಲ.ಕೊಟ್ಟ ಹಣಕ್ಕಿಂತ ಬೆಟ್ಟದಂತೆ ಬೆಳೆದಿರುತ್ತದೆ ಹೊರತು, ಏನಾದರೂ ಕೇಳಿದರೆ ಹೆದರಿಸಿ, ಬೆದರಿಸಿ ದುಡ್ಡು ಕೊಟ್ಟು ಆಚೆ ದಾಟು ಅನ್ನುವ ಮೃಗಗಳ ಜತೆ ಬದುಕು .
” ಅಲ್ಪ ಸ್ವಲ್ಪ ಹಣಕ್ಕೆ ಇಡೀ ಜೀವನ ಭೂ ಮಾಲಿಕರ ಅಡಿಯಾಳಾಗಿ ದುಡಿಯಬೇಕು ಅದುವೇ ಮನೆ, ಮಂದಿಯಾದಿಯಾಗಿ. ಯಾವುದೇ ಕಾರಣಕ್ಕೂ ಭೂ ಮಾಲಿಕರ ಒಪ್ಪಿಗೆ ಇರದೆ ಹೊರಗೆ ಹೋಗುವಂತಿಲ್ಲ. ಕಾಫಿ ತೋಟದ ಲೈನ್ ಮನೆಗೆ ಯಾರು ಬರುವಂತೆ ಇಲ್ಲ. ಸಂಬಂಧಿಕರು,ಸ್ನೇಹಿತರು ಯಾರೆ ಆಗಲಿ ಬರುವಂತೆ ಇಲ್ಲವೇ ಇಲ್ಲ.ಮನೆಯಲ್ಲಿ ಟಿವಿ,ಎಲೆಕ್ಟ್ರಿಕ್ ವಸ್ತುಗಳ ಬಳಕೆ ನಿಷಿದ್ದ. ಭೂ ಮಾಲೀಕರ ಮುಂದೆ ಒಳ್ಳೆ ಬಟ್ಟೆ ಹಾಕುವಂತಿಲ್ಲ. ಹಬ್ಬ ಹರಿದಿನ ಮಾಡುವಂತಿಲ್ಲ.

” ಏನಿದ್ದರೂ ಬೆಳಗ್ಗೆಯಿಂದ ಸಂಜೆಯವರೆಗೆ ಕತ್ತೆಯಂತೆ ದುಡಿಯಬೇಕು.ಹೊಟ್ಟೆ ತುಂಬಾ ಹೆಂಡ ಕುಡಿದು ಮಲಗಬೇಕು.ಮತ್ತೆ, ಬೆಳಗಾದರೆ ಕೆಲಸಕ್ಕೆ ಹೋಗಬೇಕು ಇದೆ ನರಕದ ‘ ಲೈನ್ ಮನೆ ‘ ಜೀತ.ಕೆಲಸಕ್ಕೆ ಹೋದರೆ ಒಂದು ಲೋಟ ಕಾಫಿ, ಒಂದು ಕಡಿ ಕೊಟ್ಟರೆ ಅದೇ ಹೆಚ್ಚು.ಹಸಿವಿನಿಂದಲೇ ದುಡಿಯಬೇಕು.ಪ್ರಶ್ನೆ ಮಾಡುವಂತಿಲ್ಲ.ಮಾತೆತ್ತಿದರೆ,ಗುಂಡಾಗ್ತೀನಿ ಅನ್ನುವ ಬೆದರಿಕೆ.ಕೋವಿ ಹಿಡಿದು ಹೆದರಿಸುವ ವ್ಯಕ್ತಿತ್ವಗಳು. ಹೊತ್ತು ಊಟ ಹಾಕಿದ ಉದಾಹರಣೆಯೇ ಇಲ್ಲ “.
” ಲೈನ್ ಮನೆ ನರಕ ಇಲ್ಲಿಗೆ ಕೊನೆಯಾಗುವುದಿಲ್ಲ ಮಕ್ಕಳಿಗೆ ಶಿಕ್ಷಣ ಇರಲ್ಲ.ಅವರೇನಿದ್ದರು ಅಲ್ಲಿಯೇ ಗೆಯ್ಯಬೇಕು,ಇವರ ನಂತರ ಪರಂಪರೆ ಮುಂದುವರೆಯಬೇಕು.ಇವರಾದ ಮೇಲೆ ಅವರು, ಅವರಾದ ಮೇಲೆ ಇವರು ಅನ್ನುವಂತೆ ದುಡಿಯುವುದೆ ಬದುಕು. ಹೆಣ್ಣು ಮಕ್ಕಳ ಮದುವೆ, ಮುಂಜಿ ಗೊತ್ತಾಗುವುದೇ ಇಲ್ಲ.ಬೆಳೆದ ಹೆಣ್ಣು ಚಿಕ್ಕ ವಯಸ್ಸಿಗೇ ಸಂಸಾರ. ಅನೈತಿಕವಾಗಿ ಬಳಕೆ ಇದು ಕೊಡಗಿನ ಕರಾಳ ಮುಖ “.

” ಹೆಣ್ಣು ಕೊಡಗಿನಲ್ಲಿ ಅನುಭವಿಸುವಸ್ಟು ದೌರ್ಜನ್ಯ, ಮತ್ತೆಲ್ಲಿಯೂ ಅನುಭವಿಸಲು ಸಾಧ್ಯವೇ ಇಲ್ಲ.ಹೆಣ್ಣಿಗೆ ನ್ಯಾಯ ಹೋಗಲಿ ಉಸಿರು ಸಹ ಬಿಡುವಂತೆ ಇಲ್ಲ.ಏನು ನಡೆದರು,ಎಂಥದ್ದೇ ನಡೆದರು ಯಾರಿಗೂ ತಿಳಿಯುವುದಿಲ್ಲ. ಇತ್ಲಾಗಿ ಆ ಹೆಣ್ಣು ಮಗಳು ಸಹ ಹೇಳಿಕೊಳ್ಳುವುದಿಲ್ಲ. ಭಯದ ಬದುಕು,ಲೈನ್ ಮನೆಯಿಂದ ಹೊರಗೆ ಹಾಕಿದ್ರೆ ಎಲ್ಲಿಗೆ ಹೋಗಬೇಕು, ಯಾರು ಕೆಲಸ ಕೊಡುತ್ತಾರೆ.ಕೂಲಿ ಮಾಡಲು ಬಿಡಲ್ಲ,ಇರಲು ಜಾಗ ಕೊಡಲ್ಲ ಅನ್ನುವ ಭಯದಿಂದ ದಾಸ್ಯತನ “.
ಒಂದೇ ಒಂದು ಹೆಣ್ಣು ಮಗಳು ಒಳ್ಳೆಯ ಜೀವನ ಕಟ್ಟಿಕೊಂಡ ಉದಾಹರಣೆ ಇಲ್ಲ. ಉತ್ತಮವಾದ ವಿಧ್ಯಾಭ್ಯಾಸ, ನೌಕರಿ, ಮದುವೆ ಇದೆಲ್ಲವೂ ಮರೀಚಿಕೆ ಇದ್ದಂತೆ ಅಲ್ಲೊಂದು, ಇಲ್ಲೊಂದು ಅಷ್ಟೇ ಇನ್ನೆಲ್ಲ ನೀರಿಂದ ಕುದಿಯುವ ಬಾಂಡಲಿಗೆ ಬಿದ್ದಂತೆ ಜೀವನ,ಯವ್ವನ ಅಲ್ಲೇ ಕಳೆದು ಹೋಗಿರುತ್ತೆ.ಅದೇ ಕೆಟ್ಟ ವ್ಯವಸ್ಥೆಗೆ ಹೊಂದಿಕೊಂಡು ಜೀವನ ಸಾಗಿಸುವ ಬಗೆ.

ಭೂ ಮಾಲೀಕರ ಹತ್ರ ಒಂದೈವತ್ತು ಸಾವಿರ ಸಾಲ ಪಡೆದರೆ ಅದು ಏನಿಲ್ಲ ಅಂದ್ರು ಒಂದೆರೆಡು ಲಕ್ಷ ರೂಪಾಯಿ ಲೆಕ್ಕಕ್ಕೆ ಹೋಗಿರುತ್ತೆ. ಇಡೀ ಕುಟುಂಬವೇ ಸಾಲಗಾರರು. ಇದು ತೀರಲ್ಲ, ತೀರುವವರೆಗೆ ಹೊರ ಹೋಗುವಂತೆ ಇಲ್ಲ. ಕ್ರಮೇಣ ಅಲ್ಲಿಯೇ ಖಾಯಂ. ಯಾವೊಬ್ಬ ಭೂ ಮಾಲೀಕನ ನಿಷ್ಟೂರ ಕಟ್ಟಿ ಕೊಳ್ಳಲು ಸಾಧ್ಯವೇ ಇಲ್ಲ.
ಹಾಗೇನಾದರೂ ಪ್ರಶ್ನೆ ಮಾಡಿದ್ರೆ ,ಕಾಫಿ ತೋಟ ತೊರೆಯಲು ಮುಂದಾದ ಅಂದರೆ ಕಾಫಿ ಕದ್ದ,ಮೆಣಸು ಕದ್ದ ಅಂತೇಳಿ ಸುಖಾ ಸುಮ್ಮನೆ ಹೊಡೆದು ಆರೋಪ ಹೊರಿಸಿ ಆಚೆ ಹಾಕುವುದು.ಕೂಡಲೇ ಈ ವಿಷಯ ಎಲ್ಲ ತೋಟಗಳ ಭೂ ಮಾಲೀಕರಿಗೆ ತಿಳಿಯುವಂತೆ ಮಾಡುವುದು.ಬೇರೆಲ್ಲೇ ಹೋದರು ಇದೇ ಆರೋಪ ಗುರಿಯಾಗಿಸಿ ಕೂಲಿ,ಜಾಗ ಸಿಗದಂತೆ ಮಾಡಿ ಕೊನೆಗೆ ಭೂ ಮಾಲಿಕನ ಕಾಲಿಗೆ ಬಿದ್ದು,ಕ್ಷಮೆ ಕೋರಿ ಅಲ್ಲಿಯೇ ಜೀತ ಮಾಡಿಕೊಂಡು ಇರುವಂತೆ ಮಾಡುವ ವ್ಯವಸ್ಥಿತ ಷಡ್ಯಂತರ.

” ವಯಸ್ಸು ಇರಿವತನಕ ಕೂಲಿ, ಕಂಬಳ ಮುದಿತನಕ್ಕೆ ಆಸರೆಯು ಇಲ್ಲ, ಕೆಲಸವೂ ಇಲ್ಲ ಆಚೆ ದಾಟು ಅನ್ನುವ ನಿಕೃಷ್ಟತೆಯೇ ‘ಲೈನ್ ಮನೆ ‘ ಜೀತ. ಶಕ್ತಿ, ಶ್ರಮವನ್ನ ಹೀರಿ ಹಿಪ್ಪೆ ಮಾಡುವ ಭೂ ಮಾಲೀಕರು ಕೆಲಸಕ್ಕೆ ಬಾರದ ಪರಿಸ್ಥಿತಿ, ಅನಾರೋಗ್ಯ ತಲುಪಿದರೆ ಕೂಡಲೇ ತೋಟದಿಂದ ಆಚೆ ಹಾಕುತ್ತಾರೆ. ಇಡೀ ಜೀವನ ಜೀತ ಮಾಡಿಕೊಂಡಿದ್ದ ಕುಟುಂಬ ಆಚೆ ಬಂದರೆ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ದುಬಾರಿ ಬಾಡಿಗೆ ಕೊಟ್ಟು ಮನೆ ಮಾಡುವುದಾ? ಜೀವನ ನಿರ್ವಹಣೆ ಹೇಗೆ? ಕೆಲಸ ಯಾರು ಕೊಡ್ತಾರೆ? ಹೀಗೆ ಚಿಂತೆಯಲ್ಲೇ ಇಡೀ ಬದುಕೇ ವ್ಯಥೆಯಾಗಿ ಪರಿಣಮಿಸುತ್ತೆ “.

ಇಂತಹ ಕೆಟ್ಟ ಸ್ಥಿತಿ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಕೊಡಗಿನ ಪರಿಸರದಿಂದ ಆಚೆ ಬಂದು ಬದುಕುವುದು ಇಲ್ಲ.ಬದುಕು ಕಟ್ಟಿಕೊಳ್ಳಲು ಗೊತ್ತು ಇಲ್ಲ. ಅಲ್ಲೇ ಹುಟ್ಟಿ, ಅಲ್ಲಿಯೇ ಮಣ್ಣಾಗುವ ಶ್ರಮ ಜೀವಿಗಳು. ಸತ್ತರೆ ಹೂಳಲು ಜಾಗವಿಲ್ಲ. ಸತ್ತರೆ ತೋಟದ ಆಚೆ ತೆಗೆದುಕೊಂಡು ಹೋಗಬೇಕು. ಬದುಕಿದ್ದರೆ ಜೀತ ಮಾಡಿಕೊಂಡು ಇರಬೇಕು. ಹೆಣ್ಣಾಗಲಿ, ಗಂಡಾಗಲಿ ಬದುಕಬೇಕು ಅಂದರೆ ಜೀತ ಮಾಡಲೇಬೇಕು.
ಆಧುನಿಕ ಸಮಾಜದಲ್ಲಿ ಜೀತ ಪದ್ಧತಿ ಜೀವಂತವಾಗಿರುವುದು, ಭೂ ಮಾಲೀಕರ ಕಪಿ ಮುಷ್ಟಿಯಲ್ಲಿ ಜನಗಳು ಬದುಕುತ್ತಿರುವುದು ವ್ಯಾಪಕವಾಗಿ ಕೊಡಗಿನಲ್ಲಿ ಕಾಣಬಹುದು. ಯಾವುದೇ ಭದ್ರತೆ ಇಲ್ಲ. ಕೆಲವು ಕಡೆ ಇರುವ ಲೈನ್ ಮನೆಗೂ ಬಾಡಿಗೆ ಕೊಡಬೇಕು. ಮನೆ ಬೇಕು ಇಡೀ ಕುಟುಂಬ ದುಡಿಯಬೇಕು ಇದೇ ಕೊಡಗಿನ ನೈಜ ರೂಪ.

ಮಹಿಳಾ ಆಯೋಗ, ಮಕ್ಕಳ ರಕ್ಷಣಾ ಆಯೋಗ, ಮಾನವ ಹಕ್ಕುಗಳ ಆಯೋಗ ರಾಜ್ಯದಲ್ಲಿ, ದೇಶದಲ್ಲಿ ಇದ್ದಾವೆ ಹೆಸರಿಗೆ ಮಾತ್ರ. ಕೇವಲ ಫೋಟೋಗಳಿಗೆ, ಪತ್ರಿಕಾ ಹೇಳಿಕೆಗಳಿಗೆ, ಪ್ರಚಾರಕ್ಕೆ ಇದುವರೆಗೆ ಕೊಡಗಿಗೆ ಇವರ ಆಗಮನ ಇಲ್ಲ, ಇಷ್ಟೆಲ್ಲ ದೌರ್ಜನ್ಯ ನಡೆಯುತ್ತಾ ಇದ್ದರು ಭೇಟಿಯು ಇಲ್ಲ ರಕ್ಷಣೆಯು ಇಲ್ಲ.
ಹೆಣ್ಣಿಗೆ ಸುರಕ್ಷತೆ ಇಲ್ಲ, ಒಂದೇ ಒಂದು ಮನೆ, ಶೌಚಾಲಯ, ಸ್ನಾನಗೃಹ ಇಲ್ಲ, ಶಿಕ್ಷಣ ಇಲ್ಲ ಚಿಕ್ಕ ವಯಸ್ಸಿಗೆ ಮದುವೆ, ಮಕ್ಕಳು ಇಂತಹದರ ಕಡೆ ಮಹಿಳಾ ಆಯೋಗ ತಿರುಗಿಯೂ ನೋಡದೆ ಇರುವುದು ಶೋಚನಿಯ ಸಂಗತಿ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | 48 ಗ್ರಾಮ ಪಂಚಾಯ್ತಿಗಳು ಕ್ಷಯ ಮುಕ್ತ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಕೊಡಗಿನಲ್ಲಿ ಜೀವಂತವಾಗಿರುವ ‘ ಲೈನ್ ಮನೆ ‘ ಜೀತ ಕೊನೆಗಾಣುವುದೇ? ಸರ್ಕಾರ ಲಕ್ಷ್ಯ ವಹಿಸುವುದೇ? ಸ್ಥಳೀಯ ಆಡಳಿತ ಕ್ರಮ ವಹಿಸುವುದೇ? ಕಾದು ನೋಡಬೇಕು. ಈದಿನ. ಕಾಮ್ ‘ ಲೈನ್ ಮನೆ ‘ ಜೀತ ಕುರಿತಾಗಿ ಹೆಚ್ಚಿನ ಮಾಹಿತಿಯೊಡನೆ ವರದಿ ಮಾಡಲಿದೆ.

Exaggerated analysis. Show me one estate where bonded labourers exist now. The minimum wage for line labourers is 350. 90%of the article is lie..and imagination.
ಈ ಮಾತು 70% ಸತ್ಯ. ಈವಾಗ ಕಡಿಮೆ ಆಗಿದೆ. ಜನ swlpa educational ಮುಂದು ವರೆದಿದ್ದರೆ. 15 year back ಅನೇಕ ಮನೆಗಳಲ್ಲಿ ಈ ರೀತಿ ಇತ್ತು. ಎಲ್ಲರೂ ಅಷ್ಟು ಕೆಟ್ಟವರು ಇರ್ಲಿಲ್ಲ.. ಆದ್ರೆ.
ಅನೇಕ ಮನೆಗಳಲ್ಲಿ ಇತ್ತು.. ..ನಾವೇ ಕಣ್ಣಾರೆ ನೋಡಿದ್ದೇವೆ.. ಅದ್ರಿಂದ ಸತ್ಯ ಸತ್ಯನೇ ಗೊತ್ತಿಲ್ಲದೇ ಯಾರು ಈ ತರ ಬರೆದು ಹಾಕಲು ಸಾಧ್ಯನಾ
ಎಷ್ಟೊಂದು ಸುಳ್ಳು ಹೇಳುತ್ತೀರಿ.
ಸುಳ್ಳಿನ ಕಂತೆ.
How many employers give free electricity, water & accomodation to their employees?
100% ಇದೆ ಸತ್ಯ.. ಇವಾಗ ಅಸ್ಸಾಂ sorry ಅಕ್ರಮ ಬಾಂಗ್ಲಾ ವಲಸಿಗರನ್ನ ಇಟ್ಕೊಂಡು ಜೀತ ಪದ್ಧತಿ ಮಾಡ್ತಾ ಇದ್ದಾರೆ,
ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದ್ ಬಂದು ಎದೆಗೆ ಒದ್ರಂತೆ ಹಾಗಾಯ್ತು ಇಲ್ಲಿ ಕೆಲವು ಕಾಮೆಂಟ್ ಮಾಡಿದವರ ಕತೆ..
ಈ ಆರ್ಟಿಕಲ್ ತುಂಬಾ ಖುಷಿ ಅಯ್ತು ಬ್ರದರ್,, keep it up💯 we will support you 💯💯💯
ನೀವ್ ಹೇಳಿರುವ ಕಥೆ 20 ವರುಷ ಹಿಂದೆ ಇದ್ದೀರ ಬಹುದು ಈಗ ಕೆಲವೊಂದು ಕಡೆ ಇರಬಹುದು ಆದ್ರೆ ಇಡೀ ಕೊಡಗಿನ ವ್ಯವಸ್ಥೆ ಹೀಗೆ ಅಂತ ಹೇಳುವುದು ತಪ್ಪಾಗುತ್ತೆ. ಲೈನ್ ಮನೇಲಿ ಇದ್ದು ಸ್ವಂತ ಮನೆ ಕಟ್ಟಿ ಕೊಂಡು ಬದುಕು ಕಟ್ಟಿ ಕೊಂಡವರು ಎಷ್ಟು ಉದಾರಣೆ ಇದಾವೆ. ಈಗ ಲೈನ್ ಮನೇಲಿ ಇರುವರಿಗೆ ಕಾರ್ ಸ್ಕೂಟರ್ 70%ಇದೆ. ಹೆಂಡ ಚಟ ಜಾಸ್ತಿ ಇರುವವರಿಗೆ ಕೆಲಸ ಕಮ್ಮಿ ಸಾಲ ಜಾಸ್ತಿ. ಲೈನ್ ಮನೇಲಿ ಮಕ್ಕಳು ಇದ್ದರೆ ಪಕ್ಕದ ಸರಕಾರಿ ಶಾಲೆಯ ಟೀಚರ್ ಎಳೆದು ಕೊಂಡು ಹೋಗಿ ಶಾಲೆಲಿ ಕೂರಿಸಿ ಪಾಠ ಹೇಳಿ ಕೊಡುವ ವ್ಯವಸ್ಥೆ ಕೊಡಗಿನಲ್ಲಿ ಇದೆ. ಒಂದು ಮರದಲ್ಲಿ ಒಂದು ಹಣ್ಣು ಉಳುಕು ಇದ್ದರೆ ಮರವೆಲ್ಲ ಉಳುಕು ಅನ್ನಬೇಡಿ. ನೀವ್ ಆ ಜೇತ ಪದ್ದತಿ ಎಲ್ಲಿ ನೋಡಿದಿರೊ ಅಲ್ಲೇ ಖಂಡಿಸಿ ಮತ್ತು ಕಾನೂನು ಕ್ರಮಕ್ಕೆ ಮುಂದಾಗಿ ಜೀತ ಪದ್ದತಿ ನಿಲ್ಲಲಿ.
ನೀವು ಹೇಳುವ ರೀತಿಯಲ್ಲಿ ಕೊಡಗಿನಲ್ಲಿ ಪರಿಸ್ಥಿತಿ ಇಲ್ಲ ಲೈನ್ ಮನೆಯಲ್ಲಿ ವಾಸವಿದ್ದರೂ ಸಹ ದಿನವೊಂದಕ್ಕೆ 400 ರಿಂದ 450ರವರೆಗೆ ಸಂಬಳವಿರುತ್ತದೆ ಅಲ್ಲದೆ ವರ್ಷಕ್ಕೊಮ್ಮೆ ಬೋನ ಸ್ ಅಂತ ಕೊಡುತ್ತಾರೆ ಶಾಲೆಗೆ ಹೋಗುವ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುತ್ತಾರೆ. ಎಲ್ಲೋ ಒಂದು ಕಡೆ ನಡೆದಿರಬಹುದು ಅದು ಬಿಟ್ಟರೆ ಶೇಕಡ 99 ಭಾಗ ಎಲ್ಲರೂ ಚೆನ್ನಾಗಿ ಇದ್ದಾರೆ ಇನ್ನು ಕುಡಿತದ ವಿಷಯಕ್ಕೆ ಬಂದರೆ ಕೆಲವೊಂದು ವರ್ಗದ ಜನರು ಮದ್ಯಪಾನ ಮಾಡದಿದ್ದರೆ ಜೀವನವಿಲ್ಲ ಅಂತ ಕಾರ್ಮಿಕ ವರ್ಗದವರು ನಂಬಿಕೊಂಡಿದ್ದಾರೆ ಇಲ್ಲಿ ಯಾವುದೇ
ತೋಟದ ಮಾಲೀಕರು ಮಧ್ಯಪಾನ ಮಾಡಿ ಎಂದು ಹೇಳೋದಿಲ್ಲ
May be Mr Mohan a educated person but no sense of society. His plan of breaking internal relationship between workers & owners wouldn’t be successful. In kodagu who have land they became a planter who don’t they work in plantation for their livelihood, this the duty of owner to arrange line house & other things for the comfort Ness of workers, here workers are volunteers not by force workers, after plantation work they are free to go wherever they want if don’t they may stay there for further work if any against payment which is vert high, Mostly kodagu have only poor owners who have little
ancestor land only 1 % have more than 1p acres estate, kodagu people have to depend upon the plantation income for their livelihood, they have to manage everything within that meager income, but workers never bother owner’s problem. Givt least bothered about these working class & poor owners, this fellow who trying to instigate only ignite fire he can’t create any job to these workers instead trying to make money out of such disputes. Conditions of these poor owners is horrible,no help from any side, no produce if thre is no rain, no alternative arrangement available, just imagine how a family of 2+2 survive if no income, what about the children education, food,cloth. Medical exp who provide them, can you ? You a foolish fellow writing such instigative articles only to become another dirty
politician in this country. Previously many in kodagu used join Army but now that also not possible because of govt reservation policy. Don’t pretend as a saviour of poor people 2ndly the workers are not from one place they came there in the hope work from nereby states, Assam Nepal etc in search of livelihood , you don’t put stone over there efforts..
This is not at all true, even 25 years back I doubt it was existing..!
Even ladies paid Rs.500 per day that to 8:30am to 4:00 pm including 1 hr lunch & tea break. Request author send such labour to us we give them best pay
Nija bro,nivu helidu
This report is wrong. Where did you see this